ದೇಶದ ಜನರ ಚಿತ್ತ ಮೋದಿ ಬಜೆಟ್‌ನತ್ತ ನೆಟ್ಟಿದೆ. ಎಲ್ಲಾ ವಲಯದಲ್ಲೂ ಸಹ ಕೇಂದ್ರ ಬಜೆಟ್ (Budget 2025) ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಹಿರಿಯ ನಾಗರೀಕರು ಇದರಿಂದ ಹೊರತಾಗಿಲ್ಲ.ಹೌದು, ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಕೇಂದ್ರ ಬಜೆಟ್ ಮಂಡಿಸಲು ಸಿದ್ಧವಾಗಿದೆ. ಇದೇ ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಹಿರಿಯ ನಾಗರಿಕರು ಕೆಲವೊಂದು ಬೇಡಿಕೆಯ ನಿರೀಕ್ಷೆಯಲ್ಲಿ ಇದ್ದಾರೆ? ಹಾಗಿದ್ರೆ ಅವುಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು,ಈ ಬಾರಿಯ ಬಜೆಟ್ ಮೇಲೆ ಜನರಿಗೆ ಹೆಚ್ಚಿನ ನಿರೀಕ್ಷೆಗಳುನ್ನು ಇಟ್ಟುಕೊಂಡಿದ್ದಾರೆ.ಅದರಲ್ಲೂ ಟ್ಯಾಕ್ಸ್ ಸ್ಲ್ಯಾಬ್ಗಳಲ್ಲಿ ಇತಿ,ಬೆಲೆ ಏರಿಕೆ, ವೈದ್ಯಕೀಯ ಖರ್ಚುಗಳಲ್ಲಿ ಏರಿಕೆ, ಆಹಾರ ಬೆಲೆ ಏರಿಕೆ ಹೀಗೆ ಹಲವು ರೀತಿಯ ಏರಿಕೆಗಳು ಇವೆ ಇದರಲ್ಲಿ ಹಿರಿಯ ನಾಗರಿಕರ ಕೆಲವು ನಿರೀಕ್ಷೆಗಳು ಒಳಗೊಂಡಿವೆ.ಹೀಗಾಗಿ ಈ ಬಾರಿ ಹಿರಿಯ ನಾಗರಿಕರು ಕೇಂದ್ರ ಸರ್ಕಾರಕ್ಕೆ ಒಂದಿಷ್ಟು ಬೇಡಿಕೆಗಳು ಇಟ್ಟಿಕೊಂಡಿದ್ದಾರೆ ಅದರಲ್ಲಿ ಕೆಲವುಗಳು ಈ ಕೆಳಗಿನಂತೆ ಇವೆ.

ತೆರಿಗೆ ವ್ಯವಸ್ಥೆಯನ್ನು ಸರಳ ಮಾಡಿ
ತೆರಿಗೆ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಈಗಾಗಲೇ 75 ಮಯಸ್ಸಿನ ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಹಲವಾರು ವಿನಾಯಿತಿಯನ್ನು ನೀಡಿದ್ದಾರೆ. ಒಂದು ವೇಳೆ ಅವರಿಗೆ ಪೆನ್ಷನ್ ಹಣದಿಂದ ಮಾತ್ರ ಬಡ್ಡಿ ಬರುವ ಆದಾಯವಿದ್ದರೆ ಅವರಿಗೆ ಟ್ಯಾಕ್ಸ್ ರಿಟರ್ನ್ ತುಂಬುವುದಿರಿಂದ ವಿನಾಯಿತಿ ನೀಡಲಾಗಿದೆ. ಆದರೆ ಕಡಿಮೆ ಅದಕ್ಕಿಂತ ಕಡಿಮೆ ವಯಸ್ಸಿನವರು ಈ ಟ್ಯಾಕ್ಸ್ ತುಂಬುವ ಪ್ರಕ್ರಿಯೆಯನ್ನ ಇನ್ನುಷ್ಟು ಸರಳ ಮಾಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳ ಮಾಡಿ
ಸರ್ಕಾರ ಈಗ ನೀಡುತ್ತಿರುವ ಮೂಲ ವಿನಾಯತಿಯನ್ನು ಹಿರಿಯ ನಾಗರಿಕರಿಗಾಗಿ ಬದಲು ಮಾಡಬೇಕೆಂಬ ಕೋರಿಕೆ ಇದೆ. ಹೊಸ ಟ್ಯಾಕ್ಸ್ ರಜಿಮ್ನಲ್ಲಿ ಆದಾಯ ತೆರಿಗೆಯ ಮೇಲಿನ ವಿನಾಯಿತಿಯ ಮಿತಿಯ್ನು ಹೆಚ್ಚಿಸಬೇಕು ಎಂದು ಬೇಡಿಕೆಗಳು ಕೇಂದ್ರ ಸರ್ಕಾರಕ್ಕೆ ಬರುತ್ತಿವೆ.
ಉಳಿತಾಯದ ಸ್ಕೀಮ್ ಮೇಲೆ ಹೆಚ್ಚು ಪ್ರಯೋಜನಕ್ಕೆ ಬೇಡಿಕೆ
ಪೋಸ್ಟ್ ಆಫೀಸ್ನಲ್ಲಿರುವ ಉಳಿತಾಯದ ಮೇಲೆ ಹೆಚ್ಚಿನ ಪ್ರಯೋಜನಗಳನ್ನು ನೀಡಬೇಕು. ಹಿರಿಯ ನಾಗರಿಕರು ತಮ್ಮ ಉಳಿತಾಯದಲ್ಲಿ ಪಡೆಯುತ್ತಿರುವ ಆದಾಯ ಮೂಲ ಪೋಸ್ಟ್ ಆಫೀಸ್ನಲ್ಲಿರುವ ಉಳಿತಾಯ ಖಾತೆ.ಅವರು ಹೆಚ್ಚು ಉಳಿತಾಯ ಪ್ರಮುಖ ಭಾಗವೆಂದೇ ಹೇಳಬಹುದು. ಇದನ್ನು ಕಡಿಮೆ ಮಾಡುವುದರಿಂದ ಅವರ ಉಳಿತಾಯದ ಮೇಲೆ ಹೆಚ್ಚು ವಿನಾಯಿತಿ ಸಿಗುತ್ತದೆ. ಹಣಕಾಸಿನ ಒತ್ತಡಗಳು ಕಡಿಮೆಯಾಗಿ ಅವರಿಗೆ ಹಣ ಉಳಿತಾಯ ಮಾಡಲು ಸಹಾಯವಾಗುತ್ತದೆ.
ಟಿಡಿಎಸ್ ಮಿತಿಯನ್ನು ಹೆಚ್ಚಳ ಮಾಡಬೇಕು
ಹಿರಿಯ ನಾಗರಿಕರ ಉಳಿತಾಯದ ಹಣದ ಮೇಲೆ ಬರುವ ಬಡ್ಡಿಯ ಮೇಲೆ ಹಲವು ಬ್ಯಾಂಕ್ಗಳು ಟಿಡಿಎಸ್ ನೆಪವೊಡ್ಡಿ ಅವರ ಹಣವನ್ನು ಕಡಿಮೆ ಮಾಡುತ್ತಿವೆ. ಈ ಬಾರಿಯ ಬಜೆಟ್ನಲ್ಲಿ ಇದರ ಮಿತಿಯನ್ನು ಹೆಚ್ಚಿಸಬೇಕು ಎಂಬುದು ಹಿರಿಯ ನಾಗರಿಕರ ಬೇಡಿಕೆ ಇದೆ. ಸದ್ಯ ಇದರ ಮಿತಿ 50 ಸಾವಿರ ರೂಪಾಯಿಗಳಷ್ಟಿದ್ದು ಅದನ್ನು ಇನ್ನೂ ಹೆಚ್ಚಿಗೆ ಏರಿಸಬೇಕು ಎಂಬುದು ಅವರು ಕೇಂದ್ರ ಸರ್ಕಾರಕ್ಕೆ ಇಟ್ಟಿರುವ ಬೇಡಿಕೆಯಾಗಿದೆ.
ವೈದ್ಯಕೀಯ ಖರ್ಚುಗಳ ಹೆಚ್ಚಿನ ಬೇಡಿಕೆ
ಹಿರಿಯ ನಾಗರಿಕರಿಗೆ ಹೆಚ್ಚು ಖರ್ಚಗಳು ಆಗುವುದು ವೈದ್ಯಕೀಯ ಸೇವೆಗಳಿಗಾಗಿ ಅದಕ್ಕಾಗಿ ಅವರ ಇನ್ಶೂರೆನ್ಸ್ ಪ್ರಿಮಿಯಮ್ ಹಾಗೂ ನಿತ್ಯ ವೈದ್ಯಕೀಯರ ಖರ್ಚುಗಳು ಇವುಗಳ ಮೇಲೆ ಈ ಬಾರಿಯ ಬಜೆಟ್ ಹೆಚ್ಚು ಕಾಳಜಿಯನ್ನು ಇಟ್ಟುಕೊಂಡು ಬಜೆಟ್ ಮಂಡನೆ ಮಾಡಬೇಕು ಎಂಬ ನಿರೀಕ್ಷೆಯಿದೆ.
ಈ ವರ್ಷದ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಯಾವಾಗ ಮಂಡಿಸುತ್ತಾರೆ?
ನಿರ್ಮಲಾ ಸೀತಾರಾಮನ್ ದಶಕದ ಹಿಂದಿನ ಸಂಪ್ರದಾಯವನ್ನು ಮುಂದುವರೆಸುತ್ತ ಬಂದಿದ್ದಾರೆ.ಈ ಬಾರಿ ಕೂಡ ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸುತ್ತಾರೆ. ಕೇಂದ್ರ ಬಜೆಟ್ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಇಲ್ಲದಿದ್ದರೂ, ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸ್ಪಷ್ಟವಾಗಿದೆ
ಕೇಂದ್ರ ಬಜೆಟ್ ಸಮಯಲ್ಲಿ ಶುರುವಾಗುತ್ತೆ?
ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಬೆಳಿಗ್ಗೆ 11:00 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅವರು ಈಗಲೇ ಆರು ಪೂರ್ಣ ಬಜೆಟ್‌ಗಳನ್ನು ಮತ್ತು ಎರಡು ಮಧ್ಯಂತರ ಬಜೆಟ್‌ಗಳು ಸೇರಿದಂತೆ ಇದು ಅವರ ಎಂಟನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications