ಬಹುನಿರೀಕ್ಷಿತ ಕೇಂದ್ರ ಬಜೆಟ್( Union Budget) ಮಂಡಿಸಲಾಗಿದೆ. ಈ ಬಜೆಟ್ ನಲ್ಲಿ ತುಮಕೂರು ಜಿಲ್ಲೆಗೆ ಸಿಕ್ಕಿದೇನು? ತುಮಕೂರು ಜನತೆಯ ಕನಸಿಗೆ ಮೋದಿ ಕೊಟ್ಟ ಗಿಫ್ಟ್ ಯಾವುದು? ಎರಡನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಬಜೆಟ್‌ನಲ್ಲಿ (Budget) ಅನುದಾನ ಬಿಡುಗಡೆ ಆಯ್ತಾ? ಇಲ್ಲವೋ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು, ಕೇಂದ್ರ ಬಜೆಟ್ ತುಮಕೂರು ನಗರಕ್ಕೆ ಬಂಪರ್ ಆಫರ್ ಸಿಕ್ಕಿದೆ. ಮಹಾತ್ವಾಕಾಂಕ್ಷಿಯ ಯೋಜನೆಗಳಾದ ಎರಡು ರೈಲ್ವೆ ಯೋಜನೆಗಳಿಗೆ ಬಜೆಟ್ ಉತ್ತೇಜನ ನೀಡಿದೆ. ಜತೆಗೆ ಕೈಗಾರಿಕಾ ವಲಯಕ್ಕೆ ನೀಡಿರುವ ಪ್ರೋತ್ಸಾಹ ಕೈಗಾರಿಕಾ ಹಬ್ ಆಗಿ ಹೊರಹೊಮ್ಮುತ್ತಿರುವ ತುಮಕೂರಿಗೆ ದೊಡ್ಡ ಕೊಡುಗೆಯೇ ಸಿಕ್ಕಿದೆ ಎಂದೇ ಹೇಳಬಹುದು.

ಸಚಿವ ವಿ.ಸೋಮಣ್ಣನವರು ತುಮಕೂರಿಗೆ 2027ಕ್ಕೆ ತುಮಕೂರು -ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯನ್ನು ಲೋಕಾರ್ಪಣೆ ಮಾಡುವುದ್ದಾಗಿ ಹೇಳಿದ್ದರು. ಆದರೆ ಇದೀಗ ಈ ಎರಡು ರೈಲ್ವೆ ಯೋಜನೆಯ ವೇಗಕ್ಕೆ ಕೇಂದ್ರ ಸರಕಾರ ಸಾಥ್ ಕೊಟ್ಟಿದೆ.
ತುಮಕೂರು ನಗರಕ್ಕೆ ಕೇಂದ್ರ ಕೊಟ್ಟ ಅನುದಾನವೆಷ್ಟು?
ತುಮಕೂರು ನಗರದ ರೈಲ್ವೆ ಅಭಿವೃದ್ದಿಗೆ 7,564 ಕೋಟಿ ರೂ ನೀಡಿದೆ. ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ರೂ. ಮೀಸಲಿಟ್ಟಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗಕ್ಕೆ 549 ಕೋಟಿ ರೂ. ಮತ್ತು ತುಮಕೂರು-ರಾಯದುರ್ಗ ಯೋಜನೆಗೆ 434 ಕೋಟಿ ರೂ. ಅನುದಾನ ನೀಡಿರುವುದು ಜಿಲ್ಲೆಗೆ ಭರ್ಜರಿ ಆಫರ್ ಕೊಟ್ಟಿದೆ.
ಎರಡನೇ ಏರ್‌ಪೋರ್ಟ್ ಕನಸಿಗೆ ರಕ್ಕೆ
ಬಜೆಟ್‌ನಲ್ಲಿ 120 ನಗರಗಳಿಗೆ ವಿಮಾನ ಸಂಪರ್ಕದ ಭರವಸೆಯನ್ನು ಮೋದಿ ಬಜೆಟ್ ಕೊಟ್ಟಿದೆ. ತುಮಕೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸಿಗೆ ಭರವಸೆಯನ್ನು ಈ ಬಾರಿಯ ಬಜೆಟ್‌ನಲ್ಲಿ ನೀಡಿದ್ದಾರೆ.
ಸ್ಟಾರ್ಟ್‌ಅಪ್‌ಗೆ ಪೋತ್ಸಾಹ
ಎಂಎಸ್‌ಎಂಇಗಳಿಗೆ 20 ಕೋಟಿ ರೂ.ವರೆಗೆ ಸಾಲ ಸೌಲಭ್ಯ, ಸ್ಟಾರ್ಟ್‌ಅಪ್‌ಗಳಿಗೆ 27 ವಲಯಗಳಲ್ಲಿ ಸಾಲ ಯೋಜನೆ ಸೇರಿದಂತೆ ಕೈಗಾರಿಕೆಗೆ ನೀಡಿರುವ ಪ್ರೋತ್ಸಾಹ ಕೈಗಾರಿಕಾ ಹಬ್ ತುಮಕೂರಿಗೆ ಸಹಾಯಕವಾಗುತ್ತವೆ.
ಬಜೆಟ್ ಬಗ್ಗೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಪ್ರತಿಕ್ರಿಯೆ
ಕೇಂದ್ರ ಬಜೆಟ್ ಕರ್ನಾಟಕಕ್ಕೆ ರೈಲ್ವೆ ಬಜೆಟ್ 7564 ಕೋಟಿ ನೀಡಲಾಗಿದೆ. ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ನೀಡಲಾಗಿದೆ. ವಿಶೇಷವಾಗಿ ತುಮಕೂರು-ಚಿತ್ರದುರ್ಗ-ದಾವಣೆಗೆರೆ ರೈಲು ಮಾರ್ಗಕ್ಕೆ 549 ಕೋಟಿ ರೂ. ಅನುದಾನ ಹಾಗೂ ರಾಯದುರ್ಗ-ತುಮಕೂರು ಕಲ್ಯಾಣದುರ್ಗ ರೈಲು ಮಾರ್ಗಕ್ಕೆ 434 ಕೋಟಿ ರೂ. ಅನುದಾನ ನೀಡಿರುವುದು ಅತ್ಯಂತ ಸಂತಸ ತಂದಿದೆ.
ಬಯಲು ಸೀಮೆಯ ಅಭಿವೃದ್ಧಿಗೆ ಹೊಸ ಇತಿಹಾಸವನ್ನೇ ಬರೆಯಲು ಕಾರಣೀಭೂತರಾದ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ.ಸೋಮಣ್ಣನವರಿಗೆ ತುಂಬು ಹೃದಯದ ಧನ್ಯವಾದಗಳು' ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಪ್ರತಿಕ್ರಿಯಿಸಿದ್ದಾರೆ.
ಈಗ 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕಟ್ಟಂಗಿಲ್ಲ ಬಜೆಟ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಬಜೆಟ್ ದೊಡ್ಡ ಪರಿಹಾರವನ್ನು ನೀಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯ ಪ್ರಕಾರ, ವಾರ್ಷಿಕ ಆದಾಯ 12 ಲಕ್ಷದವರೆಗಿನ ಉದ್ಯೋಗಿಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.
ಹಿರಿಯ ನಾಗರಿಕರಿಗೆ ಬಜೆಟ್‌ನಲ್ಲಿ ಸಿಕ್ಕ ಪರಿಹಾರಗಳೇನು?
* ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ವಿನಾಯಿತಿಯನ್ನು ನೀಡಲಾಗಿದೆ.
* 36 ಜೀವ ರಕ್ಷಕ ಔಷಧಿಗಳಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ * ದೇಶದಲ್ಲಿ 200 ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ನಿರ್ಮಾಣ
* ವೈದ್ಯಕೀಯ ಉಪಕರಣಗಳು ಮತ್ತು ಕ್ಯಾನ್ಸರ್ ಔಷಧಿಗಳು ದರ ಕಡಿಮೆ * ಆರು ಜೀವರಕ್ಷಕ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.5 ಕಡಿತಗೊಳಿಸಲಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications