ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-24ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದು, ಭಾರತದಲ್ಲಿ ಜನರ ಸರಾಸರಿ ಆದಾಯವು ಸುಮಾರು ಶೇಕಡ 50 ರಷ್ಟು ಏರಿಕೆಯಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
"ನಾವು ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು ನೋಡಿದಾಗ ಅಗಾಧವಾಗಿ ಬದಲಾವಣೆಯನ್ನು ಗಮನಿಸಬಹುದು. ಜನರು ಭರವಸೆ ಮತ್ತು ಆಶಾವಾದದಿಂದ ಭವಿಷ್ಯವನ್ನು ನೋಡುತ್ತಿದ್ದಾರೆ. ನಮ್ಮ ಸರ್ಕಾರವು ಜನರ ಆಶೀರ್ವಾದದಿಂದಾಗಿ ನಡೆಯುತ್ತಿದೆ. ನಾವು ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಪರಿಕಲ್ಪನೆಯನ್ನು ಜಾರಿಗೊಳಿಸಿದ್ದೇವೆ," ಎಂದು ಸೀತಾರಾಮನ್ ಹೇಳಿದರು.

ನಾವು ಕಳೆದ ಹತ್ತು ವರ್ಷಗಳ ಸಮಯದಲ್ಲಿ ದೇಶದಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಮುಕ್ತರಾಗಲು ಸಹಾಯ ಮಾಡಿದ್ದೇವೆ. ಯುವಕರ ಅಭಿವೃದ್ಧಿಗೆ ನಾವು ಎನ್‌ಇಪಿ ಮೂಲಕ ಹೆಚ್ಚು ಒತ್ತು ನೀಡುತ್ತಿದ್ದೇವೆ. ಜನರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿಯೂ ನಮ್ಮ ಗಮನವಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರವು ಅಭಿವೃದ್ಧಿ ಕಡೆಗೆ ಗಮನವನ್ನು ಹರಿಸಿರುವ ಸರ್ಕಾರವಾಗಿದೆ. 2014ರಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರವನ್ನು ಸ್ವೀಕರಿಸಿದಾಗ ಹಲವು ಸವಾಲು ಎದುರಾಗಿತ್ತು. ಆದರೆ ಜನರು ಹಿತದೃಷ್ಟಿಯಿಂದ ಆರ್ಥಿಕತೆ ಬಲಪಡಿಸಲು & ಜನರಿಗಾಗಿ ಉದ್ಯೋಗ ಸೃಷ್ಟಿಸಲು ನಮ್ಮ ಸರ್ಕಾರವು ಹಲವಾರು ಕಾರ್ಯಕ್ರಮ ಮತ್ತು ಯೋಜನೆ ರೂಪಿಸಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲು ನಾವು ಪಣ ತೊಟ್ಟಿದ್ದೇವೆ ಎಂದರು.
ಭಾರತದಲ್ಲಿ ಸರಾಸರಿ ಆದಾಯ
ಗ್ಲಾಸ್‌ಡೋರ್ ವರದಿ ಪ್ರಕಾರ ಭಾರತದಲ್ಲಿ ಸರಾಸರಿ ಆದಾಯವು ವಾರ್ಷಿಕವಾಗಿ 9,45,489 ರೂಪಾಯಿ ಆಗಿದೆ. ಮಾಸಿಕವಾಗಿ 8,000 ರೂಪಾಯಿ ಪಡೆಯುವವರು ಮತ್ತು ಮಾಸಿಕವಾಗಿ 1,43,000 ರೂಪಾಯಿ ಪಡೆಯುವವರು ಭಾರತದಲ್ಲಿದ್ದಾರೆ. ಭಾರತದಲ್ಲಿ ಆದಾಯದ ಮೇಲೆ ಅವರ ವಯಸ್ಸು ಅಧಿಕ ಪ್ರಭಾವ ಬೀರುತ್ತದೆ ಎಂದು ಗ್ಲಾಸ್‌ಡೋರ್ ವರದಿ ಹೇಳುತ್ತದೆ. ಈ ವರದಿ ಪ್ರಕಾರ ಕರ್ನಾಟಕದಲ್ಲಿ ಸರಾಸರಿ ಮಾಸಿಕ ಆದಾಯವು 19,150 ರೂಪಾಯಿ ಆಗಿದೆ.


Click it and Unblock the Notifications