ಒಂದರ ನಂತರ ಒಂದಾಗಿ ಹಲವಾರು ಸಮಸ್ಯೆಗಳಲ್ಲಿ ಸಿಲುಕುತ್ತಾ ಬರುತ್ತಿರುವ ಬೈಜೂಸ್ ಈಗ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಮನಿಕಂಟ್ರೋಲ್ ವರದಿಯ ಪ್ರಕಾರ, ಬೈಜೂಸ್ ಉದ್ಯೋಗ ಕಳೆದುಕೊಂಡವರಿಗೆ ಗಡುವು ಮೀರಿದ್ರು ಬಾಕಿ ವೇತನ ನೀಡಿಲ್ಲ.
ಹೌದು, ಕಂಪನಿಯು ಉದ್ಯೋಗ ಕಳೆದುಕೊಂಡವರಿಗೆ ಇನ್ನೂ ಕೂಡಾ ಬಾಕಿ ಮೊತ್ತವನ್ನು ಪಾವತಿ ಮಾಡಿಲ್ಲ. ಕಂಪನಿಯು ಈ ಹಿಂದೆ ಅಂತಿಮ ಪಾವತಿ ದಿನವನ್ನು ಸೆಪ್ಟೆಂಬರ್‌ನಿಂದ ನವೆಂಬರ್‌ಗೆ ಮುಂದೂಡಿತ್ತು. ಈಗ ನವೆಂಬರ್‌ನಲ್ಲಿ ಗಡುವು ಮುಗಿದರೂ ಮೊತ್ತವನ್ನು ಪಾವತಿ ಮಾಡಿಲ್ಲ.

ಬೈಜೂಸ್‌ನಲ್ಲಿ ಕೆಲಸ ಕಳೆದುಕೊಂಡ 60 ಉದ್ಯೋಗಿಗಳನ್ನು ಸಂಪರ್ಕಿಸಲಾಗಿದೆ. ಈ ಪೈಕಿ ಪ್ರತಿಕ್ರಿಯೆ ನೀಡಿದ 48 ಮಂದಿಯಲ್ಲಿ, 40 ಮಂದಿ ನವೆಂಬರ್ 17 ರೊಳಗೆ ನೀಡಲಾಗುವುದು ಎಂದು ಹೇಳಲಾಗಿದ್ದ ಪೂರ್ಣ ಮತ್ತು ಅಂತಿಮ ಬಾಕಿ ಪಾವತಿಯನ್ನು ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ತಮ್ಮ ಪೂರ್ಣ ಮತ್ತು ಅಂತಿಮ ಮೊತ್ತವನ್ನು ಪಡೆಯುವ 8 ಉದ್ಯೋಗಿಗಳಲ್ಲಿ ಸುಮಾರು 2-3 ಜನರು ತಮ್ಮ ವೇತನ ಅಥವಾ ಪ್ರೋತ್ಸಾಹ ಮೊತ್ತವನ್ನು ಪಡೆದಿಲ್ಲ ಎಂದು ಅದು ಹೇಳಿದೆ. ಕಂಪನಿಯ ನಿಕಟ ಮೂಲವನ್ನು ಈ ವರದಿಯು ಉಲ್ಲೇಖಿಸಿದೆ.
ಇನ್ನು ಬೈಜೂಸ್ ವಾರಕ್ಕೊಮ್ಮೆ ಹಂತ ಹಂತವಾಗಿ ಪಾವತಿಗಳನ್ನು ಮಾಡುತ್ತಿದೆ. ಅಕ್ಟೋಬರ್‌ನಲ್ಲಿ ಬಾಕಿಯಿರುವ ಪಾವತಿಗಳನ್ನು ಈಗಾಗಲೇ ಇತ್ಯರ್ಥಪಡಿಸಿದೆ ಎಂದು ಮನಿಕಂಟ್ರೋಲ್ ವರದಿ ಉಲ್ಲೇಖಿಸಿದೆ.
ಬೈಜೂಸ್‌ನಲ್ಲಿ 4000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್
ಶಿಕ್ಷಣ ಸಂಸ್ಥೆಯಾದ ಬೈಜೂಸ್ ಒಂದೆರಡು ವರ್ಷಗಳ ಹಿಂದೆ ದೇಶದ ಅತ್ಯಂತ ಯಶಸ್ವಿ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿತ್ತು. ಆದರೆ ಹಣಕಾಸು ವರ್ಷ 2021ರಲ್ಲಿ ಕಂಪನಿಯು 4,564 ಕೋಟಿ ರೂಪಾಯಿಗಳಷ್ಟು ಭಾರೀ ನಷ್ಟವನ್ನು ಕಂಡಿದೆ. ನಂತರ, ಅಕ್ಟೋಬರ್ 2022 ರಲ್ಲಿ, ಕಂಪನಿಯು 2,500 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ. ಅದಾದ ಬಳಿಕ ಈಗ ಸುಮಾರು 4000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಸಂಸ್ಥೆ ಸಜ್ಜಾಗಿದೆ.
ವರದಿಗಳ ಪ್ರಕಾರ ಬೈಜೂಸ್ ಮತ್ತೊಂದು ಹಂತದ ಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಈ ಬಾರಿ ಸುಮಾರು 4000 ದಿಂದ 5000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಂಸ್ಥೆಯು ಮುಂದಾಗಿದೆ. ಇತ್ತೀಚೆಗೆ ಬೈಜೂಸ್ ಸಂಸ್ಥೆಯ ನೂತನ ಸಿಇಒ ಆಗಿ ಅರ್ಜುನ್ ಮೋಹನ್‌ರನ್ನು ನೇಮಕ ಮಾಡಿಕೊಂಡಿದ್ದಾರೆ. ಈಗ ಹೊಸ ಸಿಇಒ ಅಡಿಯಲ್ಲಿ ಉದ್ಯೋಗ ಕಡಿತವನ್ನು ಘೋಷಿಸಲು ಸಂಸ್ಥೆ ಸಜ್ಜಾಗಿದೆ.


Click it and Unblock the Notifications