ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2021-22ರ ಹಣಕಾಸು ವರ್ಷದ ಸಾಮಾನ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಕೊರೊನಾವೈರಸ್‌ನಿಂದಾಗಿ ಆರ್ಥಿಕತೆಯ ಮಂದಗತಿಯು ಬಹುತೇಕ ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಇದು ಲಕ್ಷಾಂತರ ಉದ್ಯೋಗ ನಷ್ಟಕ್ಕೂ ಕಾರಣವಾಗಿದೆ.
ಕೋವಿಡ್-19 ಲಾಕ್‌ಡೌನ್ ಜನರ ಗಳಿಕೆಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್ ಕುರಿತು ಸಾಮಾನ್ಯ ಜನರು ಸರ್ಕಾರದಿಂದ 5 ವಿಶೇಷ ನಿರೀಕ್ಷೆಗಳನ್ನು ಹೊಂದಿದ್ದಾರೆ.
ಆದಾಯ ತೆರಿಗೆ ವಿನಾಯಿತಿ
ಪ್ರತಿ ವರ್ಷದ ಬಜೆಟ್‌ನಲ್ಲೂ ಜನ ಸಾಮಾನ್ಯ ಆಶಯ ಆದಾಯ ತೆರಿಗೆ ವಿನಾಯಿತಿ ಆಗಿರುತ್ತದೆ. ಕಳೆದ ಬಜೆಟ್‌ನಲ್ಲಿ ಹೊಸ ವೈಯಕ್ತಿಕ ಆದಾಯ ತೆರಿಗೆ ನಿಯಮವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿಸದರು. ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಆಶಿಸಿದ್ದಾರೆ.
ಆದರೆ ಈ ಬಾರಿ ಕೊರೊನಾದಿಂದ ಆಗಿರುವ ಆರ್ಥಿಕ ನಷ್ಟದ ನಡುವೆ ಸರ್ಕಾರ ಮತ್ತಷ್ಟು ವಿನಾಯಿತಿ ನೀಡಲು ಹೋದರೆ ನಷ್ಟವಾಗಬಹುದು. ಹೀಗಾಗಿ ಸರ್ಕಾರ ಇದಕ್ಕೆ ಪ್ರಧಾನ್ಯತೆ ನೀಡದ ಇರಬಹುದು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ವರ್ಕ್ ಫ್ರಮ್ ಹೋಮ್ ವಿನಾಯಿತಿ
ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಕಚೇರಿ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಂತಹ ಜನರು ಈ ಬಜೆಟ್‌ನಿಂದ ಸ್ವಲ್ಪ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ.
ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ ಕಡಿತ
ಸೆಕ್ಷನ್ 80 ಸಿ ಅಡಿಯಲ್ಲಿ ಗರಿಷ್ಠ 1.5 ಲಕ್ಷ ರೂ.ಗಳ ಕಡಿತದ ಮೇಲೆ ಕ್ಲೈಮ್ ಪಡೆಯಬಹುದು. ಈ ಕಡಿತವು ಜೀವ ವಿಮಾ ಪ್ರೀಮಿಯಂ ಪಾವತಿ, ಗೃಹ ಸಾಲಗಳ ಪ್ರಿನ್ಸಿಪಲ್ ಅಮೌಂಟ್ ಹಾಗೂ ಬೋಧನಾ ಶುಲ್ಕವನ್ನು ಒಳಗೊಂಡಿರುತ್ತದೆ. 1.5 ಲಕ್ಷ ರೂಪಾಯಿಗಳ ಸೀಲಿಂಗ್ ಅನ್ನು ಕೊನೆಯದಾಗಿ 2014-15ನೇ ಹಣಕಾಸು ವರ್ಷದಲ್ಲಿ ಪರಿಷ್ಕರಿಸಲಾಯಿತು ಮತ್ತು ಮೇಲ್ಮುಖವಾದ ಪರಿಷ್ಕರಣೆ ಮಾಡಿ ಬಹಳ ಸಮಯ ಕಳೆದಿದೆ. ಇದು ಸಾಮಾನ್ಯ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಈ ಮಿತಿಯನ್ನು ಕನಿಷ್ಠ 2.5 ಲಕ್ಷಕ್ಕೆ ಏರಿಸಬಹುದು ಎಂಬುದು ಜನರ ಆಶಯವಾಗಿದೆ.
ಆರೋಗ್ಯ ವಿಮೆಗಳಿಗೆ ತೆರಿಗೆ ವಿನಾಯಿತಿ
ಕೋವಿಡ್-19 ಬಂದ ಬಳಿಕ ಆರೋಗ್ಯ ವಿಮಾ ಉತ್ಪನ್ನಗಳಿಗೆ ಹೆಚ್ಚಿನ ಅವಶ್ಯಕತೆ ಇದೆ ಎಂದು ಸಾಬೀತುಪಡಿಸಿದೆ. ಇಲ್ಲಿಯವರೆಗೆ ಅವುಗಳನ್ನು ಒಂದು ಆಯ್ಕೆಯಾಗಿ ಪರಿಗಣಿಸಲಾಗಿದೆ. ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯ ವಿಮೆಯನ್ನು ಕಡ್ಡಾಯಗೊಳಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಯ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಸರ್ಕಾರ ಕೆಲವು ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಬಹುದು.


Click it and Unblock the Notifications