For Quick Alerts
ALLOW NOTIFICATIONS  
For Daily Alerts

ಬರ್ಗರ್ ಕಿಂಗ್ IPO ಷೇರು ಹಂಚಿಕೆ ಇಂದು ಅಂತಿಮ: ಪರಿಶೀಲಿಸುವುದು ಹೇಗೆ?

|

ಕಳೆದ ವಾರ ಭಾರೀ ಬೇಡಿಕೆಯನ್ನು ಸೃಷ್ಟಿಸಿದ್ದ ಬರ್ಗರ್‌ ಕಿಂಗ್ ಐಪಿಒನಲ್ಲಿನ ಷೇರು ಹಂಚಿಕೆ ಇಂದು ಅಂತಿಮಗೊಳಿಸುವ ಸಾಧ್ಯತೆಯಿದೆ. ಸುಮಾರು 156 ಪಟ್ಟು ಬಿಡ್‌ ಕಂಡು ಬಂದಿದ್ದ ಬರ್ಗರ್ ಕಿಂಗ್ ಐಪಿಒನಲ್ಲಿ ಷೇರುಗಳಿಗಾಗಿ ಅರ್ಜಿ ಸಲ್ಲಿಸಿದ ಹೂಡಿಕೆದಾರರು ಇಂದು ಪರಿಶೀಲಿಸಬಹುದಾಗಿದೆ.

ಬರ್ಗರ್ ಕಿಂಗ್ ಐಪಿಒ ಸ್ಟೇಟಸ್ ತಿಳಿದುಕೊಳ್ಳಲು website of Link Intime India (https://linkintime.co.in/MIPO/Ipoallotment.html) ಭೇಟಿ ನೀಡಿ ಷೇರು ಹಂಚಿಕೆಯ ಸ್ಥಿತಿಯನ್ನು ತಿಳದುಕೊಳ್ಳಬಹುದು.

ಅರ್ಜಿದಾರರು ಬಿಎಸ್ಇ ವೆಬ್‌ಸೈಟ್‌ನಲ್ಲಿ ಅರ್ಜಿ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆ ಮೂಲಕ ಪರಿಶೀಲಿಸಬಹುದು. ಬ್ರೋಕರೇಜಸ್ ಪ್ರಕಾರ ಬರ್ಗರ್ ಕಿಂಗ್ ಷೇರುಗಳನ್ನು ಡಿಸೆಂಬರ್ 14 ರಂದು ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಪಟ್ಟಿ ಮಾಡುವ ಸಾಧ್ಯತೆಯಿದೆ.

ಬರ್ಗರ್ ಕಿಂಗ್ IPO ಷೇರು ಹಂಚಿಕೆ ಇಂದು ಅಂತಿಮ: ಪರಿಶೀಲನೆ ಹೇಗೆ?

ಬರ್ಗರ್ ಕಿಂಗ್ ಆಫರ್‌ನ ಬೆಲೆ ಪ್ರತಿ ಷೇರಿಗೆ 59-60 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ ವಿಭಾಗವು 68.15 ಪಟ್ಟು ಚಂದಾದಾರರಾಗಿದ್ದರೆ, ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿ) 86.64 ಪಟ್ಟು ಮತ್ತು ಸಾಂಸ್ಥಿಕೇತರ ಹೂಡಿಕೆದಾರರು 354.11 ಪಟ್ಟು ಚಂದಾದಾರರಾಗಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಹೊರತಾಗಿಯೂ ಹೂಡಿಕೆದಾರರು ಬರ್ಗರ್ ಕಿಂಗ್ ಐಪಿಒ ಮೇಲಿನ ಬಿಡ್‌ಗೆ ಸಾಕಷ್ಟು ಆಸಕ್ತಿ ತೋರಿದರು. ಬುಧವಾರ ಚಂದಾದಾರಿಕೆಗಾಗಿ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಬರ್ಗರ್ ಕಿಂಗ್ ಐಪಿಒ ಅಧಿಕ ಚಂದಾದಾರಿಕೆಯನ್ನು ಪಡೆದುಕೊಂಡಿದೆ.

ಡಿಸೆಂಬರ್ 2 ರಿಂದ 4ರವರೆಗೆ ನಡೆದ ಐಪಿಒ ಬಿಡ್ ಪ್ರಕ್ರಿಯೆಯಲ್ಲಿ ಚಿಲ್ಲರೆ ಹೂಡಿಕೆದಾರರು 3ನೇ ದಿನದಂದು 68.14 ಬಾರಿ ಬಿಡ್ ಮಾಡಿದ್ದಾರೆ. ಐಪಿಒನ ಎರಡನೆಯ ದಿನ, ಸಂಸ್ಥೆಯು ಸಂಚಿಕೆ ಗಾತ್ರಕ್ಕಿಂತ 9.38 ಪಟ್ಟು, ಮೊದಲ ದಿನದಂದು 3.13 ಪಟ್ಟು ಚಂದಾದಾರಿಕೆಯನ್ನು ಪಡೆಯಿತು.

English summary

Burger King IPO Share Allocation Finalised Today: Know More

The share allocation in Burger King initial public offer (IPO), which closed last week, is likely to be finanlised today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X