ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಅಂದರೆ ಇಂದು ಕೇಂದ್ರ ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಈ ಬಜೆಟ್‌ನಲ್ಲೇ ರೈಲ್ವೆ ಬಜೆಟ್ ಅನ್ನು ಕೂಡಾ ಮಂಡನೆ ಮಾಡಲಾಗುತ್ತದೆ. ಈ ಹಿಂದೆ ರೈಲ್ವೆ ಬಜೆಟ್ ಪ್ರತ್ಯೇಕವಾಗಿತ್ತು. ಆದರೆ ಇದನ್ನು 2016ರಲ್ಲಿ ಒಟ್ಟಾಗಿ ಮಂಡಿಸಲಾಗುತ್ತಿದೆ.
2016ರ ಕೇಂದ್ರ ಸರ್ಕಾರವು ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ಜೊತೆಯೇ ಸೇರಿಸಿದೆ, ವಿಲೀನಗೊಳಿಸಿದೆ. ಈ ಮೂಲಕ ಸುಮಾರು 92 ವರ್ಷಗಳ ಹಳೆಯ ಪದ್ಧತಿಗೆ ಕೇಂದ್ರ ಸರ್ಕಾರವು ಅಂತ್ಯ ಹಾಡಿತ್ತು. ಇದಕ್ಕೆ ಭಾರೀ ವಿರೋಧವೂ ಕೂಡಾ ವ್ಯಕ್ತವಾಗಿದೆ. ಈ ರೈಲ್ವೆ ಬಜೆಟ್ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ ಮುಂದೆ ಓದಿ....

ರೈಲ್ವೆ ಬಜೆಟ್ ಬಗ್ಗೆ ಈ ಮಾಹಿತಿ ತಿಳಿದಿದೆಯೇ?
* 2017ಕ್ಕೂ ಮುನ್ನ ಕೇಂದ್ರ ಬಜೆಟ್ ಮತ್ತು ರೈಲ್ವೆ ಬಜೆಟ್ ಪ್ರತ್ಯೇಕವಾಗಿದ್ದವು. ಎರಡು ಬಜೆಟ್‌ಗಳನ್ನು ಪ್ರತ್ಯೇಕವಾಗಿಯೇ ಮಂಡಿಸಲಾಗುತ್ತಿತ್ತು.
* ಹಣಕಾಸು ವರ್ಷ 2017-18ರಲ್ಲಿ ಕೇಂದ್ರ ಬಜೆಟ್ ಅನ್ನು ಆಗಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಮಂಡಿಸಿದಾಗ ಈ ಪದ್ಧತಿಯು ಅಂತ್ಯಕ್ಕೆ ಬಂದಿದೆ. ಅದಾದ ಬಳಿಕ ಇದೇ ಪದ್ಧತಿಯನ್ನು ನಂತರದ ಸರ್ಕಾರಗಳು, ಹಣಕಾಸು ಸಚಿವರು ಪಾಲನೆ ಮಾಡುತ್ತಾ ಬಂದಿದ್ದಾರೆ.
* ಭಾರತೀಯ ರೈಲ್ವೆಯು 2023ರ ಏಪ್ರಿಲ್ 1ರಿಂದ ಡಿಸೆಂಬರ್ 31ರವರೆಗೆ ಒಟ್ಟು 9 ತಿಂಗಳ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಬಂಡವಾಳ ವಿನಿಯೋಗವನ್ನು ಮಾಡಿದೆ. ಇದು ಸಾರ್ವಕಾಲಿಕ ಏರಿಕೆ ಪ್ರಮಾಣವಾಗಿದೆ ಎಂದು ರೈಲ್ವೆ ಸಚಿವಾಲಯವು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
* ರೈಲ್ವೆ ಇಲಾಖೆಗೆ ಮೀಸಲಾಗಿಟ್ಟ ಬಜೆಟ್ ಮೊತ್ತದಲ್ಲಿ ಒಟ್ಟಾಗಿ ಶೇಕಡ 75 ರಷ್ಟು ಮೊತ್ತವನ್ನು ಈ ಒಂಬತ್ತು ತಿಂಗಳ ಅವಧಿಯಲ್ಲೇ ಬಳಕೆ ಮಾಡಲಾಗಿದೆ ಎಂದು ಡೇಟಾ ಹೇಳುತ್ತದೆ.
* ಈ 9 ತಿಂಗಳ ಅವಧಿಯಲ್ಲಿ ಭಾರತೀಯ ರೈಲ್ವೆಯು ಒಟ್ಟಾಗಿ 1,95,929.97 ಕೋಟಿ ರೂಪಾಯಿಯನ್ನು ಬಳಕೆ ಮಾಡಿದೆ. ಅಂದರೆ ಒಟ್ಟು ರೈಲ್ವೆಗೆ ಮೀಸಲಾದ 2.62 ಲಕ್ಷ ಕೋಟಿ ರೂಪಾಯಿಯಲ್ಲಿ ಶೇಕಡ 75ರಷ್ಟು ಮೊತ್ತವನ್ನು ಬಳಸಲಾಗಿದೆ.
* ರೈಲ್ವೆ ಸಚಿವಾಲಯಕ್ಕೆ 2023ರ ಬಜೆಟ್‌ನಲ್ಲಿ ಮೀಸಲಿಟ್ಟ ಮೊತ್ತವು ಹಣಕಾಸು ವರ್ಷ 2013-14ರಲ್ಲಿ ಘೋಷಿಸಲಾಗಿದ್ದ ಮೊತ್ತಕ್ಕಿಂತ ಒಂಬತ್ತು ಪಟ್ಟು ಅಧಿಕ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.


Click it and Unblock the Notifications