ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್) #Budget2024 ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಈ ನಡುವೆ #StockToWatch ಟ್ಯಾಗ್ ಕೂಡಾ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ.
ಬಜೆಟ್ ದಿನ ಆರಂಭಿಕ ವಹಿವಾಟಿನಲ್ಲಿ ಶುಭಾರಂಭವನ್ನು ಮಾಡಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 63.63 ಪಾಯಿಂಟ್ ಅಥವಾ ಶೇಕಡ 0.09 ರಷ್ಟು ಏರಿಕೆಯಾಗಿ 71,815.74ಕ್ಕೆ ತಲುಪಿದೆ. ನಿಫ್ಟಿ 24.20 ಪಾಯಿಂಟ್ ಅಥವಾ ಶೇಕಡ 0.11 ಜಿಗಿದು 21,749.90ಕ್ಕೆ ವಹಿವಾಟಿಗೆ ಇಳಿದಿದೆ. 1763 ಷೇರುಗಳು ಏರಿದರೆ, 664 ಇಳಿದಿದೆ, 89 ಷೇರುಗಳು ಸ್ಥಿರವಾಗಿದೆ.

ಇಂದು ಗಮನಿಸಬೇಕಾದ ಷೇರುಗಳು
ಮೂಲಭೂತ ಸೌಕರ್ಯ: ಎಲ್&ಟಿ, ಸೈಮೆನ್ಸ್, ಪಿಎನ್‌ಸಿ ಇನ್ಫ್ರಾಟೆಕ್, ಕಮ್ಮಿನ್ಸ್, ಥೆರ್‌ಮಾಕ್ಸ್, ಎಬಿಬಿ ಇಂಡಿಯಾ
ರೈಲ್ವೆ: ಆರ್‌ವಿಎನ್‌ಎಲ್, ಐಆರ್‌ಸಿಟಿಸಿ, ಟಿಟಾಗರ್ ರೈಲು, ಟೆಕ್ಸ್‌ಮಾಕೊ
ಸಿಮೆಂಟ್: ಎಸಿಸಿ, ಅಲ್ಟ್ರಾಟೆಕ್ ಸಿಮೆಂಟ್, ಅಂಬುಜಾ ಸಿಮೆಂಟ್, ಅಹ್ಲುವಾಲಿಯಾ ಕಾಂಟ್ರಾಕ್ಟ್ಸ್, ದಿಲೀಪ್ ಬಿಲ್ಡಾನ್, ಐಆರ್‌ಬಿ ಇನ್ಫ್ರಾ
ರಿಯಲ್ ಎಸ್ಟೇಟ್: ಡಿಎಲ್‌ಎಫ್, ಗಾಡ್ರೇಜ್ ಪ್ರಾಪರ್ಟಿಸ್, ಡಿಬಿ ರಿಯಾಲಿಟಿ, ಬ್ರಿಗೇಡ್
ಗ್ರಾಮೀಣ: ರಸಗೊಬ್ಬರ, ರಾಸಾಯನಿಕ ಸಂಸ್ಥೆಯ ಸ್ಟಾಕ್‌ಗಳು
ಇತರೆ ಸ್ಟಾಕ್‌ಗಳು: ಹಿರೋ ಮೊಟೊಕಾರ್ಪ್, ಎಂ&ಎಂ, ಎಸ್‌ಕಾರ್ಟ್ಸ್, ಎಚ್‌ಯುಎಲ್, ಐಟಿಸಿ, ಡಾಬರ್
ರಕ್ಷಣೆ: ಎಚ್‌ಎಎಲ್, ಬಿಇಎಲ್, ಭಾರತ್ ಪೋರ್ಜ್, ಬಿಎಚ್‌ಇಎಲ್, ಬಿಡಿಎಲ್


Click it and Unblock the Notifications