ಬೆಂಗಳೂರು, ಮಾರ್ಚ್ 26: ವೃತ್ತಿ ಜೀವನದಲ್ಲಿ ಆದಷ್ಟು ಬೇಗ ನಿವೃತ್ತಿ ಹೊಂದಬೇಕು. ಇಳಿವಯಸ್ಸಿನಲ್ಲಿ ದುಡಿದು ದಣಿವಾಗಬಾರದು. ದುಡಿಮೆ ಶುರುಮಾಡಿದ ದಿನದಿಂದಲೇ ಉಳಿತಾಯವನ್ನೂ ಆರಂಭಿಸಿ, ನಿವೃತ್ತಿಯ ಬದುಕಿಗೆ ಬೇಕಾದ ಹಣ-ಕಾಸು ಹೊಂದಿಸಿ ಹೂಡಿಕೆ ಮಾಡಿಬಿಡಬೇಕು.
ಇದು ಪ್ರತಿಯಬ್ಬ ಮಧ್ಯಮ ಮತ್ತು ಕೆಲ ಮಧ್ಯಮ ವರ್ಗದವರ ಕನಸು. ಸತತ 30ರಿಂದ 40 ವರ್ಷ ದುಡಿದು ಜೀವನ ಸವೆಸಿದ ಮೇಲೂ ಅಂತ್ಯಕಾಲದಲ್ಲಿ ಕೈಯಲ್ಲಿ ಬಿಡುಗಾಸಿಲ್ಲದಂತೆ ಆಗಬಾರದು ಅಂದ್ರೆ , ಸರಿಯಾದ - ಸುರಕ್ಷಿತವಾದ ಹೂಡಿಕೆ ಹೊಂದಿರಬೇಕು. ಹೂಡಿಕೆ ಮಾಡಬೇಕು ಎಂದರೆ ಬಂಡವಾಳ ಇರಬೇಕು ! ಹಾಗಾಗೀ ಉಳಿತಾಯ ಬಹಳ ಮುಖ್ಯ.

ಹೀಗೆ ನಿವೃತ್ತಿ ನಂತರದ ಬದುಕಿಗೆ ಒಂದು ಸಧೃಡ ಮತ್ತು ಸುರಕ್ಷಿತ ಆದಾಯದ ಮೂಲ ಹೊಂದಿರಬೇಕು ಎಂದು ಬಯಸುವವರಿಗೆ ಹೂಡಿಕೆ ಮಾಡಲು ಸಾಕಷ್ಟು ಮಾರ್ಗಗಳಿವೆ. ಪಿಪಿಎಫ್ ಸ್ಕೀಂ ನಿಂದ ಹಿಡಿದು ಷೇರು ಮಾರುಕಟ್ಟೆಯವರೆಗೂ ಅನೇಕ ಯೋಜನೆಗಳು ಮತ್ತು ಹೂಡಿಕೆಯ ದಾರಿಗಳೂ ಇವೆ. ಆದ್ರೆ ಲಾಭದಷ್ಟೇ ರಿಸ್ಕ್ ಕೂ ಇರುತ್ತದೆ. ಹಾಗಾಗೀ ಈ ಯಾವುದೇ ಗೀಜಿಗೆ ಹೋಗಲು ಇಚ್ಛಿಸದ ಹಿರಿಯ ನಾಗರೀಕರು ಸರಳ ಮತ್ತು ಸುರಕ್ಷಿತವಾದ ಆಯ್ಕೆಗಳಿಗೆ ಮೊರೆ ಹೋಗುತ್ತಾರೆ. ಆ ಪೈಕಿ ಹಿರಿಯ ನಾಕರೀಕರ ನೆಚ್ಚಿನ ಆಯ್ಕೆ ಅಂದ್ರೆ ಅದು ಫಿಕ್ಸೆಡ್ ಡೆಪಾಸಿಟ್ಗಳು.
ಹೌದು, ಈ ಫಿಕ್ಸೆಡ್ ಡೆಪಾಸಿಟ್ ವ್ಯವಸ್ಥೆ ಹಿರಿಯ ನಾಗರೀಕರಿಗೆ ಬಹಳ ಸರಳ, ಸುರಕ್ಷಿತ ಮತ್ತು ನಿರಂತರ ಆದಾಯ ನೀಡಬಲ್ಲ ಹೂಡಿಕೆಯಾಗಿದೆ. ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ನೀವು ಠೇವಣಿ ಮಾಡುವ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಪ್ರತಿ ತಿಂಗಳಾನುಸಾರ ನೀವು ಹೂಡಿಕೆಗೆ ಇಟ್ಟಿರುವ ಹಣಕ್ಕೆ ಬಡ್ಡಿ ರೂಪದಲ್ಲಿ ಆದಾಯ ನಿಮ್ಮ ಖಾತೆಯನ್ನ ತಲುಪುತ್ತದೆ.
ಇಂತಿಷ್ಟು ವರ್ಷಕ್ಕೆ ಅಂತ ಹಣವನ್ನ ಫಿಕ್ಸೆಡ್ ಡೆಪಾಸಿಟ್ನಲ್ಲಿ ಲಾಕ್ ಮಾಡಿದ್ರೆ ಅಷ್ಟೂ ವರ್ಷದವರೆಗೂ ನೀಔಉ ತಿಂಗಳಿಗೆ ಇಂತಿಷ್ಟು ಎಂದು ಬಡ್ಡಿ ಗಳಿಸಬಹುದು. ಅವಧಿಯ ಕೊನೆಯಲ್ಲಿ ಮತ್ತೆ ನೀವು ಇದನ್ನ ಮುಂದುವರೆಸಲು ಬಯಸಿದ್ರೆ, ಮತ್ತೆ ರಿನಿವಲ್ ಮಾಡಿಕೊಳ್ಳಬಹುದು ಕೂಡ. ಅದರಲ್ಲೂ ಕೂಡ ಹಿರಿಯ ನಾಗರೀಕರಿಗೆ ಬ್ಯಾಂಕ್ಗಳು ಸಹಜ ಗ್ರಾಹಕರಿಗೆ ನೀಡುವ ಬಡ್ಡಿಗಿಂತ ಹೆಚ್ಚಿನ ಬಡ್ಡಿ ದರವನ್ನೂ ನೀಡುತ್ತವೆ. ಸೋ ಇದು ಕೂಡ ಹಿರಿಯ ನಾಗರೀಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಯಾವ-ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ:
ಹಿರಿಯ ನಾಗರಿಕರಿ ಸ್ಥಿರ ಠೇವಣಿಯ ಮೇಲೆ ಹೂಡಿಕೆ ಸರಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಕರ್ನಾಟಕಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ Fixed Deposit ಮೇಲೆ 7.5 ರಿಂದ 8% ವರೆಗೆ ಬಡ್ಡಿದರ ನೀಡಲಾಗುವುದು. ಆದರೆ ಖಾಸಗಿ ಬ್ಯಾಂಕುಗಳು ICICI, HDFC, Axis Bank ನಲ್ಲಿ 8.5% ವರೆಗೂ ಕೂಡ ಬಡ್ಡಿದರ ಸಿಗಲಿದೆ. ಆದ್ರೆ ನೀವು 9.5% ಬಡ್ಡಿ ನಿಮ್ಮದಾಗಿಸಿಕೊಳ್ಳಬೇಕು ಅಂದ್ರೆ ,ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳ ಮೊರೆಹೋಗಬೇಕು.
ಉದಾಹರಣೆಗೆ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ನಲ್ಲಿ 444ದಿನದ ಎಫ್ಡಿ ಗೆ ಹಿರಿಯ ನಾಗರಿಕರಿಗೆ ಮೇಲೆ 9% ಬಡ್ಡಿ ನೀಡಲಾಗುತ್ತದೆ. ಹಾಗೇ ಉಜ್ಜೀವನ್ ಸ್ಮಾಲ್ ಫೈನಾನ್ಸ್ ನಲ್ಲಿ ಹಿರಿಯ ನಾಗರಿಕರಿಗೆ FD ಮೇಲೆ 15ತಿಂಗಳ ಅವಧಿಗೆ 9% ನಷ್ಟು ಬಡ್ಡಿದರ ನಿಮ್ಮದಾಗುತ್ತದೆ. ಉಳಿದ ಹಾಗೇ ಸೂರ್ಯೋದಯ ಸ್ಮಾಲ್ ಫೈನಾನ್ಸ್ ನಲ್ಲಿ 9.25% ಬಡ್ಡಿ ನೀಡಿದರೆ , ಇತ್ತ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಬರೋಬ್ಬರಿ 9.50% ಬಡ್ಡಿ ದೊರೆಯುತ್ತದೆ.
ಸೋ ನಿಮ್ಮ ಆಯ್ಕೆ ಫಿಕ್ಸಡ್ ಡೆಪಾಸಿಟ್ ಆಗಿದ್ದರೆ, ನೀವೇನಾದ್ರೂ ಸೀನಿಯರ್ ಸಿಟಿಝನ್ ಆಗಿದ್ದಲ್ಲಿ ಈ ದಾರಿಗಳನ್ನ ಉಪಯೋಗಿಸಿಕೊಂಡು ನಿಮ್ಮ ನಿವೃತ್ತಿ ನಂತರದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಯಾಔ ಬ್ಯಾಂಕ್ನಲ್ಲಿ ಠೇವಣಿ ಇಡಲಿದ್ದೇವೆ, ಅಲ್ಲಿ ನಮ್ಮ ದುಡ್ಡು ಎಷ್ಟು ಸುರಕ್ಷಿತ ಎಂಬುದನ್ನ ಖಾತ್ರಿ ಪಡಿಸಿಕೊಂಡು ಉತ್ತಮ ಬಡ್ಡಿ ದರಕ್ಕೆ ಹಣ ಸೇಫಾಗಿರುವ ಬ್ಯಾಂಕ್ಗಳನ್ನ ಆಯ್ಕೆ ಮಾಡಿಕೊಂಡ್ರೆ ಉತ್ತಮ.


Click it and Unblock the Notifications