ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಬಜೆಟ್ ಅನ್ನು ಮಂಡಿಸಿದ್ದು, ತಮ್ಮ ಅಧಿಕಾರವಧಿಯಲ್ಲಿ ಆರ್ಥಿಕ ಸುಧಾರಣೆಗಳನ್ನು ಮಾಡುವ ಭರವಸೆಯನ್ನು ನೀಡಿದ್ದಾರೆ. ಇದು ಮಧ್ಯಂತರ ಬಜೆಟ್ ಆದ ಕಾರಣದಿಂದಾಗಿ ಸಾಮಾನ್ಯವಾಗಿಯೇ ಅಧಿಕ ಘೋಷಣೆಗಳನ್ನು ಮಾಡಲಾಗಿಲ್ಲ.
ಭಾರತದ ಬಂಡವಾಳ ವಿನಿಯೋಗವು ಹಣಕಾಸು ವರ್ಷ 2024-25ಕ್ಕೆ ಶೇಕಡ 11 ರಷ್ಟು ಹೆಚ್ಚಾಗಿ 11.11 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ಕೂಡಾ ಸಚಿವರು ಹೇಳಿದ್ದಾರೆ. ಹಾಗೆಯೇ ಭಾರತದಲ್ಲಿ ಹೊಸದಾಗಿ 1000 ಏರ್‌ಕ್ರಾಫ್ಟ್‌ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಕೂಡಾ ತಿಳಿಸಿದ್ದಾರೆ.

ರಕ್ಷಣಾ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದ ಸೀತಾರಾಮನ್ ಕೃಷಿ ಕ್ಷೇತ್ರದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಯನ್ನು ಸರ್ಕಾರವು ಉತ್ತೇಜಿಸುತ್ತದೆ ಎಂದು ಕೂಡಾ ಹೇಳಿದರು.
ಹಾಗೆಯೇ ಪ್ರತಿ ಇಲಾಖೆಗೂ ಅನುದಾನವನ್ನು ಘೋಷಣೆ ಮಾಡಲಾಗಿದೆ. ನಾವು ಅನುದಾನವನ್ನು ಗಮನಿಸಿದಾಗ ದೇಶದ ಅತೀ ಮುಖ್ಯವಾದ ಕೃಷಿ ಕ್ಷೇತ್ರಕ್ಕೆ ಅತೀ ಕಡಿಮೆ ಅನುದಾನ ಹಂಚಿಕೆ ಮಾಡಲಾಗಿದೆ ಎಂಬುವುದು ತಿಳಿದು ಬರುತ್ತದೆ. ಇನ್ನು ರಕ್ಷಣಾ ಕ್ಷೇತ್ರಕ್ಕೆ ಅತೀ ಅಧಿಕ ಬಂಡವಾ ಹಂಚಿಕೆ ಮಾಡಲಾಗಿದೆ.
ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
- ರಕ್ಷಣಾ ಸಚಿವಾಲಯ: 6.1 ಲಕ್ಷ ಕೋಟಿ ರೂಪಾಯಿ
- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂಪಾಯಿ
- ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂಪಾಯಿ
- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ: 2.13 ಲಕ್ಷ ಕೋಟಿ ರೂಪಾಯಿ
- ಗೃಹ ವ್ಯವಹಾರಗಳ ಸಚಿವಾಲಯ: 2.03 ಲಕ್ಷ ಕೋಟಿ ರೂಪಾಯಿ
- ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂಪಾಯಿ
- ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ: 1.68 ಲಕ್ಷ ಕೋಟಿ ರೂಪಾಯಿ
- ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂಪಾಯಿ
- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ: 1.27 ಲಕ್ಷ ಕೋಟಿ ರೂಪಾಯಿ


Click it and Unblock the Notifications