ಬಜೆಟ್ 2021: ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸರ್ಕಾರ ಸಿದ್ಧ

ಸಂಸತ್ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಭಾನುವಾರ ಹೇಳಿದ್ದಾರೆ.

"ಬಜೆಟ್ ಅಧಿವೇಶನದ ಮೊದಲಾರ್ಧವು ರಾಷ್ಟ್ರಪತಿಗಳ ಭಾಷಣ ಮೇಲೆ ವಂದನಾ ನಿರ್ಣಯ ಹಾಗೂ ಚರ್ಚೆಗೆ ಮೀಸಲು. ದ್ವಿತೀಯಾರ್ಧವು ಬಜೆಟ್ ಮೇಲಿನ ಚರ್ಚೆ ಹಾಗೂ ಯಾವು ತುರ್ತು ಮಸೂದೆಗೆ. ಬಾಕಿ ದ್ವಿತೀಯಾರ್ಧದ ಸೆಷನ್ ನಲ್ಲಿ ಅವರಿಗೆ ಏನು ಬೇಕೋ ಕೇಳಬಹುದು, ಸರ್ಕಾರವು ಉತ್ತರಿಸಲು ಸಿದ್ಧವಿದೆ," ಎಂದು ಜೋಶಿ ವರದಿಗಾರರಿಗೆ ಹೇಳಿದ್ದಾರೆ.

ಕೃಷಿ ಕಾನೂನು ವಿರೋಧಿಸಿ, ಪ್ರತಿಭಟನೆ ದಾಖಲಿಸುವ ದೃಷ್ಟಿಯಿಂದ ಬಜೆಟ್ ಅಧಿವೇಶನದ ಮೊದಲ ದಿನ ಹದಿನಾರು ವಿಪಕ್ಷಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರ ಭಾಷಣವನ್ನು ಬಾಯ್ಕಾಟ್ ಮಾಡಿದ್ದವು.

ಬಜೆಟ್ 2021: ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021- 22ನೇ ಸಾಲಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಸೆಷನ್ ಮೊದಲ ಭಾಗವು ಫೆಬ್ರವರಿ 15ನೇ ತಾರೀಕಿನ ತನಕ ಇದ್ದು, ಎರಡನೇ ಭಾಗವು ಮಾರ್ಚ್ 8ರಿಂದ ಏಪ್ರಿಲ್ 8ನೇ ತಾರೀಕು ತನಕ ನಡೆಯಲಿದೆ.

ರಾಜ್ಯಸಭೆಯು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಕಾರ್ಯ ನಿರ್ವಹಿಸುತ್ತದೆ. ಲೋಕಸಭೆಯಲ್ಲಿ ಸಂಜೆ 4ರಿಂದ ರಾತ್ರಿ 9ಕ್ಕೆ ಶೂನ್ಯ ವೇಳೆ ಹಾಗೂ ಪ್ರಶ್ನಾ ವೇಳೆ ಇರಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+