ಎಜುಕೇಷನ್ ಮತ್ತು ಟೆಕ್ ಸ್ಟಾರ್ಟ್‌ಅಪ್ ಆದ ಬೈಜೂಸ್‌ಗೆ ದಿನಕ್ಕೊಂದು ತೊಂದರೆ ಉಂಟಾಗುತ್ತಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಬೈಜೂಸ್ ಸಂಪೂರ್ಣವಾಗಿ ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಈ ನಡುವೆ ತನಿಖಾ ಸಂಸ್ಥೆಯು ಬೈಜೂಸ್ ಕಂಪನಿಯ ಬೆಂಗಳೂರಿನ ಕಚೇರಿಗಳ ಮೇಲೆ ದಾಳಿ ನಡೆಸಿದ ಬಳಿಕ ಮತ್ತು ಕಂಪನಿಗಳ ವಿರುದ್ಧ ಹಲವಾರು ಆರೋಪಗಳು ಕೇಳಿಬಂದ ಬಳಿಕ ಸ್ಟಾರ್ಟ್‌ಅಪ್‌ನ ಸಂಸ್ಥಾಪಕ ಬೈಜು ರವೀಂದ್ರನ್ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.
ಬ್ಲೂಮ್‌ಬರ್ಗ್ ಸುದ್ದಿ ಪ್ರಕಾರ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಬೈಜು ರವೀಂದ್ರನ್ ದುಬೈನಲ್ಲಿದ್ದು ಹೂಡಿಕೆದಾರರಿಗೆ ಕರೆ ಮಾಡುತ್ತಿದ್ದಾರೆ. ಹಾಗೆಯೇ ತನ್ನ ಕಂಪನಿಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಕಣ್ಣೀರಿಡುತ್ತಿದ್ದಾರೆ. ಸ್ಟಾರ್ಟ್‌ಅಪ್ ಸಾಲದ ಸುಳಿಯಲ್ಲಿದ್ದು ಕಾನೂನು ಸಮರವನ್ನು ನಡೆಸುತ್ತಿದೆ. ಈ ನಡುವೆ ಬೆಂಗಳೂರಿನ ಕಚೇರಿಯನ್ನೇ ಮುಚ್ಚಿದೆ ಎಂದು ವರದಿ ತಿಳಿಸಿದೆ.

ಭಾರತ ಸರ್ಕಾರವು ಶಿಕ್ಷಣ-ತಂತ್ರಜ್ಞಾನ ಟೈಟಾನ್ ಬೈಜೂಸ್‌ನ ಖಾತೆ ಪುಸ್ತಕಗಳನ್ನು ಪರಿಶೀಲಿಸಲು ಆದೇಶ ನೀಡಿದೆ. ಕಳೆದ ತಿಂಗಳು ಬೈಜೂಸ್‌ನ ಆಡಿಟರ್ ಮತ್ತು ಮೂವರು ಮಂಡಳಿಯ ಸದಸ್ಯರು ರಾಜೀನಾಮೆಯನ್ನು ನೀಡಿದ್ದಾರೆ. ಅದಕ್ಕೂ ಮುನ್ನ ಬೈಜೂಸ್ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿದೆ.
ಬೈಜೂಸ್‌ಗೆ ಉಂಟಾದ ಹಲವಾರು ಸಂಕಷ್ಟಗಳು
ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಬೈಜೂಸ್ ಸಂಸ್ಥೆಯು ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದೆ. ಈಗ ಈ ಆನ್‌ಲೈನ್ ಶಿಕ್ಷಣ ನೀಡುವ ಆಪ್ ಹೊಂದಿರುವ ಸಂಸ್ಥೆಯಾದ ಬೈಜೂಸ್ ತನ್ನ ಎಲ್ಲ ವಿಭಾಗದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಈಗಾಗಲೇ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ. ಸುಮಾರು ಒಂದು ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಯುಎಸ್‌ನ ಸಾಲದಾತರೊಂದಿಗೆ ಪ್ರಸ್ತುತ ಬೈಜೂಸ್ ಕಾನೂನು ಸಮರಕ್ಕೆ ಇಳಿದಿದೆ.
ಈ ಹಿಂದೆ ಅಕ್ಟೋಬರ್ 2022ರಲ್ಲಿ ಬೈಜೂಸ್ ಸುಮಾರು ಶೇಕಡ 5ರಷ್ಟು ಅಥವಾ 2500 ಉದ್ಯೋಗಿಗಳನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ ಉದ್ಯೋಗದಿಂದ ವಜಾಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ತನ್ನ ಪತ್ನಿ ದಿವ್ಯಾ ಗೋಕುಲ್‌ನಾಥ್ ಜೊತೆ ಸೇರಿ ರವೀಂದ್ರನ್ ಬೈಜೂಸ್ ಸಂಸ್ಥೆಯನ್ನು 2011ರಲ್ಲಿ ಆರಂಭ ಮಾಡಿದ್ದಾರೆ.
ಅದಾದ ಬಳಿಕ ಸಂಸ್ಥೆಯು ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ ಕಳೆದ ಒಂದು ವರ್ಷದಿಂದ ಬೈಜೂಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದೆ. ಈ ಹಿಂದೆ ಬೈಜೂಸ್‌ನ ಹಳೆ ಉದ್ಯೋಗಿಗಳು ಹಾಗೂ ಪೋಷಕರು ಹಲವಾರು ಆರೋಪಗಳನ್ನು ಮಾಡಿದ್ದರು.
ಕಳೆದ ವರ್ಷ ಅಕ್ಟೋಬರ್‌ನಿಂದ ಈವರಗೆ ಹಲವಾರು ತಿಂಗಳುಗಳವರೆಗೆ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಪಾವತಿಗಳನ್ನು ಬೈಜೂಸ್ ವಿಳಂಬಗೊಳಿಸಿದೆ. ಪಿಎಫ್ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪ ಬೈಜೂಸ್‌ಗೆ ಇದೆ. ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಿಂದ (ಇಪಿಎಫ್‌ಒ) ಕ್ರಮವನ್ನು ಕೈಗೊಳ್ಳುತ್ತಿದೆ.
ವಿಮರ್ಶಕರು ಏನು ಹೇಳುತ್ತಾರೆ
ರವೀಂದ್ರನ್ ಒಂದು ಅನುಭವ ಇಲ್ಲ ಸಂಸ್ಥಾಪಕ ಆಗಿದ್ದಾರೆ. ಹಾಗೆಯೇ ಶೀಘ್ರದಲ್ಲೇ ತನ್ನ ಸ್ಟಾರ್ಟ್‌ಅಪ್ ಬೆಳವಣಿಗೆ ಕಂಡಿದ್ದು, ಇದರಿಂದಾಗಿ ಸಂಸ್ಥೆ ತಪ್ಪು ಹಾದಿಯಲ್ಲಿ ಸಾಗಿದೆ. ಹಣಕಾಸಿನ ಬಗ್ಗೆ ಮಾಹಿತಿಯನ್ನು ತಡೆಹಿಡಿಯುವ ಮೂಲಕ ಮತ್ತು ಖಾತೆಗಳನ್ನು ಕಟ್ಟುನಿಟ್ಟಾಗಿ ಆಡಿಟ್ ಮಾಡುವಲ್ಲಿ ವಿಫಲರಾಗುವ ಮೂಲಕ ಅಜಾಗರೂಕತೆಯಿಂದ ಸಂಸ್ಥೆಯ ಸಂಸ್ಥಾಪಕರು ವರ್ತಿಸಿದ್ದಾರೆ ಎಂದು ವಿಮರ್ಶಕರು ಹೇಳುತ್ತಾರೆ.
ಬೈಜೂಸ್ ತನ್ನ ಎಲ್ಲ ವಿಭಾಗದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಈಗಾಗಲೇ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ ಎಂದು ವರದಿಯಾಗಿದೆ. "ಸರಿಸುಮಾರು ಒಂದು ಸಾವಿರ ಉದ್ಯೋಗಿಗಳನ್ನು ಬೈಜೂಸ್ ಉದ್ಯೋಗದಿಂದ ವಜಾಗೊಳಿಸಿದೆ. ಹೊಸದಾಗಿ ಉದ್ಯೋಗಿಗಳ ಸೇರ್ಪಡೆಯಾಗಿರುವ ಕಾರಣದಿಂದಾಗಿ ಈ ಕಡಿತದ ಬಳಿಕವೂ ಸಂಸ್ಥೆಯಲ್ಲಿ ಸುಮಾರು 50,000 ಉದ್ಯೋಗಿಗಳು ಇದ್ದಾರೆ," ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


Click it and Unblock the Notifications