For Quick Alerts
ALLOW NOTIFICATIONS  
For Daily Alerts

ಅದಾನಿ ಪೋರ್ಟ್ಸ್‌ಗೆ ಹಿನ್ನಡೆ: S&P ಸೂಚ್ಯಂಕದಿಂದ ಹೊರ ಬೀಳಲಿದೆ

|

ಅದಾನಿ ಪೋರ್ಟ್ಸ್ ಅಮೆರಿಕಾದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಮ್ಯಾನ್ಮಾರ್ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿರುವ ಕಾರಣ ಅಮೆರಿಕಾದ ಷೇರು ಸೂಚ್ಯಂಕಗಳಲ್ಲಿ ಒಂದಾದ S&P ಯಿಂದ ಹೊರಬಿದ್ದಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಅದಾನಿ ಪೋರ್ಟ್ಸ್‌ನ ಅಂಗಸಂಸ್ಥೆ ಕಂಪನಿಯು ಮಿಲಿಟರಿ ನಿಯಂತ್ರಿತ ಸಂಸ್ಥೆಗೆ ಲಕ್ಷಾಂತರ ಡಾಲರ್‌ಗಳನ್ನು ಬಾಡಿಗೆಗೆ ನೀಡಲು ಒಪ್ಪಿಕೊಂಡಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ವರದಿ ಮಾಡಿವೆ.

ಅದಾನಿ ಪೋರ್ಟ್ಸ್‌ಗೆ ಹಿನ್ನಡೆ: S&P ಸೂಚ್ಯಂಕದಿಂದ ಹೊರ ಬೀಳಲಿದೆ

ಫೆಬ್ರವರಿ 1 ರಂದು ಮ್ಯಾನ್ಮಾರ್‌ನಲ್ಲಿ ನಡೆದ ಮಿಲಿಟರಿ ದಂಗೆಯ ನಂತರ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆ ದಂಗೆಯಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಉರುಳಿಸಲಾಯಿತು. ಹೀಗಾಗಿ ಅದಾನಿ ಪೋರ್ಟ್ಸ್‌ ಅನ್ನು ತನ್ನ ಸೂಚ್ಯಂಕದಿಂದ ತೆಗೆದುಹಾಕಿದೆ ಎಂದು ಎಸ್ & ಪಿ ಡೌ ಜೋನ್ಸ್ ಇಂಡಸ್ಟ್ರೀಸ್ ಹೇಳಿದೆ.

ಮಿಲಿಟರಿ ಬೆಂಬಲಿತ ಮ್ಯಾನ್ಮಾರ್ ಎಕನಾಮಿಕ್ ಕಾರ್ಪೊರೇಶನ್‌ನಿಂದ (ಎಂಇಸಿ) ಗುತ್ತಿಗೆ ಪಡೆದ ಭೂಮಿಯಲ್ಲಿ ಭಾರತದ ಅದಾನಿ ಪೋರ್ಟ್ ಬಂದರನ್ನು ನಿರ್ಮಿಸುತ್ತಿದೆ. ಅದಾನಿ ಗ್ರೂಪ್ ಆಫ್ ಇಂಡಿಯಾ ಮಾರ್ಚ್ 31 ರಂದು ಮ್ಯಾನ್ಮಾರ್‌ನಲ್ಲಿನ ತನ್ನ ಬಂದರು ಯೋಜನೆ ಕುರಿತು ಅಧಿಕಾರಿಗಳು ಮತ್ತು ಮಧ್ಯಸ್ಥಗಾರರನ್ನು ಸಮಾಲೋಚಿಸುವುದಾಗಿ ತಿಳಿಸಿದೆ.

ಆದರೆ ಈ ಮೇಲ್ಕಂಡ ಬೆಳವಣಿಗೆಯಿಂದಾಗಿ ಏಪ್ರಿಲ್ 15ರ ಗುರುವಾರ ಅಮೆರಿಕಾ ಷೇರು ಮಾರುಕಟ್ಟೆ ತೆರೆಯುವ ಮೊದಲು ಕಂಪನಿಯನ್ನು ಸೂಚ್ಯಂಕದಿಂದ ತೆಗೆದುಹಾಕಲಾಗುತ್ತದೆ.

English summary

Business Link With Myanmar Military: Adani Ports To Be Removed From S&P Index

S&P Dow Jones Indices said it is removing India’s Adani Ports and Special Economic Zone Ltd from its sustainability index due to the firm’s business ties with Myanmar’s military
Story first published: Tuesday, April 13, 2021, 15:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X