ಕೇಂದ್ರ ಸರ್ಕಾರವು ಈ ಹಣಕಾಸು ವರ್ಷದ ಬಜೆಟ್ ಅನ್ನು ಮಂಡನೆ ಮಾಡುತ್ತಿದೆ. ಈ ನಡುವೆ ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳು ಪಾಸಿಟಿವ್ ಆಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 550 ಪಾಯಿಂಟ್ ಜಿಗಿತ ಕಂಡಿದೆ. ಇನ್ನು ನಿಫ್ಟಿ ಟಾಪ್ 17,500ರಲ್ಲಿದೆ. ಬ್ಯಾಂಕಿಂಗ್ ಮತ್ತು ಮಾಹಿತಿ ತಂತ್ರಜ್ಞಾನದ ಷೇರುಗಳಲ್ಲಿನ ಲಾಭದ ಮೂಲಕ ಭಾರತೀಯ ಷೇರು ವಹಿವಾಟು ಆರಂಭ ಮಾಡಿದೆ. ಈಗ 900 ಪಾಯಿಂಟ್ ಜಿಗಿತ ಕಂಡಿದ್ದು, ಸೆನ್ಸೆಕ್ಸ್ 58,920 ಪಾಯಿಂಟ್‌ಗೆ ಏರಿಕೆ ಕಂಡಿದೆ.
ಮೂಲಸೌಕರ್ಯ, ಹವಾಮಾನ ಬದಲಾವಣೆ, ಎಂಎಸ್‌ಎಂಇಗಳಿಗೆ ಬೆಂಬಲ ಮತ್ತು ಡಿಜಿಟಲೀಕರಣದ ಬಗ್ಗೆ ಬಜೆಟ್ ಹೆಚ್ಚು ಉಲ್ಲೇಖ ಮಾಡಿದೆ. ಡಿಜಿಟಲ್ ನೆಲೆಯಲ್ಲಿ ಆರ್ಥಿಕತೆಯ ಸಮಗ್ರ ಬೆಳವಣಿಗೆ ಮತ್ತು ಚೇತರಿಕೆಯ ಮೇಲೆ ಬಜೆಟ್ ಯೋಜಿಸಿದೆ. ಈ ನಡುವೆ ಷೇರು ಮಾರುಕಟ್ಟೆ ಲಾಭಾಂಶದಲ್ಲಿ ಸಾಗುತ್ತಿದೆ. ಮಧ್ಯಾಹ್ನ 12 ಗಂಟೆಗೆ ಸೆನ್ಸೆಕ್ಸ್ 892 ಪಾಯಿಂಟ್ ಅಥವಾ 1.54 ರಷ್ಟು ಏರಿಕೆಯಾಗಿ 58,906 ಕ್ಕೆ ತಲುಪಿದರೆ, ನಿಫ್ಟಿ 235 ಪಾಯಿಂಟ್ ಜಿಗಿದ 17,575 ಕ್ಕೆ ತಲುಪಿದೆ.
ಬೆಳಗ್ಗೆ 9:20 ರ ಹೊತ್ತಿಗೆ, ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವ್ಯವಹಾರಗಳಲ್ಲಿ 530 ಪಾಯಿಂಟ್‌ಗಳು ಅಥವಾ ಶೇಕಡಾ 0.91 ರಷ್ಟು ಜಿಗಿದು 58,544 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 189 ಪಾಯಿಂಟ್‌ಗಳು ಅಥವಾ 1.09 ರಷ್ಟು ಏರಿಕೆಯಾಗಿ 17,529 ಕ್ಕೆ ತಲುಪಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ ಶೇಕಡಾ 0.91 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಶೇಕಡಾ 1.09 ರಷ್ಟು ಏರಿಕೆಯಾಗಿದ್ದು ಪಾಸಿಟಿವ್ ಬೆಳವಣಿಗೆ ಕಂಡು ಬಂದಿದೆ. ಪ್ರಮುಖವಾಗಿ ನಿಫ್ಟಿಯಲ್ಲಿ ಐಸಿಐಸಿಐ ಬ್ಯಾಂಕ್ ಟಾಪ್‌ನಲ್ಲಿ ಇದೆ. ಐಸಿಐಸಿಐ ಬ್ಯಾಂಕ್ ಷೇರುಗಳು ಶೇಕಡಾ 2.64 ರಷ್ಟು ಏರಿಕೆಯಾಗಿ ₹ 809.60 ಕ್ಕೆ ತಲುಪಿದೆ. ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಬ್ರಿಟಾನಿಯಾ ಸಹ ಲಾಭ ಗಳಿಸಿದೆ.

ಬಿಪಿಸಿಎಲ್, ಟಾಟಾ ಮೋಟಾರ್ಸ್‌ಗೆ ನಷ್ಟ
ಇದಕ್ಕೆ ವ್ಯತಿರಿಕ್ತವಾಗಿ, ಬಿಪಿಸಿಎಲ್, ಟಾಟಾ ಮೋಟಾರ್ಸ್, ಐಒಸಿ, ಒಎನ್‌ಜಿಸಿ ಮತ್ತು ಡಾ ರೆಡ್ಡೀಸ್ ನಷ್ಟ ಅನುಭವಿಸಿದೆ. 1,874 ಷೇರುಗಳಲ್ಲಿ ಮಾರುಕಟ್ಟೆ ಪ್ರಬಲವಾಗಿದೆ. ಈ ನಡುವೆ ಬಿಎಸ್‌ಇಯಲ್ಲಿ 698 ಅಂಕ ಕುಸಿಯುತ್ತಿದೆ. 30-ಷೇರು ಹೊಂದಿರುವ ಬಿಎಸ್‌ಇ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಎಚ್‌ಡಿಎಫ್‌ಸಿ, ಇನ್ಫೋಸಿಸ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಶೇಕಡಾ 2.75 ರಷ್ಟು ಏರಿಕೆಯಾಗಿದೆ. ಈ ಮೂಲಕ ಲಾಭವನ್ನು ಗಳಿಸಿದೆ.
ಏತನ್ಮಧ್ಯೆ, ಅದಾನಿ ಪೋರ್ಟ್ಸ್, ಇಂಡಿಯನ್ ಹೋಟೆಲ್ಸ್, ಇಂಡೋಕೋ ರೆಮಿಡೀಸ್ ಮತ್ತು ಟೆಕ್ ಮಹೀಂದ್ರಾ ಕಂಪನಿಗಳು ತಮ್ಮ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಶೀಘ್ರ ಪ್ರಕಟ ಮಾಡಲಿದೆ. ಸೋಮವಾರ ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 662.75 ಪಾಯಿಂಟ್ ಅಥವಾ 1.16 ಶೇಕಡಾ ಏರಿಕೆಯಾಗಿ 57,862.98 ಕ್ಕೆ ತಲುಪಿದೆ. ನಿಫ್ಟಿ 199.50 ಪಾಯಿಂಟ್ ಅಥವಾ 1.17 ರಷ್ಟು ಏರಿಕೆಯಾಗಿ 17,301.50 ಕ್ಕೆ ತಲುಪಿದೆ. ಸುಮಾರು 1,736 ಷೇರುಗಳು ಮುನ್ನಡೆ ಸಾಧಿಸಿವೆ, 439 ಷೇರುಗಳು ಇಳಿದಿವೆ ಮತ್ತು 107 ಷೇರುಗಳ ಸ್ಥಿತಿ ಬದಲಾಗಿಲ್ಲ.
ಆರಂಭಿಕ ವಹಿವಾಟು ವಿವರದಂತೆ ಟೆಕ್ ಮಹೀಂದ್ರಾ (ಶೇಕಡಾ +2.87 ), ಬಜಾಜ್ ಫೈನಾನ್ಸ್ (ಶೇ +2.83), ಬಜಾಜ್ ಫಿನ್‌ಸರ್ವ್ (ಶೇ +2.54), ವಿಪ್ರೋ (ಶೇ +2.49), ಏಷ್ಯನ್ ಪೇಂಟ್ಸ್ (ಶೇ +2.32) ಮತ್ತು ನಿಫ್ಟಿಯಲ್ಲಿ ಆರಂಭಿಕ ವಿಜೇತ ಷೇರುಗಳು ಇನ್ಫೋಸಿಸ್ (ಶೇ +2.09). ಲಾರ್ಸೆನ್ ಮತ್ತು ಟೂಬ್ರೊ ಮತ್ತು NTPC ಕೂಡಾ ಏರಿಕೆ ಕಂಡಿದೆ.


Click it and Unblock the Notifications