ಪ್ರೇಮಿಗಳ ದಿನ: ಪ್ರೇಯಸಿಗಾಗಿ ಚಿನ್ನ ಖರೀದಿಸಿ.. ಶುಲ್ಕ, ಆಫರ್‌ ತಿಳಿಯಿರಿ

ನಿಮ್ಮ ಪ್ರೇಯಸಿಯೊಂದಿಗೆ ಈ ವರ್ಷದ ವ್ಯಾಲೆಂಟೈನ್ಸ್ ಡೇ (Valentines Day) ವಿಶೇಷವಾಗಿ ಆಚರಿಸಬೇಕು ಎಂಬ ಬಯಕೆ ಇದೆಯೇ? ಚಿನ್ನದಂತಹ ಗೆಳತಿಗೆ(gold) ಬಂಗಾರ, ವಜ್ರದಂತಹ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದರೆ, ಇಲ್ಲಿದೆ ಗುಡ್‌ ನ್ಯೂಸ್.

ಹೌದು, ಪ್ರೇಮಿಗಳ ದಿನದಂದು ಆಭರಣ ವ್ಯಾಪಾರಿಗಳು ಚಿನ್ನ ಹಾಗೂ ವಜ್ರದ ಆಭರಣಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಿದ್ದಾರೆ. ಜೊತೆಗೆ ಚಿನ್ನದ ಶುಲ್ಕಗಳ ಮೇಲೂ ಸಹ ಆಫರ್‌ಗಳನ್ನುನೀಡಿದ್ದಾರೆ. ಸ್ಥಳೀಯ ಆಭರಣ ವ್ಯಾಪಾರಿಗಳಿಂದ ಹಿಡಿದು ಕಲ್ಯಾಣ್ ಜ್ಯುವೆಲ್ಲರ್ಸ್ ಮತ್ತು ಟೈಟಾನ್ ಬೆಂಬಲಿತ ಕ್ಯಾರೆಟ್ಲೇನ್ ಮತ್ತು ತನಿಷ್ಕ್‌ನಂತಹ ಪ್ರಸಿದ್ಧ ಕಂಪನಿಗಳು ಭಾರೀ ರಿಯಾಯಿತಿಗಳನ್ನು ನೀಡುತ್ತಿದ್ದು,ಖರೀದಿದಾರರು ತಮ್ಮ ಪ್ರೀತಿಪಾತ್ರರಿಗೆ ತಮ್ಮ ಇಷ್ಟವಾದ ಆಭರಣಗಳನ್ನು ಖರೀದಿಸಬಹುದು.

ಪ್ರೇಯಸಿಗಾಗಿ ಚಿನ್ನ ಖರೀದಿಸಿ.. ಶುಲ್ಕ, ಆಫರ್‌ ತಿಳಿಯಿರಿ

ಆದರೆ ಚಿನ್ನ ಖರೀದಿ ಮಾಡುವಾಗ ಕೊನೆಯದಾಗಿ ಅನ್ವಯವಾಗುವ ಮೇಕಿಂಗ್ ಶುಲ್ಕಗಳ ಕಡೆಗೆ ಗಮನವನ್ನು ಕೊಡಬೇಕಾಗುತ್ತದೆ. ಅದರಲ್ಲೂ ವ್ಯಾಲೆಂಟೈನ್ಸ್ ಡೇಗೆ ಖರೀದಿ ಮಾಡುವಾಗ ಚಿನ್ನದ ತಯಾರಿಕೆ ಶುಲ್ಕಗಳನ್ನು ಮತ್ತು ಪ್ರೇಮಿಗಳ ದಿನದ ಕೆಲವು ಆಫರ್‌ಗಳನ್ನು ಹೇಗೆ ಲೆಕ್ಕ ಹಾಕುವುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಅದು ಹೇಗೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಪ್ರೇಮಿಗಳ ದಿನದಂದು ಚಿನ್ನಗೆ ಇರುವ ಆಫರ್‌ಗಳು

1. ಕಲ್ಯಾಣ್ ಜ್ಯುವೆಲ್ಲರ್ಸ್ ಚಿನ್ನದ ಸರಗಳ ತಯಾರಿಕೆ ಶುಲ್ಕದಲ್ಲಿ ಸುಮಾರು ಶೇ.40 ರಿಯಾಯಿತಿಗಳನ್ನು ಘೋಷಿಸಿದೆ. ಇದು ಆಭರಣಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, 18 ಕ್ಯಾರೆಟ್‌ ಬೈನಾ ಗೋಲ್ಡ್ ಸರಪಳಿಯ ಬೆಲೆ ಹಿಂದಿನ 15,421 ರೂ. ರಿಯಾಯಿತಿಗೆ ಹೋಲಿಸಿದರೆ 13,820 ರೂ.ಗಳಿಗೆ ಇಳಿದಿದೆ. ಇದು ನಿಮಗೆ 1,601 ರೂ.ಗಳವರೆಗೆ ಉಳಿತಾಯವನ್ನು ನೀಡುತ್ತದೆ.

2. ಟೈಟಾನ್ ಬೆಂಬಲಿತ ತನಿಷ್ಕ್ ಜ್ಯುವೆಲ್ಲರ್ಸ್ ಜನವರಿ 14 ರಿಂದ ಮಾರ್ಚ್ 3, 2025 ರವರೆಗೆ ತನ್ನ ವಿವಿಧ ಚಿನ್ನ ಹಾಗೂ ಆಭರಣ ಸಂಬಂಧಿತ ವಸ್ತುಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಿದೆ.

ಗ್ರೂಪ್ ಎ ಗೋಲ್ಡ್ ಸ್ಟಡ್ಡ್, ಸ್ಟಡ್ಡ್ ಯುಸಿಪಿ, ಹೈ ವ್ಯಾಲ್ಯೂ ಸ್ಟಡ್ಡ್, ಪ್ಲಾಟಿನಂ ಸ್ಟಡ್ಡ್, ಬೈ-ಮೆಟಲ್ ಸ್ಟಡ್ಡ್, ಸಾಲಿಟೇರ್ ಸ್ಟ್ರಿಂಗ್ ಮತ್ತು ಡಿಟಿ ಗೋಲ್ಡ್ ಸ್ಟಡ್ಡ್ ಮೇಲೆ ಕಂಪನಿಯು ಶೇ.5 ರಿಂದ ಶೇ.25 ವರೆಗೆ ರಿಯಾಯಿತಿ ನೀಡುತ್ತಿದೆ.

ಗ್ರೂಪ್ ಬಿ- ಜಿಐಎಸ್ (ಗೋಲ್ಡ್ ಇಂಟೆನ್ಸಿವ್ ಸ್ಟಡೆಡ್), ಡೈಮಂಡ್ ಟ್ರೀಟ್ಸ್ ಜಿಐಎಸ್, ಅಲ್ಟ್ರಾ ಲೋ ಡೈಮಂಡ್ ಮೇಲೆ, ನಿಯಮಿತ ರಿಯಾಯಿತಿಗಳು ಶೇ.2.5 ರಿಂದ ಶೇ.12.5ವರೆಗೆ ಇರುತ್ತವೆ.

ಗ್ರೂಪ್ ಸಿ, ಸ್ಟಡ್ಡ್ ಸಾಲಿಟೇರ್, ಪ್ಲಾಟಿನಂ ಬೈಮೆಟಲ್ ಸಾಲಿಟೇರ್ ಮತ್ತು ಪ್ಲಾಟಿನಂ ಸಾಲಿಟೇರ್‌ನಲ್ಲಿ ಶೇ.5 ರಿಂದ ಶೇ.12 ರವರೆಗೆ ರಿಯಾಯಿತಿ ನೀಡಲಾಗುತ್ತದೆ. ಕೊನೆಯದಾಗಿ, ಗ್ರೂಪ್ ಡಿಯಲ್ಲಿ ಸ್ಟಡ್ಡ್ ಕಲರ್ ಸ್ಟೋನ್, ಡಿಟಿ ಸ್ಟಡ್ಡ್ ಕಲರ್ ಸ್ಟೋನ್ ಆಭರಣಗಳ ಮೇಲೆ ಶೇ.10 ರಿಂದ ಶೇ.20 ರವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಈ ಬ್ರ್ಯಾಂಡ್ ಚಿನ್ನದ ವಿನಿಮಯ ರಿಯಾಯಿತಿಗಳನ್ನು ಸಹ ನೀಡುತ್ತಿದೆ.ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ, ಶುಲ್ಕಗಳು, ತೆರಿಗೆಗಳು ಮತ್ತು ಮೂಲ ಇನ್‌ವಾಯ್ಸ್‌ನಲ್ಲಿ ನೀಡಲಾದ ಯಾವುದೇ ರಿಯಾಯಿತಿಯನ್ನು ಪೂರ್ಣವಾಗಿ ಕಡಿತಗೊಳಿಸಲಾಗುತ್ತದೆ ಎಂದು ತನಿಷ್ಕ್ ಹೇಳಿದೆ.

3.ಟೈಟಾನ್‌ನ ಇನ್ನೊಂದು ಬ್ರ್ಯಾಂಡ್ ಕ್ಯಾರೆಟ್‌ಲೇನ್ ಸಾಮಾನ್ಯ ರಿಯಾಯಿತಿಗಳನ್ನು ಹೊರತುಪಡಿಸಿ ಮೇಕಿಂಗ್ ಶುಲ್ಕಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

ಉದಾಹರಣೆಗೆ, ಕ್ಯಾರಟ್‌ಲೇನ್ ರಿಪ್ಪಲ್ ಡ್ಯಾಜಲ್ ಡೈಮಂಡ್ ರಿಂಗ್ ಮೇಲೆ ಶೇ.20 ರಿಯಾಯಿತಿಯನ್ನು ನೀಡುತ್ತಿದೆ. ಅದರ ಬೆಲೆ 81,276 ರೂ.ಗಳಿಂದ 5,021 ರೂ.ಗೆ ತಲುಪಿದೆ.ಇದರಲ್ಲಿ ಮೇಕಿಂಗ್ ಶುಲ್ಕಗಳ ಮೇಲೆ ಶೇ.20 ರಿಯಾಯಿತಿ ರಿಯಾಯಿತಿಯನ್ನು ಒಳಗೊಂಡಿದೆ. ಇಲ್ಲದೆ ಮೇಕಿಂಗ್ ಶುಲ್ಕಗಳು 8,363ರೂ ರಿಂದ 10,454 ರೂ ಕ್ಕೆ ಇಳಿಯುತ್ತದೆ.

4. 38 ವರ್ಷ ಹಳೆಯ ಆಭರಣ ಕಂಪನಿಯಾದ ಜೋಯಾಲುಕ್ಕಾಸ್ ಚಿನ್ನ ಮತ್ತು ಬೆಳ್ಳಿ ತಯಾರಿಕೆ ಶುಲ್ಕದ ಮೇಲೆ ಶೇ.18 ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಆದರೆ ವಜ್ರ ತಯಾರಿಕೆ ಶುಲ್ಕದ ಮೇಲೆ ಶೇ.50ವರೆಗೆ ರಿಯಾಯಿತಿ ಇದೆ.

5. ಜನಪ್ರಿಯ ಬ್ರ್ಯಾಂಡ್ ಸೆನ್ಕೊ ಗೋಲ್ಡ್ ವಿವಿಧ ರೀತಿಯ ಆಭರಣಗಳ ಮೇಲಿನ ಮೇಕಿಂಗ್ ಶುಲ್ಕದ ಮೇಲೆ ಶೇ.15ರಿಂದ ಶೇ.75ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ಚಿನ್ನ ತಯಾರಿಕೆ ಶುಲ್ಕವನ್ನು ಹೇಗೆ ಲೆಕ್ಕ ಹಾಕುವುದು?

ಚಿನ್ನ ತಯಾರಿಕೆ ಶುಲ್ಕಗಳು ಎಂದರೆ ಆಭರಣ ವ್ಯಾಪಾರಿಗಳು ಚಿನ್ನವನ್ನು ಆಭರಣವನ್ನಾಗಿ ಪರಿವರ್ತಿಸಲು ವಿಧಿಸುವ ದರಗಳು ಆಗಿರುತ್ತವೆ.

ಆದಿತ್ಯ ಬಿರ್ಲಾ ಕ್ಯಾಪಿಟಲ್‌ನ ವೆಬ್‌ಸೈಟ್‌ನ ಪ್ರಕಾರ, ಕಚ್ಚಾ ಚಿನ್ನದ ಬಾರ್‌ಗಳನ್ನು ಉತ್ತಮ ಆಭರಣಗಳಾಗಿ ಬದಲಾಯಿಸುವಲ್ಲಿ ಕುಶಲಕರ್ಮಿಗಳ ಶ್ರಮ ಮತ್ತು ಇತರ ಓವರ್‌ಹೆಡ್‌ಗಳಿಂದಾಗಿ ಈ ಶುಲ್ಕಗಳು ಉಂಟಾಗುತ್ತವೆ.

ಕ್ಲಿಯರ್‌ಟ್ಯಾಕ್ಸ್ ಪ್ರಕಾರ ಚಿನ್ನದ ತಯಾರಿಕೆ ಶುಲ್ಕವನ್ನು ಈ ಕೆಳಗಿನ 2 ವಿಧಾನಗಳಲ್ಲಿ ಲೆಕ್ಕಹಾಕಲಾಗುತ್ತದೆ ಅವುಗಳೆಂದರೆ,

1. ಪ್ರತಿ ಗ್ರಾಂ ಚಿನ್ನದ ಬೆಲೆ: ಚಿನ್ನದ ಬೆಲೆಯನ್ನು ಪ್ರತಿ ಗ್ರಾಂಗೆ ನಿಗದಿಪಡಿಸಲಾಗುತ್ತದೆ. ನೀವು ಖರೀದಿಸುವ ಚಿನ್ನದ ತೂಕವನ್ನು ಪ್ರತಿ ಗ್ರಾಂಗೆ ಚಿನ್ನದ ತಯಾರಿಕೆಯ ಶುಲ್ಕವನ್ನು ಪಡೆಯಲು ದರದಿಂದ ಗುಣಿಸಲಾಗುತ್ತದೆ. ನೀವು 10 ಗ್ರಾಂ ಚಿನ್ನವನ್ನು ಖರೀದಿಸಿದರೆ ಮತ್ತು ಮಾರಾಟಗಾರನು ತಯಾರಿಕೆಯ ಶುಲ್ಕವನ್ನು ಲೆಕ್ಕಹಾಕಲು 500/ಗ್ರಾಂ ಸ್ಥಿರ ದರವನ್ನು ಬಳಸಿದರೆ, ನೀವು ಪಾವತಿಸುವ ತಯಾರಿಕೆಯ ಶುಲ್ಕ ರೂ 10 x 500 = 5000 ರೂ. ಆಗಿ ಲೆಕ್ಕ ಮಾಡಲಾಗುತ್ತದೆ.

2. ಶೇಕಡಾವಾರು: ಚಿನ್ನದ ತಯಾರಿಕೆ ಶುಲ್ಕವನ್ನು ನೀವು ಖರೀದಿಸುವ ಚಿನ್ನದ ಒಟ್ಟು ಮೌಲ್ಯದ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ.

ಶೇಕಡಾವಾರು ಹೆಚ್ಚಾದಷ್ಟೂ ಶುಲ್ಕ ಹೆಚ್ಚಾಗುತ್ತದೆ. ನೀವು 7,00,000 ರೂ ಮೌಲ್ಯದ ಚಿನ್ನವನ್ನು ಖರೀದಿ ಮಾಡುತ್ತಿದ್ದರೆ ಆಭರಣ ವ್ಯಾಪಾರಿ ಶೇ.10 ತಯಾರಿಕೆ ಶುಲ್ಕವನ್ನು ವಿಧಿಸಿದರೆ, ನೀವು ಪಾವತಿಸುವ ಶುಲ್ಕಗಳು 7,00,000 = 70,000ರೂ ಶೇ.10ರಷ್ಟು ಆಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+