Budget 2025: ದಿನಾಂಕ ಮತ್ತು ಸಮಯ.. ನಿರ್ಮಲಾ ಸೀತಾರಾಮನ್ ಈ ವರ್ಷ ಯಾವಾಗ ಬಜೆಟ್ ಮಂಡಿಸುತ್ತಾರೆ? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರ 2025-26 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದೆ. ಬಜೆಟ್ (Budget 2025) ಬಗ್ಗೆ ಈಗಾಗಲೇ ದೇಶದ ಜನರಿಗೆ ದೊಡ್ಡ ಮಟ್ಟದ ಕುತೂಹಲ ಉಂಟಾಗಿದೆ. ಅದರಲ್ಲೂ ಕೆಲವು ತಜ್ಞರು ಯಾವೆಲ್ಲಾ ವಲಯಕ್ಕೆ ಏನೆಲ್ಲಾ ಘೋಷಣೆ ಆಗಲಿದೆ ಎಂಬ ಚರ್ಚೆಗಳು ಶುರುವಾಗಿದೆ. ಈಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವಿಧ ವಲಯದ ನಾಯಕರೊಂದಿಗೆ ಬಜೆಟ್ ಪೂರ್ವ ಚರ್ಚೆ ನಡೆಸುತ್ತಿದ್ದಾರೆ. ಹಾಗಿದ್ರೆ ಕೇಂದ್ರ ಬಜೆಟ್ ಯಾವ ದಿನಾಂಕದಂದು ಯಾವ ಸಮಯಕ್ಕೆ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ..

ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಭೆ ಕೂಡ ನಡೆಸಿದ್ದಾರೆ. ಉನ್ನತ ಕೈಗಾರಿಕೋದ್ಯಮಿಗಳಿಂದ ಹಿಡಿದು ಸಾಮಾನ್ಯ ಮನುಷ್ಯನವರೆಗೆ ಕೇಂದ್ರ ಬಜೆಟ್ ಜೀವನದ ಎಲ್ಲಾ ಹಂತಗಳಲ್ಲಿ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಎಲ್ಲರ ಚಿತ್ತ ಈ ಬಾರಿ ಬಜೆಟ್ ಮೇಲೆ ನೆಟ್ಟಿದೆ. ಇದು ಸೀತಾರಾಮನ್ ಅವರ ಸತತ ಎಂಟನೇ ಬಜೆಟ್ ಆಗಿದೆ. ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ.

Budget 2025: ಕೇಂದ್ರ ಬಜೆಟ್ ಮಂಡನೆಯ ದಿನಾಂಕ ಮತ್ತು ಸಮಯ ಯಾವಾಗ?

ಭಾರತದಲ್ಲಿನ ಪ್ರಮುಖ ಹಣಕಾಸು ಘಟನೆಯ ಕೇಂದ್ರ ಬಿಂದು ಕೇಂದ್ರ ಬಜೆಟ್ ಸರ್ಕಾರದ ನೀತಿಗಳು, ತೆರಿಗೆ ಸ್ಲ್ಯಾಬ್‌ಗಳು ಮತ್ತು ಇತರ ಪ್ರಮುಖ ಕಲ್ಯಾಣ ಯೋಜನೆಗಳ ಮಾರ್ಗಸೂಚಿಯನ್ನು ಬಜೆಟ್ ಮೇಲೆ ನಿಂತಿದೆ.

ಈ ವರ್ಷದ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಯಾವಾಗ ಮಂಡಿಸುತ್ತಾರೆ?

ನಿರ್ಮಲಾ ಸೀತಾರಾಮನ್ ದಶಕದ ಹಿಂದಿನ ಸಂಪ್ರದಾಯವನ್ನು ಮುಂದುವರೆಸುತ್ತ ಬಂದಿದ್ದಾರೆ.ಈ ಬಾರಿ ಕೂಡ ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸುತ್ತಾರೆ. ಕೇಂದ್ರ ಬಜೆಟ್ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಇಲ್ಲದಿದ್ದರೂ, ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸ್ಪಷ್ಟವಾಗಿದೆ.

ಈ ವರ್ಷದ ಫೆಬ್ರವರಿ 1 ಶನಿವಾರದಂದು ಬರುವುದರಿಂದ ದಿನಾಂಕದ ಬಗ್ಗೆ ಕೆಲವು ಆತಂಕಗಳು ಇದ್ದವು ಅದರೆ ಈ ಹಿಂದೆ ಶನಿವಾರ ಕೇಂದ್ರ ಬಜೆಟ್ ಮಂಡಿಸಲಾಗಿತು.

ಕೇಂದ್ರ ಬಜೆಟ್ ಸಮಯಲ್ಲಿ ಶುರುವಾಗುತ್ತೆ?

ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಬೆಳಿಗ್ಗೆ 11:00 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅವರು ಈಗಲೇ ಆರು ಪೂರ್ಣ ಬಜೆಟ್‌ಗಳನ್ನು ಮತ್ತು ಎರಡು ಮಧ್ಯಂತರ ಬಜೆಟ್‌ಗಳು ಸೇರಿದಂತೆ ಇದು ಅವರ ಎಂಟನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.

ಇದು 2024 ರ ಲೋಕಸಭಾ ಚುನಾವಣೆಯ ನಂತರ ಸೀತಾರಾಮನ್ ಅವರ ಎರಡನೇ ಪೂರ್ಣ ಬಜೆಟ್ ಆಗಿದ್ದು, ಮೋದಿ ಸರ್ಕಾರವು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದೆ. ಆದ್ದರಿಂದ ಈ ಬಾರಿಯ ಕೇಂದ್ರ ಬಜೆಟ್ ಅಮೃತ್ ಕಾಲ್ ಅವರ 'ವಿಕ್ಷಿತ್ ಭಾರತ್' ವಿಷಯದ ಸುತ್ತ ಕೇಂದ್ರೀಕೃತವಾಗಿರುವ ಸಾಧ್ಯತೆ ಇದೆ.

ಕೆಲವು ನಿರೀಕ್ಷಿತ ವಲಯಗಳ ನಿರೀಕ್ಷೆಗಳು ಈ ಕೆಳಗಿನಂತೆ ಇವೆ.

ಕೇಂದ್ರ ಬಜೆಟ್ ಮೇಲೆ ವಿವಿಧ ವಲಯಗಳಲ್ಲಿ ನಿರೀಕ್ಷೆಗಳು ಈ ಬಾರಿ ಹೆಚ್ಚುತ್ತಿವೆ ಅವುಗಳೆಂದರೆ,

ಆದಾಯ ತೆರಿಗೆ ಪರಿಹಾರ

ಈ ಬಾರಿಯ ಬಜೆಟ್‌ನಲ್ಲಿ ದೇಶದ ವೇತನ ವರ್ಗವು ಆದಾಯ ತೆರಿಗೆಯಲ್ಲಿ ಪರಿಹಾರ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುತ್ತದೆ. ಕಳೆದ ವರ್ಷವೂ ಜನರು ಹಣಕಾಸು ಸಚಿವರಿಂದ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದರು. ಆದರೆ ಈ ಬಾರಿ ತೆರಿಗೆ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ದೊಡ್ಡ ಘೋಷಣೆಯನ್ನೇ ನಿರೀಕ್ಷಿಸಲಾಗಿದೆ.

ವರ್ಷಕ್ಕೆ 15 ಲಕ್ಷದವರೆಗೆ ಗಳಿಸುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಲ್ಲಿ ಕಡಿತವನ್ನು ಮಾಡುವಂತಹ ನಿರೀಕ್ಷೆ ಇದೆ. ಈ ಕ್ರಮವು ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರವನ್ನು ತರಬಹುದು ಮತ್ತು ಬಿಸಾಡಬಹುದಾದ ಆದಾಯ ಮತ್ತು ಗ್ರಾಹಕ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಬಹುದು. ಅದಕ್ಕಾಗಿ ಕೈಗಾರಿಕಾ ಸಂಸ್ಥೆಗಳೂ ಬೇಡಿಕೆ ಸಹ ಇದೆ.

ಇಂಧನದ ಮೇಲಿನ ಅಬಕಾರಿ ಸುಂಕ

ಆದಾಯ ತೆರಿಗೆಯ ಹೊರತಾಗಿ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಮತ್ತು ಉದ್ಯೋಗ ವಲಯಗಳಿಗೆ ಹೆಚ್ಚಿನ ಒತ್ತು ನೀಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಪೆಟ್ರೋಲಿಯಂ ಮೇಲಿನ ಅಬಕಾರಿಯನ್ನು ಸ್ವಲ್ಪ ಕಡಿಮೆ ಮಾಡಬೇಕೆಂಬ ಬೇಡಿಕೆ ಇದೆ.

ಸರ್ಕಾರದ ಬಂಡವಾಳ ವೆಚ್ಚ

ಜಿಡಿಪಿ ಬೆಳವಣಿಗೆಯ ನಡುವೆ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 2024 ರ ಸಾರ್ವತ್ರಿಕ ಚುನಾವಣೆಯ ಕಾರಣ ಕೇಂದ್ರದ ಕ್ಯಾಪೆಕ್ಸ್ ಅನ್ನು ಕಳೆದ ವರ್ಷ ಕಡಿಮೆ ಮಾಡಲಾಗಿತ್ತು.

ಫೆಬ್ರವರಿ 1 ರ ಶನಿವಾರದಂದು ಷೇರುಪೇಟೆ ಓಪನ್

ಕೇಂದ್ರ ಬಜೆಟ್ ಮಂಡನೆಗಾಗಿ ಭಾರತೀಯ ಷೇರು ಮಾಡುಕಟ್ಟೆಗಳು ತೆರೆದಿರುತ್ತವೆ. ಫೆಬ್ರವರಿ 1 ರ ಶನಿವಾರದಂದು ತೆರೆದಿರುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಎರಡೂ ಫೆಬ್ರುವರಿ 1 ರಂದು ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ವ್ಯಾಪಾರದ ವಹಿವಾಟಿನ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+