ಬೈಜೂಸ್ ಹಲವಾರು ತಿಂಗಳುಗಳಿಂದ ಹಣಕಾಸು ಸಮಸ್ಯೆಯನ್ನು ಎದುರಿಸುತ್ತಿದೆ. ಉದ್ಯೋಗಿಗಳಿಗೆ ವೇತನವನ್ನು ಕೂಡಾ ಕೆಲವು ತಿಂಗಳುಗಳಿಂದ ನೀಡಲಾಗಿಲ್ಲ. ಈಗ ಉದ್ಯೋಗಿಗಳಿಗೆ ವೇತನವನ್ನು ನೀಡಲೆಂದು ಭಾರತದ ಎಜುಕೇಷನ್ ಟೆಕ್ನಾಲಜಿ ಸಂಸ್ಥೆಯಾದ ಬೈಜೂಸ್‌ನ ಸಂಸ್ಥಾಪಕ ಬೈಜು ರವೀಂದ್ರನ್ ತಮ್ಮ ಬೆಂಗಳೂರಿನ ಮನೆಯನ್ನು ಅಡವಿಟ್ಟಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.
ಈ ಮಾಜಿ ಬಿಲಿಯನೇರ್ ದಕ್ಷಿಣ ಭಾರತದ ಬೆಂಗಳೂರಿನಲ್ಲಿ ಕುಟುಂಬದ ಒಡೆತನದ ಎರಡು ಮನೆಗಳು ಮತ್ತು ಎಪ್ಸಿಲಾನ್‌ನಲ್ಲಿರುವ ಅವರ ನಿರ್ಮಾಣ ಹಂತದಲ್ಲಿರುವ ವಿಲ್ಲಾವನ್ನು ನಗರದಲ್ಲಿ 12 ಮಿಲಿಯನ್ ಡಾಲರ್ ಸಾಲವನ್ನು ಪಡೆಯಲು ಮೇಲಾಧಾರವಾಗಿ ಇರಿಸಿದ್ದಾರೆ ಎಂದು ಈ ಬಗ್ಗೆ ಮಾಹಿತಿ ತಿಳಿದಿರುವವರು ಹೇಳಿದರು.

ಸೋಮವಾರದಂದು ಬೈಜು ರವೀಂದ್ರನ್‌ರ ಸಂಸ್ಥೆಯಾದ ಬೈಜೂಸ್‌ನ ಮಾತೃ ಸಂಸ್ಥೆಯಾದ ಥಿಂಕ್ & ಲರ್ನ್ ಪ್ರೈವೇಟ್‌ನಲ್ಲಿನ 15,000 ಉದ್ಯೋಗಿಗಳಿಗೆ ಸಂಬಳ ಪಾವತಿಸಲು ಈ ಮನೆ ಅಡವಿಟ್ಟ ಹಣವನ್ನು ಬಳಸಿದೆ ಎಂದು ಹೇಳಿದರು. ಆದರೆ ಈ ಬಗ್ಗೆ ಬೈಜು ರವೀಂದ್ರನ್ ಮತ್ತು ಬೈಜೂಸ್ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಲ್ಲ.
ಈ ಹಿಂದೆ ಭಾರತದ ಅತ್ಯಮೂಲ್ಯ ಟೆಕ್ ಸ್ಟಾರ್ಟ್ಅಪ್, ಸಂಸ್ಥೆಯು ಯುಎಸ್ ಆಧಾರಿತ ಮಕ್ಕಳ ಡಿಜಿಟಲ್ ಲರ್ನಿಂಗ್ ಪ್ಲಾಟ್‌ಫಾರ್ಮ್ ಅನ್ನು ಸುಮಾರು 400 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿದೆ. ಹಾಗೆಯೇ 1.2 ಶತಕೋಟಿ ಡಾಲರ್ ಸಾಲದ ಮೇಲಿನ ಬಡ್ಡಿ ಪಾವತಿಯ ಕುರಿತು ಸಾಲಗಾರರೊಂದಿಗೆ ಕಾನೂನು ಹೋರಾಟದಲ್ಲಿದೆ.
ಕಳೆದ ತಿಂಗಳು, ಬೈಜು ಮೊದಲ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ. ಇದು ಥಿಂಕ್ & ಲರ್ನ್‌ನಲ್ಲಿನ ನಷ್ಟವನ್ನು ತೋರಿಸಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಈ ಸಂಸ್ಥೆಯು ಭಾರೀ ಲಾಭವನ್ನು ಕಂಡಿದೆ. ಆದರೆ ಅದಾದ ಬಳಿಕ ಈಗ ಭಾರೀ ಇಳಿಕೆಯನ್ನು ಕಾಣುತ್ತಾ ಬರುತ್ತಿದೆ.
ಕಣ್ಣೀರಿಟ್ಟ ಸಂಸ್ಥಾಪಕರು
ಎಜುಕೇಷನ್ ಮತ್ತು ಟೆಕ್ ಸ್ಟಾರ್ಟ್‌ಅಪ್ ಆದ ಬೈಜೂಸ್‌ಗೆ ದಿನಕ್ಕೊಂದು ತೊಂದರೆ ಉಂಟಾಗುತ್ತಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಬೈಜೂಸ್ ಸಂಪೂರ್ಣವಾಗಿ ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಈ ನಡುವೆ ತನಿಖಾ ಸಂಸ್ಥೆಯು ಬೈಜೂಸ್ ಕಂಪನಿಯ ಬೆಂಗಳೂರಿನ ಕಚೇರಿಗಳ ಮೇಲೆ ದಾಳಿ ನಡೆಸಿದ ಬಳಿಕ ಮತ್ತು ಕಂಪನಿಗಳ ವಿರುದ್ಧ ಹಲವಾರು ಆರೋಪಗಳು ಕೇಳಿಬಂದ ಬಳಿಕ ಸ್ಟಾರ್ಟ್‌ಅಪ್‌ನ ಸಂಸ್ಥಾಪಕ ಬೈಜು ರವೀಂದ್ರನ್ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.
ಬ್ಲೂಮ್‌ಬರ್ಗ್ ಸುದ್ದಿ ಪ್ರಕಾರ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಬೈಜು ರವೀಂದ್ರನ್ ದುಬೈನಲ್ಲಿದ್ದು ಹೂಡಿಕೆದಾರರಿಗೆ ಕರೆ ಮಾಡುತ್ತಿದ್ದಾರೆ. ಹಾಗೆಯೇ ತನ್ನ ಕಂಪನಿಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಕಣ್ಣೀರಿಡುತ್ತಿದ್ದಾರೆ. ಸ್ಟಾರ್ಟ್‌ಅಪ್ ಸಾಲದ ಸುಳಿಯಲ್ಲಿದ್ದು ಕಾನೂನು ಸಮರವನ್ನು ನಡೆಸುತ್ತಿದೆ. ಈ ನಡುವೆ ಬೆಂಗಳೂರಿನ ಕಚೇರಿಯನ್ನೇ ಮುಚ್ಚಿದೆ ಎಂದು ವರದಿ ತಿಳಿಸಿದೆ.


Click it and Unblock the Notifications