ಮನೆ ಖರೀದಿಸಬೇಕೆ? ಸುಲಭವಾಗಿ ಸಿಗುತ್ತೆ ಸಾಲ.. ಬಡ್ಡಿಯೂ ಕಡಿಮೆ! ಯಾವ ಬ್ಯಾಂಕ್ ಬೆಸ್ಟ್?

ಸ್ವಂತ ಮನೆ ಕಟ್ಟುವ ಕನಸಿದ್ಯಾ? ಹಾಗಿದ್ರೆ ಮಿಸ್ ಮಾಡದೇ ಈ ಸ್ಟೋರಿ ಓದಿ. 'ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು' ಅನ್ನೋ ಮಾತಿದೆ. ಅದರಲ್ಲೂ ಮನೆ ಕಟ್ಟುವಷ್ಟರಲ್ಲಿ ಜೀವನದ ಅರ್ಧ ಆಯಸ್ಸೇ ಕಳೆದು ಹೋಗಿರುತ್ತೆ. ಇದರ ಜೊತೆಗೆ ಆರ್ಥಿಕ ಸಮಸ್ಯೆ ಬಿಟ್ಟು ಬಿಡದೇ ಕಾಡುತ್ತದೆ. ನಿಮಗೂ ಸಹ ಸ್ವಂತ ಮನೆ ಕಟ್ಟುವ ಬಗ್ಗೆ ಆಲೋಚನೆ ಇದ್ಯಾ? ಇದಕ್ಕಾಗಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ದೇಶದಲ್ಲಿ ಸಾಲದಾತರು ವಿವಿಧ ಸಾಲಗಾರರ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಶ್ರೇಣಿಯ ಬಡ್ಡಿದರಗಳನ್ನು ನೀಡಿದ್ದಾರೆ. ಹಲವಾರು ಸಾಲದಾತರು ವಿವಿಧ ಬಡ್ಡಿದರಗಳು ಮತ್ತು ನಿಯಮಗಳನ್ನು ಅರ್ಥ ಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಲು ಮುಖ್ಯವಾಗುತ್ತದೆ. ಹಾಗಿದ್ರೆ ಯಾವೆಲ್ಲಾ ಬ್ಯಾಂಕ್‌ಗಳಲ್ಲಿ ಎಷ್ಟು ಬಡ್ಡಿ ಸಿಗುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಸಾರ್ವಜನಿಕ ವಲಯದ ಬ್ಯಾಂಕುಗಳು

UCO ಬ್ಯಾಂಕ್‌ನ ಬಡ್ಡಿ ದರವು ಶೇ.8.30ರಿಂದ ಶುರುವಗುತ್ತದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿದರವು ಶೇ 8.30 ರಿಂದ 10.90 ರವರೆಗೆ ಇರುತ್ತದೆ.

ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿ ದರವು ಶೇ.8.35 ರಿಂದ 11.10 ರ ನಡುವೆಯಲ್ಲಿ ಇದೆ.

ಬ್ಯಾಂಕ್ ಆಫ್ ಬರೋಡಾದ ಬಡ್ಡಿದರವು ಶೇ.8.40 ರಿಂದ 10.65 ರ ನಡುವೆ ಇದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಡ್ಡಿ ದರ ಶೇ.8.40ರಿಂದ ಶೇ.10.25ರ ನಡುವೆ ಇದೆ.

ಕೆನರಾ ಬ್ಯಾಂಕ್‌ನ ಬಡ್ಡಿ ದರ ಶೇ.8.40ರಿಂದ ಶೇ.11.25ರ ನಡುವೆ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿ ದರವು ಶೇ 8.50 ರಿಂದ 9.85 ರ ನಡುವೆ ಇದೆ.

ಮನೆ ಖರೀದಿಸಬೇಕೆ? ಸುಲಭವಾಗಿ ಸಿಗುತ್ತೆ ಸಾಲ

ಖಾಸಗಿ ವಲಯದ ಬ್ಯಾಂಕುಗಳು

ಸಿಟಿ ಯೂನಿಯನ್ ಬ್ಯಾಂಕ್‌ನ ಗೃಹ ಬಡ್ಡಿ ದರ ಶೇ. 8.25 ರಿಂದ 10.50ರ ನಡುವೆ ಇದೆ.

ಸೌತ್ ಇಂಡಿಯನ್ ಬ್ಯಾಂಕಿನ ಬಡ್ಡಿದರ ಶೇ.8.50 ರಿಂದ ಪ್ರಾರಂಭವಾಗುತ್ತದೆ

HSBC ಬ್ಯಾಂಕ್‌ನ ಬಡ್ಡಿ ದರ ಶೇ. 8.50ರಿಂದ ಆರಂಭವಾಗುತ್ತದೆ.

ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಬಡ್ಡಿ ದರವು ಶೇ.8.75 ರಿಂದ ಪ್ರಾರಂಭವಾಗುತ್ತದೆ

ICICI ಬ್ಯಾಂಕಿನ ಬಡ್ಡಿ ದರವು ಶೇ.8.75 ರಿಂದ ಶುರುವಾಗುತ್ತದೆ.

ಆಕ್ಸಿಸ್ ಬ್ಯಾಂಕ್‌ನ ಬಡ್ಡಿ ದರವು ಶೇ.8.75 ರಿಂದ 13.30 ರ ನಡುವೆ ಇದೆ.

RBL ಬ್ಯಾಂಕಿನ ಬಡ್ಡಿ ದರವು ಶೇ.9.00 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

ವಸತಿ ಹಣಕಾಸು ಕಂಪನಿಗಳು

ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನ ಬಡ್ಡಿ ದರವು ಶೇ.8.50 ರಿಂದ ಪ್ರಾರಂಭವಾಗುತ್ತದೆ.

ಬಜಾಜ್ ಹೌಸಿಂಗ್ ಫೈನಾನ್ಸ್‌ನ ಬಡ್ಡಿ ದರವು ಶೇ.8.50 ರಿಂದ ಪ್ರಾರಂಭವಾಗುತ್ತದೆ

ಟಾಟಾ ಕ್ಯಾಪಿಟಲ್‌ನ ಬಡ್ಡಿದರವು ಶೇ.8.75 ರಿಂದ ಪ್ರಾರಂಭವಾಗುತ್ತದೆ

PNB ಹೌಸಿಂಗ್ ಫೈನಾನ್ಸ್‌ನ ಬಡ್ಡಿ ದರ ಶೇ.8.50 ರಿಂದ ಶೇ.14.50 ನಡುವೆ ಇದೆ

GIC ಹೌಸಿಂಗ್ ಫೈನಾನ್ಸ್‌ನ ಬಡ್ಡಿ ದರ ಶೇ.8.80ರಿಂದ ಆರಂಭವಾಗುತ್ತದೆ.

SMFG ಇಂಡಿಯಾ ಹೋಮ್ ಫೈನಾನ್ಸ್‌ನ ಬಡ್ಡಿ ದರ ಶೇ.10.00ರಿಂದ ಶುರುವಾಗುತ್ತದೆ.

ಸಾಲಗಾರರು ಸಾಲದ ಬಡ್ಡಿಯ ದರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+