ಬರ್ಗರ್ ಕಿಂಗ್ ಷೇರು ಸೋಮವಾರ ಷೇರು ಮಾರುಕಟ್ಟೆಯಲ್ಲಿ ಅದ್ಭುತವಾದ ಅರಂಗೇಟ್ರಂ ಮಾಡಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ (ಎನ್ ಎಸ್ ಇ) 92 ಪರ್ಸೆಂಟ್ ನಷ್ಟು ಪ್ರೀಮಿಯಂನೊಂದಿಗೆ 115.35 ರುಪಾಯಿಯೊಂದಿಗೆ ಲಿಸ್ಟಿಂಗ್ ಆಗಿದೆ. ಬರ್ಗರ್ ಕಿಂಗ್ ಷೇರನ್ನು 60 ರುಪಾಯಿಗೆ ವಿತರಣೆ ಮಾಡಲಾಗಿದೆ.
2020ರಲ್ಲಿ ಬಂದ ಐಪಿಒಗಳಲ್ಲಿ ಹೂಡಿಕೆದಾರರಿಂದ ಅತ್ಯುತ್ತಮ ಪ್ರತಿಕ್ರಿಯೆ ಕಂಡಿತ್ತು ಬರ್ಗರ್ ಕಿಂಗ್. ಇದು ಎರಡನೇ ಅತ್ಯುತ್ತಮ ಸ್ಪಂದನೆ ಆಗಿತ್ತು. ಐಪಿಒಗೆ ಮೀಸಲಿಟ್ಟಿದ್ದ ಷೇರುಗಳ ಸಂಖ್ಯೆಗಿಂತ 156.65 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ಬರ್ಗರ್ ಕಿಂಗ್ ಐಪಿಒ ಡಿಸೆಂಬರ್ 2ರಿಂದ 4, 2020ರ ಮಧ್ಯೆ ಸಬ್ ಸ್ಕ್ರಿಪ್ಷನ್ ಗೆ ಅವಕಾಶ ಒದಗಿಸಿತ್ತು.

ಕಡಿಮೆ ಮೌಲ್ಯಮಾಪನ, ಹೂಡಿಕೆದಾರರ ಪ್ರಬಲವಾದ ಆಸಕ್ತಿ ಮತ್ತಿತರ ಕಾರಣಗಳಿಗಾಗಿ ವಿತರಣೆ ಬೆಲೆಗಿಂತ ಶೇಕಡಾ 70ರಿಂದ 75ರಷ್ಟು ಮೊತ್ತ ಗಳಿಕೆ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಈಗ ಅತ್ಯುತ್ತಮ ಸ್ಪಂದನೆ ಬಂದಿರುವುದರಿಂದ ಸ್ವಲ್ಪ ಮಟ್ಟಿಗಿನ ಷೇರು ಮಾರಾಟ ಮಾಡಿ, ನಗದು ಮಾಡಿಟ್ಟುಕೊಳ್ಳುವುದು ಹಾಗೂ ಮುಂದೆ ಬೆಲೆಯಲ್ಲಿ ಸ್ವಲ್ಪ ಇಳಿಕೆ ಆದಲ್ಲಿ ಖರೀದಿಸುವುದು ಒಳ್ಳೆ ಆಯ್ಕೆ ಎಂದು ತಜ್ಞರು, ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಕೊನೆಯ ದಿನದ ಅನಿರೀಕ್ಷಿತ ತಿರುವು!

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications