ಒಂದು ಪೈಸೆನೂ ತೆರಿಗೆ ಕಟ್ಟಂಗಿಲ್ಲ! ನೀವೆ ಇಷ್ಟೊಂದು ತೆರಿಗೆ ಕಟ್ಟೋದು ಹೌದು, ದೇಶದ ಜನತೆ ಆದಾಯ ತೆರಿಗೆ ಕಟ್ಟಿ ಕಟ್ಟಿ ಸುಸ್ತಾಗಿದ್ದಾರೆ. ಜೊತೆಗೆ ಪರೋಕ್ಷ ತೆರಿಗೆಗಳು ಕೂಡ ಇವೆ. ಆದ್ರೆ, ಕೆಲವು ದೇಶಗಳಲ್ಲಿ ಆದಾಯ ತೆರಿಗೆ ಕಟ್ಟುವ ಪದ್ದತಿಯೇ ಇಲ್ಲ ಅಂದ್ರೆ ನಂಬುತ್ತೀರಾ? ಇದು ಅಚ್ಚರಿ ಆದ್ರೂ ನಂಬಲೇಬೇಕು! ಕೆಲ ದೇಶಗಳಲ್ಲಿ ಅಲ್ಲಿನ ಜನರು ಎಷ್ಟೇ ಆದಾಯ ಗಳಿಸಿದ್ರೂ ಒಂದೇ ಒಂದು ಪೈಸೆ ತೆರಿಗೆ ಕಟ್ಟು ಆಗಿಲ್ಲ. ಪರೋಕ್ಷ ತೆರಿಗೆಗಳನ್ನು ಮಾತ್ರ ಕಟ್ಟಬೇಕು. ಅಂತಹ ದೇಶಗಳ ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ..
ಸರ್ಕಾರ ಅಧಿಕಾರ ನಡೆಸಲು ಮೂಲವೆಂದರೆ ಆದಾಯ ತೆರಿಗೆ. ಬಹುತೇಕ ದೇಶಗಳು ಜನರು ಕಟ್ಟುವ ಆದಾಯ ತೆರಿಗೆಯನ್ನೇ ನಂವಿಕೊಂಡು ಅಧಿಕಾರವನ್ನು ನಡೆಸುತ್ತಿದ್ದೇವೆ. ದೇಶದಲ್ಲಿ ಆದಾಯ ತೆರಿಗೆ ವಿಧಿಸುವ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಆದರೆ ಆದಾಯ ತೆರಿಗೆಯೇ ಬೇಡ ಎಂದು ಹೇಳುವ ದೇಶಗಳು ಅತಿ ಕಡಿಮೆ ಅವು ಯಾವುವು ಎಂಬ ಮಾಹಿತಿ ಈ ಕೆಳಗಿನಂತೆ ಇದೆ..

ಆದಾಯ ತೆರಿಗೆ ವಿಧಿಸುವ ದೇಶಗಳು ಪಟ್ಟಿ ಇಲ್ಲಿದೆ ಮಾಹಿತಿ
- ಆಸ್ಟ್ರಿಯಾ: ಶೇ.55ರಷ್ಟು ತೆರಿಗೆ
- ಐವರಿ ಕೋಸ್ಟ್: ಶೇ.60ರಷ್ಟು ತೆರಿಗೆಬೆಲ್ಜಿಯಂ: ಶೇ. 50ರಷ್ಟು ತೆರಿಗೆ
- ಫಿನ್ಲ್ಯಾಂಡ್: ಶೇ.57.30ರಷ್ಟು ತೆರಿಗೆ
- ಜಪಾನ್: ಶೇ. 55.95ರಷ್ಟು ತೆರಿಗೆ
- ಡೆನ್ಮಾರ್ಕ್: ಶೇ.55.09 ರಷ್ಟು ತೆರಿಗೆ
- ಸ್ವೀಡನ್: ಶೇ.52ರಷ್ಟು ತೆರಿಗೆ
ಅತಿ ಹೆಚ್ಚು ಆದಾಯ ತೆರಿಗೆ ವಿಧಿಸುವ ಹಲವು ದೇಶಗಳು ಜಾಗತಿಕವಾಗಿ ಸಂತಸದಿಂದ ಇರುವ ದೇಶಗಳ ಇಂಡೆಕ್ಸ್ ನಲ್ಲಿ ಮೇಲಿವೆ.
ತೆರಿಗೆ ಕಟ್ಟದ ದೇಶಗಳು ಯಾವುವು ಈ ಕೆಳಗಿಂತೆ ಇವೆ
- ಸೌದಿ ಅರೇಬಿಯಾ
- ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಐ)
- ಬಹರೇನ್
- ಬಹಾಮಾಸ್
- ಕುವೈತ್
- ಸೌದಿ ಅರೇಬಿಯಾ
- ಒಮಾನ್
- ಕತಾರ್
ಇವೆಲ್ಲವೂ ದೇಶಗಳು ಬಹುತೇಕ ತೈಲ ರಫ್ತು ಮಾಡುವ ದೇಶಗಳಾಗಿವೆ. ಈ ದೇಶಗಳಲ್ಲಿ ಜನ ಎಷ್ಟೇ ದುಡಿದರೂ ಅವರ ಮೇಲೆ ಆದಾಯ ತೆರಿಗೆ ವಿಧಿಸುವುದಿಲ್ಲ. ಆದರೆ ಪರೋಕ್ಷ ತೆರಿಗೆಗಳನ್ನು ವಿಧಿಸಲಾಗುತ್ತದೆ.
ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಯಾವಾಗ ಮಂಡಿಸುತ್ತಾರೆ?
ನಿರ್ಮಲಾ ಸೀತಾರಾಮನ್ ದಶಕದ ಹಿಂದಿನ ಸಂಪ್ರದಾಯವನ್ನು ಮುಂದುವರೆಸುತ್ತ ಬಂದಿದ್ದಾರೆ.ಈ ಬಾರಿ ಕೂಡ ಫೆಬ್ರವರಿ 1, 2025 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ.
ಕೇಂದ್ರ ಬಜೆಟ್ ಸಮಯಲ್ಲಿ ಶುರುವಾಗುತ್ತೆ?
ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಬೆಳಿಗ್ಗೆ 11:00 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅವರು ಈಗಲೇ ಆರು ಪೂರ್ಣ ಬಜೆಟ್‌ಗಳನ್ನು ಮತ್ತು ಎರಡು ಮಧ್ಯಂತರ ಬಜೆಟ್‌ಗಳು ಸೇರಿದಂತೆ ಇದು ಅವರ ಎಂಟನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
ಬಹಿ ಖಾತಾ ಎಂದರೇನು?
ಸ್ವಾತಂತ್ರ್ಯ ಬಂದ ನಂತರ ಭಾರತೀಯ ಹಣಕಾಸು ಸಚಿವರು ಬಜೆಟ್ ಮಂಡನೆಗೆ ಅದರ ಪ್ರತಿಗಳನ್ನು ಪ್ರತಿವರ್ಷವೂ ಸಂಸತ್ತಿಗೆ ಬ್ರೀಫ್ಕೇಸ್ ಕೊಂಡೊಯ್ಯುವ ಸಂಪ್ರದಾಯವಿತ್ತು. ಇದನ್ನು ಬಹುತೇಕ ಹಲವಾರು ವರ್ಷಗಳು ಎಲ್ಲ ಹಣಕಾಸು ಸಚಿವರು ಪಾಲಿಸಿದ್ದರು. ಆದರೆ 2019ರಲ್ಲಿ ಸರ್ಕಾರ 'ಬಹಿ ಖಾತಾ'ವನ್ನು ಪರಿಚಯಿಸುವ ಮೂಲಕ ಈ ಸಂಪ್ರದಾಯು ಗಮನಾರ್ಹವಾಗಿ ಬದಲಾಯಿತು. ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಹಲವಾರು ವರ್ಷಗಳ ಸಂಪ್ರದಾಯವನ್ನು ಕಳೆದ ವರ್ಷ ಮುರಿದಿದ್ದರು.
ಹಣಕಾಸು ಸಚಿವೆ ಸೀತಾರಾಮನ್ ಅವರು 2019ರಲ್ಲಿ ಬಜೆಟ್ ಪತ್ರವನ್ನು ಹೊತ್ತ ಬಟ್ಟೆಯ ಲೆಡ್ಜರ್ ಅಥವಾ "ಬಹಿ ಖಾತಾ" ಕೊಂಡೊಯ್ಯಲು ನಿರ್ಧರಿಸಿದರು. ಈ ಮೂಲಕ ಹಲವು ವರ್ಷಗಳ ಬ್ರಿಟೀಷ್ ಸಂಪ್ರದಾಯವನ್ನು ಕೈಬಿಟ್ಟು ಈ ಸಂಪ್ರದಾಯಕ್ಕೆ ಭಾರತೀಯ ಸ್ಪರ್ಶ ನೀಡಿದರು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications