ಬಜೆಟ್ 2021: ವಿತ್ತೀಯ ಕೊರತೆ ಜಿಡಿಪಿಯ 5ರಿಂದ 5.5 ಪರ್ಸೆಂಟ್ ಸಾಧ್ಯತೆ

ಆರ್ಥಿಕ ಪುನಶ್ಚೇತನಕ್ಕಾಗಿ ಸರ್ಕಾರದಿಂದ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಆ ಕಾರಣಕ್ಕೆ 2021- 22ರಲ್ಲಿ GDPಯ 3.3% ವಿತ್ತೀಯ ಕೊರತೆ ಗುರಿಯಲ್ಲಿ ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಜೆಟ್ ನಿರೀಕ್ಷೆ ವರದಿಯಲ್ಲಿ CARE ರೇಟಿಂಗ್ಸ್ ಹೇಳಿದೆ.

"2020- 21ರಲ್ಲಿ ವಿತ್ತೀಯ ಕೊರತೆ 7.8ರಿಂದ 8.4% ನಿರೀಕ್ಷೆ ಮಾಡಲಾಗಿತ್ತು. ಈ ವರ್ಷ ಅದು 5ರಿಂದ 5.5 ಪರ್ಸೆಂಟ್ ಆಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ವರ್ಷದ ಕೊನೆಗೆ ಖರ್ಚಿನ ಪ್ರಮಾಣ ಕಡಿಮೆ ಮಾಡುತ್ತಿದ್ದಂತೆ ಅದಿನ್ನೂ ಕಡಿಮೆ ಆಗಬಹುದು. ಕೊರೊನಾ ಮುಂಚಿನ ಗುರಿಯು 2022- 23ಕ್ಕೆ ಜಿಡಿಪಿಗೆ 3.1% ವಿತ್ತೀಯ ಕೊರತೆ ಇತ್ತು. ಆದರೆ ಸರ್ಕಾರದಿಂದ ಹೆಚ್ಚಿನ ವೆಚ್ಚ ಮಾಡುತ್ತಿರುವುದರಿಂದ ಆ ಗುರಿಯ ಪರಿಷ್ಕರಣೆ ಆಗಬೇಕಿದ್ದು, ಸುಸ್ಥಿರ ಆರ್ಥಿಕ ಚೇತರಿಕೆಗೆ ಅದು ಅಗತ್ಯ ಇದೆ," ಎಂದು ವರದಿ ಹೇಳಿದೆ.

ರೇಟಿಂಗ್ ಏಜೆನ್ಸಿಯ ಪ್ರಕಾರ, ಕೊರತೆಯನ್ನು ಹೇಗೆ ಸಂಭಾಳಿಸುವುದು ಎಂಬುದಕ್ಕೆ ಸುಲಭವಾದ ನಕ್ಷೆ ಮಾಡಿಕೊಳ್ಳಬೇಕಿದೆ.

ಬಜೆಟ್ 2021: ವಿತ್ತೀಯ ಕೊರತೆ ಜಿಡಿಪಿಯ 5ರಿಂದ 5.5 ಪರ್ಸೆಂಟ್ ಸಾಧ್ಯತೆ

"ವಿತ್ತೀಯ ಕೊರತೆಗೆ ಹಣಕಾಸು ಒದಗಿಸುವುದರ ಮೇಲೆ ಮಾರುಕಟ್ಟೆ ಸಾಲ ಸಂಗ್ರಹವು ನಿಂತಿದೆ. 2020- 21ಕ್ಕೆ ಸಗಟು ಮಾರುಕಟ್ಟೆ ಸಾಲವು 7.8 ಲಕ್ಷ ಕೋಟಿ ರುಪಾಯಿ ಎಂಬ ಬಜೆಟ್ ಮಾಡಿಕೊಳ್ಳಲಾಗಿತ್ತು. ಆ ನಂತರ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಅದನ್ನು ರು. 13.1 ಲಕ್ಷ ಕೋಟಿಗೆ ಪರಿಷ್ಕರಿಸಲಾಯಿತು. 2021- 22ರಲ್ಲಿ ವಿತ್ತೀಯ ಕೊರತೆ ಜಿಡಿಪಿಯ 5- 5.5%, ನಾಮಿನಲ್ ಜಿಡಿಪಿ ಬೆಳವಣಿಗೆ 15% ಮತ್ತು ಮಾರುಕಟ್ಟೆ ಸಾಲದ ಮರುಪಾವತಿ ರು. 3.1 ಲಕ್ಷ ಕೋಟಿ ಹಾಗೂ FY22ಕ್ಕೆ ಒಟ್ಟಾರೆ ಮಾರುಕಟ್ಟೆ ಸಾಲ 10.1- 11.3 ಲಕ್ಷ ಕೋಟಿ ರುಪಾಯಿ ನಿರೀಕ್ಷೆ ಮಾಡುತ್ತೇವೆ," ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.

CARE ರೇಟಿಂಗ್ಸ್ ಪ್ರಕಾರ, ಸರ್ಕಾರದ ಸೆಕ್ಯೂರಿಟೀಸ್ ಗಳ ಪ್ರತಿಫಲದ (Yields) ಮೇಲೆ ಒತ್ತಡ ಹೆಚ್ಚಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+