ಕೇಂದ್ರ ಬಜೆಟ್ 2025-26 (Union Budget 2025)ರ ಸಾಲಿನ ಮಂಡನೆಗೆ ದಿನಗಣನೆ ಶುರುವಾಗಿದೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡಿಸಲು ಸಜ್ಜಾಗಿದ್ದು,ಕೇಂದ್ರ ಬಜೆಟ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ.
ಹೌದು,ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2025 ಅನ್ನು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಹಲ್ವಾ ಕಾರ್ಯಕ್ರಮ ನಡೆಯಲಿದೆ ಹಾಗಾದರೆ ಇದರ ಮಹತ್ವವೇನು? ಇದನ್ನು ಯಾಕೆ ಮಾಡಲಾಗುತ್ತೆ ಎನ್ನುವ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಈಗಲೇ ಬಜೆಟ್‌ಗೆ ಸಂಬಂಧಿಸಿದಂತೆ ಹಲವಾರು ಚರ್ಚೆಗಳು, ಸಮಾಲೋಚನೆಗಳನ್ನು ಪೂರ್ತಿಗೊಳಿಸಿ ಬಜೆಟ್ ಪ್ರತಿಯನ್ನು ಸಿದ್ಧಪಡಿಸಿದ್ದಾರೆ. ಬಜೆಟ್ ಮಂಡನೆಯ ತಯಾರಿ ಭರಪೂರದಿಂದ ಸಾಗುತ್ತಿದ್ದು,ಈಗಲೇ ಸಾರ್ವಜನಿಕರಿಂದಲೂ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿತ್ತು.ಅವೆಲ್ಲವನ್ನೂ ಕ್ರೋಢೀಕರಿಸಿದ ಸಚಿವಾಲಯದ ಅಧಿಕಾರಿಗಳು ಅರ್ಹ ಸಲಹೆ ಸೂಚನೆಗಳನ್ನು ಸಚಿವರ ಗಮನಕ್ಕೆ ತಂದಿದ್ದಾರೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿದ್ದೇವೆ.
ಬಜೆಟ್ ಪ್ರತಿ ಅಂತಿಮಗೊಳಿಸಿ ಮುದ್ರಣ ಮಾಡುವ ಕೆಲಸ
ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಕೆಲವು ದಿನಗಳ ಮೊದಲು ಕೇಂದ್ರ ಬಜೆಟ್ ಪ್ರತಿ ಅಂತಿಮಗೊಳಿಸಿ ಮುದ್ರಣ ಮಾಡುವ ಕೆಲಸ ನಡೆಯುತ್ತದೆ. ಇದನ್ನು ಹಲ್ವಾ ಕಾರ್ಯಕ್ರಮ ಎಂದೇ ಗುರುತಿಸಲ್ಪಟ್ಟ ಹಲ್ವಾ ಹಂಚುವ ಕಾರ್ಯಕ್ರಮವನ್ನು ನಡೆಸುತ್ತಾರೆ. ಇದನ್ನು ಯಾಕಾಗಿ ನಡೆಸುತ್ತಾರೆ ಎಂಬುವುದನ್ನು ಈ ಕೆಳಗಿನಂತೆ ಮಾಹಿತಿಯನ್ನು ನೀಡಲಾಗಿದೆ.
ಹಲ್ವಾ ಕಾರ್ಯಕ್ರಮ ಎಂದರೇನು?
ಬಜೆಟ್ ಅಧಿವೇಶನ ಶುರುವಾಗುವ ಕೆಲವು ದಿನಗಳ ಮೊದಲು ನಡೆಯುವ ಕಾರ್ಯಕ್ರಮವೇ ಹಲ್ಯಾ ಕಾರ್ಯಕ್ರಮ. ಇದು ಬಜೆಟ್ ಪ್ರತಿಯನ್ನು ಸಿದ್ದಪಡಿಸುವುದಕ್ಕೆ ಮುಂಚಿತವಾಗಿ ಆ ಕೆಲಸದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಸಿಹಿ ತಿನಿಸುವ ಕಾರ್ಯಕ್ರಮ ಇದಾಗಿದೆ.
ಹಲ್ವಾ ಕಾರ್ಯಕ್ರಮವಾದ ನಂತರ ಬಜೆಟ್ ಪ್ರತಿ ಸಿದ್ದಪಡಿಸುವ ಸಿಬ್ಬಂದಿಗಳು ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ಕೆಲಸ ಮಾಡುತ್ತಾರೆ. ಬಜೆಟ್ ಪ್ರತಿ ಕುರಿತಾದ ಗೌಪ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಬಜೆಟ್ ಪ್ರತಿ ಸಿದ್ಧಪಡಿಸುವ ನೌಕರರು ತಮ್ಮ ಜತೆಗೆ ಯಾವುದೇ ಸಂಪರ್ಕ ಸಾಧನೆಗಳನ್ನು ಕೊಂಡೊಯ್ಯುವಂತಿಲ್ಲ
ಹಲ್ವಾ ಕಾರ್ಯಕ್ರಮದ ವಾಡಿಕೆ
ಬಜೆಟ್ ಮುನ್ನ ನಡೆಯುವ ಹಲ್ವಾ ಕಾರ್ಯಕ್ರಮವು ಬಹಳ ವರ್ಷದಿಂದ ನಡೆದುಕೊಂಡು ಬಂದ ವಾಡಿಕೆಯಾಗಿದೆ. ಪ್ರತಿ ಬಜೆಟ್‌ಗೂ ಮುನ್ನ ಈ ಕಾರ್ಯಕ್ರಮವನ್ನು ಕೇಂದ್ರ ಸಚಿವರೇ ಮುಂದೆ ನಿಂತು ನಡೆಸಿಕೊಂಡುತ್ತಾರೆ. ಆ ದಿನದಂದು ದೊಡ್ಡ ಬಾಣಲೆಯಲ್ಲಿ ಬಿಸಿಬಿಸಿ ಹಲ್ವಾ ಸಿದ್ದಮಾಡಿ ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವರೇ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಅಂದರೆ ಬಜೆಟ್ ಪ್ರತಿ ಸಿದ್ಧಪಡಿಸುವ ನೌಕರರಿಗೆ ಹಲ್ವಾ ಹಂಚಿ ಬಜೆಟ್ ಮುದ್ರಣ ಪ್ರತಿಯನ್ನು ಶುರುವಾಡುತ್ತಾರೆ.
ಹಣಕಾಸು ಸಚಿವಾಲಯ ಇರುವಂತಹ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಹಲ್ವಾ ಪಡೆದುಕೊಂಡ ನೌಕರರು, ನಾರ್ತ್ ಬ್ಲಾಕ್ ಬೇಸ್‌ಮೆಂಟ್‌ನಲ್ಲಿರುವ ಮುದ್ರಣಾಲಯದಲ್ಲಿ ಬಜೆಟ್ ಪ್ರತಿ ಸಿದ್ಧಪಡಿಸುವ ಕೆಲಸಕ್ಕೆ ಹೋಗುತ್ತಾರೆ.
ಹಲ್ವಾ ಕಾರ್ಯಕ್ರಮದ ಮಹತ್ವವೇನು?
ಬಜೆಟ್ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ಸೋರಿಕೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾರ್ತ್ ಬ್ಲಾಕ್ ನೆಲಮಾಳಿಗೆಯನ್ನು ಕೋಟೆಯಾಗಿ ಪರಿವರ್ತಿಸಲಾಗುತ್ತದೆ. ಬಜೆಟ್ ತಯಾರಿಕೆ ಅಥವಾ ಮುದ್ರಣದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಸುಮಾರು 100 ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಹೊರ ಜಗತ್ತಿನಿಂದ ದೂರ ಉಳಿಯುತ್ತಾರೆ. ಹಣಕಾಸು ಸಚಿವರು ಬಜೆಟ್ ಮಂಡಿಸುವ ತನಕ ಯಾರೂ ಹೊರಗೆ ಬರುವುದಿಲ್ಲ.
ಬಜೆಟ್ ಪ್ರತಿ ಸೋರಿಕೆಯನ್ನು ತಡೆಯಲು ಇಲೆಕ್ಟ್ರಾನಿಕ್ ಜಾಮರ್, ಸೈಬರ್ ಸೆಕ್ಯುರಿಟಿಗಳನ್ನು ಬಳಸಲಾಗುತ್ತದೆ. ಹಣಕಾಸು ಸಚಿವರು ಮಾತ್ರವೇ ಮುದ್ರಣ ಸ್ಥಳಕ್ಕೆ ಬಂದು ಹೋಗಬಹುದು. ಆದರೆ ಮೊಬೈಲ್ ಫೋನ್ ಕೊಂಡೊಯ್ಯುವಂತೆ ಇಲ್ಲ.
1950ನೇ ಇಸವಿಯಲ್ಲಿ ಬಜೆಟ್ ಸೋರಿಕೆ ನಂತರ ಈ ಕ್ರಮ ಅಳವಡಿಕೆ
1950ರಲ್ಲಿ ಬಜೆಟ್ ಪ್ರತಿಯ ವಿವರ ಸೋರಿಕೆ ಆದ ಬಳಿಕ ಈ ರೀತಿ ಮುಂಜಾಗ್ರತಾ ಕ್ರಮವನ್ನ ಹಣಕಾಸು ಸಚಿವಾಲಯ ತೆಗೆದುಕೊಳ್ಳುತ್ತಿದೆ. 1980ರಲ್ಲಿ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿ ಮುದ್ರಣಾಲಯ ಸ್ಥಾಪಿಸಲಾಯಿತು. ಅಲ್ಲಿಂದೀಚೆಗೆ ಇದೇ ಮುದ್ರಣಾಲಯದಲ್ಲಿ ಕೇಂದ್ರ ಬಜೆಟ್ ಪ್ರತಿಗಳ ಮುದ್ರಣ ಮಾಡುವ ಪದ್ದತಿಯನ್ನು ಪಾಲನೆ ಮಾಡಿಕೊಂಡು ಬಂದಿದೆ.
ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಯಾವಾಗ ಮಂಡಿಸುತ್ತಾರೆ?
ನಿರ್ಮಲಾ ಸೀತಾರಾಮನ್ ದಶಕದ ಹಿಂದಿನ ಸಂಪ್ರದಾಯವನ್ನು ಮುಂದುವರೆಸುತ್ತ ಬಂದಿದ್ದಾರೆ.ಈ ಬಾರಿ ಕೂಡ ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ.
ಕೇಂದ್ರ ಬಜೆಟ್ ಸಮಯಲ್ಲಿ ಶುರುವಾಗುತ್ತೆ?
ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಬೆಳಿಗ್ಗೆ 11:00 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅವರು ಈಗಲೇ ಆರು ಪೂರ್ಣ ಬಜೆಟ್‌ಗಳನ್ನು ಮತ್ತು ಎರಡು ಮಧ್ಯಂತರ ಬಜೆಟ್‌ಗಳು ಸೇರಿದಂತೆ ಇದು ಅವರ ಎಂಟನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications