ವಾರ್ಷಿಕ ಕೇಂದ್ರ ಬಜೆಟ್ ಮಂಡನೆ ಆಗಲು ಇನ್ನು ಎರಡೇ ದಿನಗಳು ಇದೆ. ಈ ವರ್ಷ ಸಂಸತ್ತಿನ ಬಜೆಟ್ ಅಧಿವೇಶನವು ಸೋಮವಾರ, ಜನವರಿ 31, 2022 ರಂದು ಪ್ರಾರಂಭವಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನ ಪ್ರಾರಂಭ ಮಾಡಲಿದ್ದಾರೆ.
ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11, 2022 ರಂದು ಮುಕ್ತಾಯಗೊಳ್ಳುತ್ತದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ, ಅಧಿವೇಶನದ ಭಾಗ ಎರಡು ಮಾರ್ಚ್ 14, 2022 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8, 2022 ರಂದು ಮುಕ್ತಾಯಗೊಳ್ಳುತ್ತದೆ.
ಸೋಮವಾರ, ಜನವರಿ 31, 2022 ರಂದು ರಾಷ್ಟ್ರಪತಿ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೇಂದ್ರ ಬಜೆಟ್ ದಿನಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್ ಮಂಡನೆಯ ಒಂದು ದಿನ ಮೊದಲು ಮಂಡಿಸಲಾಗುತ್ತದೆ. ಇದು ಕಳೆದ ಒಂದು ವರ್ಷದಲ್ಲಿ ಆರ್ಥಿಕತೆಯ ಸ್ಥಿತಿ, ಆರ್ಥಿಕತೆಗೆ ಇರುವ ಪ್ರಮುಖ ಸವಾಲುಗಳು ಮತ್ತು ಅವುಗಳ ಪರಿಹಾರದ ಬಗ್ಗೆ ವಿವರಣೆಯನ್ನು ಹೊಂದಿದೆ.

2021-22ರ ಸಮೀಕ್ಷೆಯು ಹಿಂದಿನ 12 ತಿಂಗಳ ಅವಧಿಯಲ್ಲಿ ಭಾರತೀಯ ಆರ್ಥಿಕತೆಯ ಪ್ರಗತಿಯ ಅಂದಾಜನ್ನು ಪ್ರಸ್ತುತಪಡಿಸುತ್ತದೆ. ಸಮೀಕ್ಷೆಯಿಂದ ಹೊರಡಿಸಲಾದ ಮುನ್ಸೂಚನೆಗಳು, ಅವುಗಳಿಗೆ ಉಲ್ಲೇಖಿಸಲಾದ ಕಾರಣಗಳು ಆರ್ಥಿಕ ವಿಶ್ಲೇಷಕರಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಆರ್ಥಿಕ ಸಮೀಕ್ಷೆಯ ಪರಿಶೀಲನೆಯಲ್ಲಿ ಸರ್ಕಾರವು ಜಾರಿಗೆ ತಂದ ಯೋಜನೆಗಳು ಮತ್ತು ನೀತಿಗಳ ವಿವರಗಳು ಮತ್ತು ಫಲಿತಾಂಶಗಳನ್ನು ಸಮೀಕ್ಷೆಯು ಒಳಗೊಂಡಿರುತ್ತದೆ. ಇದಲ್ಲದೆ, ಸಮೀಕ್ಷೆಯು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಕುರಿತು ಸುಳಿವು ನೀಡುತ್ತದೆ.
ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ತೀಕ್ಷ್ಣವಾಗಿ ಕೇಂದ್ರೀಕೃತವಾಗಿದೆ. ಈ ಸೂಚಕಗಳಲ್ಲಿ ಕೃಷಿ ಉತ್ಪಾದನೆ, ಕಾರ್ಖಾನೆ ಉತ್ಪಾದನೆ, ವಿದೇಶಿ ವ್ಯಾಪಾರ, ಹಣದುಬ್ಬರ, ಉದ್ಯೋಗಗಳು ಇತ್ಯಾದಿಗಳು ಸೇರಿವೆ. ಕೊರೊನಾವೈರಸ್‌ನಿಂದಾಗಿ ಆರ್ಥಿಕತೆಯ ಮೇಲೆ ಆಗಿರುವ ಹಾನಿ ಕುರಿತಾಗಿ ಅಧಿಕೃತವಾಗಿ ಅಂಕಿ-ಅಂಶಗಳನ್ನು ಹೊರಗಿಡಬಹುದಾಗಿದ್ದು, ಇದಕ್ಕೆ ಪರಿಹಾರ ಪ್ಯಾಕೇಜ್ ಘೋಷಣೆ ಬಗ್ಗೆ ಕೂಡಾ ಸೂಚನೆ ಸಿಗಲಿದೆ.
ಕೇಂದ್ರ ಬಜೆಟ್ 2022-23
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ, ಫೆಬ್ರವರಿ 1, 2022 ರಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಬಜೆಟ್ ಅಧಿವೇಶನದ ಬಗ್ಗೆ ಚರ್ಚಿಸಲು ಸರ್ಕಾರ ಜನವರಿ 31 ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ. ಬಜೆಟ್ ಅಧಿವೇಶನದ ಸಮಸ್ಯೆಗಳು ಮತ್ತು ಶಾಸಕಾಂಗ ವ್ಯವಹಾರಗಳ ಬಗ್ಗೆ ಚರ್ಚಿಸಲು ಸರ್ಕಾರ ಜನವರಿ 31 ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ. ಈ ಸರ್ವಪಕ್ಷ ಸಭೆಯು ವರ್ಚುವಲ್ ರೂಪದಲ್ಲಿ ನಡೆಯಲಿದೆ. ಭಾರತದ ಬಜೆಟ್ ಅಧಿವೇಶನವು ಸರಾಸರಿ 90 ರಿಂದ 120 ನಿಮಿಷಗಳವರೆಗೆ ಇರುವುದರಿಂದ ಭಾರತದ ಬಜೆಟ್ ಮಂಡನೆಯು ದೀರ್ಘವಾಗಿರುತ್ತದೆ. ಫೆಬ್ರವರಿ 1, 2020 ರಂದು ಕೇಂದ್ರ ಬಜೆಟ್ 2020-21 ಅನ್ನು ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತುತಪಡಿಸಿದರು. ಅವರು ಒಟ್ಟು 2 ಗಂಟೆ 42 ನಿಮಿಷಗಳ ಕಾಲ ಬಜೆಟ್ ಭಾಷಣವನ್ನು ಮಾಡಿದ್ದಾರೆ. ಬಜೆಟ್ ಭಾಷಣ ಮಾಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅಸ್ವಸ್ಥರಾಗಿದ್ದರು. ನಂತರ ಉಳಿದ ಭಾಷಣವನ್ನು ಸ್ಪೀಕರ್ ಮಾಡಿದರು. ಈ ಭಾಷಣವು ಜುಲೈ 2019 ರಲ್ಲಿ ಮಾಡಿದ 2 ಗಂಟೆ 17 ನಿಮಿಷಗಳ ಸುದೀರ್ಘ ಭಾಷಣಕ್ಕಿಂತ ದೀರ್ಘವಾಗಿತ್ತು.


Click it and Unblock the Notifications