ಕೇಂದ್ರ ಬಜೆಟ್‌ವು ಸರ್ಕಾರದ ಆರ್ಥಿಕ ವ್ಯವಹಾರಗಳ ಒಂದು ರೂಪುರೇಷೆಯಾಗಿದ್ದು, ಖರ್ಚು-ವೆಚ್ಚಗಳು, ಆದಾಯ ಮತ್ತು ಹಣಕಾಸು ನೀತಿಗಳನ್ನು ಒಳಗೊಂಡಿದೆ. ಇದು ರಾಷ್ಟ್ರದ ಆರ್ಥಿಕ ರಚನೆಗೆ ಅತ್ಯಂತ ಮುಖ್ಯವಾಗಿದೆ. ಇದು ಒಂದು ವರ್ಷದ ಅವಧಿಯಲ್ಲಿ ಸರ್ಕಾರದ ಖರ್ಚು ಮತ್ತು ಮುಂಬರುವ ಹಣಕಾಸು ವರ್ಷದ ಸರ್ಕಾರದ ಆದಾಯವನ್ನು ವಿವರಿಸುತ್ತದೆ. ಸರಳವಾಗಿ ಹೇಳುವುದಾದರೆ ಒಂದು ದೇಶದ ವಾರ್ಷಿಕ ಆಯವ್ಯಯದ ಲೆಕ್ಕಾಚಾರವನ್ನು ಬಜೆಟ್ ಎನ್ನಬಹುದು. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ವಾರ್ಷಿಕ ಆದಾಯ-ವ್ಯಯ ಸಿದ್ಧಪಡಿಸುವುದು ಸವಾಲಿನ ಕೆಲಸವೇ ಸರಿ.
ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಮುಂಬರುವ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಅವರ ಕ್ರಮವಾಗಿ ಅವರ ಎಂಟನೇ ಬಜೆಟ್ ಮಂಡನೆ ಆಗಿದೆ.

ಭಾರತದ ಬಜೆಟ್ ನ ಮೂಲವನ್ನು ಹುಡುಕುತ್ತಾ ಹೋದರೆ ಇದರ ಮೂಲವು ವಸಾಹತುಶಾಹಿ ಯುಗಕ್ಕೆ ಹೋಗುತ್ತದೆ. ದೇಶದ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಜೆಟ್ ಕಾಲಾನಂತರದಲ್ಲಿ ವಿಕಸನಗೊಳ್ಳುತ್ತಾ ಹೋಗಿದೆ.
ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1860 ರಲ್ಲಿ ಭಾರತೀಯ ಕೌನ್ಸಿಲ್‌ನ ಹಣಕಾಸು ಸದಸ್ಯರಾಗಿದ್ದ ಜೇಮ್ಸ್ ವಿಲ್ಸನ್ ಅವರು ಮಂಡಿಸಿದರು. ಆ ಸಮಯದಲ್ಲಿ ಭಾರತವು ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಯಲ್ಲಿತ್ತು. 1857 ರ ಸಿಪಾಯಿ ದಂಗೆಯ ನಂತರ ಬ್ರಿಟಿಷ್ ಸರ್ಕಾರವು ಎದುರಿಸಿದ ಆರ್ಥಿಕ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಈ ಬಜೆಟ್ ಅನ್ನು ಮಂಡಿಸಲಾಯಿತು. ಸಿಪಾಯಿ ದಂಗೆಯಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ದೊಡ್ಡ ಆರ್ಥಿಕ ಹೊರೆ ಎದುರಾಗಿತ್ತು.. ದಂಗೆಯನ್ನು ನಿಯಂತ್ರಿಸಲು ಮತ್ತು ಪುನರ್ನಿರ್ಮಾಣ ಕಾರ್ಯಗಳಿಗೆ ಹಣ ಬೇಕಾಗಿತ್ತು. ಈ ಬಜೆಟ್‌ನ ಮುಖ್ಯ ಉದ್ದೇಶ ದಂಗೆಯಿಂದ ಉಂಟಾದ ಆರ್ಥಿಕ ಹಾನಿಯನ್ನು ಸರಿಪಡಿಸುವುದು ಮತ್ತು ಬ್ರಿಟಿಷ್ ಸಾಮ್ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದಾಗಿತ್ತು.
ಈ ವೇಳೆ ರಾಣಿ ವಿಕ್ಟೋರಿಯಾ ಭಾರತದಲ್ಲಿನ ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು, ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ಹೊಸ ಕಾಗದದ ನೋಟುಗಳನ್ನು ಪರಿಚಯಿಸಲು ಜೇಮ್ಸ್ ವಿಲ್ಸನ್ ಅವರನ್ನು ಭಾರತಕ್ಕೆ ಕಳುಹಿಸಿದರು. ಈ ಬಂಡಾಯವು ವಿಫಲವಾದ ನಂತರ ಹಣಕಾಸು ವ್ಯವಸ್ಥೆಯನ್ನು ಸರಿಪಡಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು. ಇದರಲ್ಲಿ ಪ್ರಮುಖವಾಗಿ ಆದಾಯ ತೆರಿಗೆಯನ್ನು ಜಾರಿಗೆ ತಂದಿದ್ದು ಅವರ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ಎನ್ನುವುದು ಇಂದಿಗೂ ಇದು ಸರ್ಕಾರದ ಪ್ರಮುಖ ಆದಾಯ ಮೂಲವಾಗಿದೆ.
ಬ್ರಿಟಿಷ್ ಸರ್ಕಾರವು ಮೊದಲಿಗೆ ನೇರ ತೆರಿಗೆಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿತ್ತು, ಆದರೂ ಅವುಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬುವುದರ ಬಗ್ಗೆ ಅವರಿಗೆ ಖಚಿತತೆ ಇರಲಿಲ್ಲ. ಇದಲ್ಲದೆ, ಅಂದು ಬ್ರಿಟಿಷರು ತೀರಾ ಕಳಪೆಯಾಗಿ ರೂಪಿಸಲಾದ ಲೈಸೆನ್ಸ್ ತೆರಿಗೆ ಮಸೂದೆಯ ಯೋಜನೆಯನ್ನು ಹೊಂದಿದ್ದರು. ಜೇಮ್ಸ್ ವಿಲ್ಸನ್ ಅವರ ಆಗಮನದೊಂದಿಗೆ, ಈ ಯೋಜನೆಯನ್ನು ರದ್ದುಗೊಳಿಸಲಾಯಿತು. ಜೇಮ್ಸ್ ವಿಲ್ಸನ್ ಅವರು ಆದಾಯ ತೆರಿಗೆ ಮಸೂದೆಯನ್ನು ಮತ್ತು ಪರಿಷ್ಕೃತ ಲೈಸೆನ್ಸ್ ತೆರಿಗೆ ಮಸೂದೆಯನ್ನು ಪರಿಚಯಿಸಿದರು. ವಾರ್ಷಿಕವಾಗಿ 200 ರೂಪಾಯಿಗಿಂತ ಕಡಿಮೆ ಗಳಿಸುವ ವ್ಯಕ್ತಿಗಳು ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಅವರು ತಮ್ಮ ಹಣಕಾಸು ಹೇಳಿಕೆಯಲ್ಲಿ ತಿಳಿಸಿದರು.
ಜೇಮ್ಸ್ ವಿಲ್ಸನ್ ಅವರು ಇಂಗ್ಲಿಷ್ ವ್ಯವಸ್ಥೆಯನ್ನು ಆಧರಿಸಿ ಖರ್ಚು ವೆಚ್ಚದ ಖಾತೆಗಳನ್ನು ಮಾಸಿಕವಾಗಿ ನಿರ್ವಹಿಸಲು ಒಂದು ವಿಧಾನವಾದ ವೆಚ್ಚದ ವಿವರಣೆ ಪರಿಶೋಧನೆಯನ್ನು (Appropriation Audit) ಕೂಡ ಪರಿಚಯಿಸಿದರು. ಬಂಡಾಯದ ನಂತರದ ಭಾರತದಲ್ಲಿನ ಆರ್ಥಿಕ ತೊಂದರೆಗಳನ್ನು ನಿಭಾಯಿಸುವಲ್ಲಿ ಅವರು ತಮ್ಮ ಅಲ್ಪಾವಧಿಯ ಅವಧಿಯಲ್ಲಿ ಪ್ರಮುಖ ಕೊಡುಗೆಗಳನ್ನು ನೀಡಿದರು.
ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾದ ಆರ್.ಕೆ. ಷಣ್ಮುಖಂ ಚೆಟ್ಟಿಯವರು ನವೆಂಬರ್ 26, 1947 ರಂದು ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು ಮಂಡಿಸಿದರು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications