ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಬೈಜೂಸ್ ಸಂಸ್ಥೆಯು ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದೆ. ಈಗ ಈ ಆನ್‌ಲೈನ್ ಶಿಕ್ಷಣ ನೀಡುವ ಆಪ್ ಹೊಂದಿರುವ ಸಂಸ್ಥೆಯಾದ ಬೈಜೂಸ್ ತನ್ನ ಎಲ್ಲ ವಿಭಾಗದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಈಗಾಗಲೇ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ ಎಂದು ವರದಿಯಾಗಿದೆ. ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು ಒಂದು ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಯುಎಸ್‌ನ ಸಾಲದಾತರೊಂದಿಗೆ ಪ್ರಸ್ತುತ ಬೈಜೂಸ್ ಕಾನೂನು ಸಮರಕ್ಕೆ ಇಳಿದಿದೆ. ಈ ಸಂದರ್ಭದಲ್ಲೇ ಸಂಸ್ಥೆಯಲ್ಲಿ ಮಾಡಲಾಗಿರುವ ಈ ಉದ್ಯೋಗ ಕಡಿತದ ಬಗ್ಗೆ ವರದಿಯಾಗಿದೆ. "ಸರಿಸುಮಾರು ಒಂದು ಸಾವಿರ ಉದ್ಯೋಗಿಗಳನ್ನು ಬೈಜೂಸ್ ಉದ್ಯೋಗದಿಂದ ವಜಾಗೊಳಿಸಿದೆ. ಹೊಸದಾಗಿ ಉದ್ಯೋಗಿಗಳ ಸೇರ್ಪಡೆಯಾಗಿರುವ ಕಾರಣದಿಂದಾಗಿ ಈ ಕಡಿತದ ಬಳಿಕವೂ ಸಂಸ್ಥೆಯಲ್ಲಿ ಸುಮಾರು 50,000 ಉದ್ಯೋಗಿಗಳು ಇದ್ದಾರೆ," ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಇಂದು ಮೊದಲನೆ ಉದ್ಯೋಗ ಕಡಿತವೇನಲ್ಲ!
ಜಾಗತಿಕವಾಗಿ ಕಳೆದ ವರ್ಷದಿಂದಲೇ ಉದ್ಯೋಗ ಕಡಿತವು ಆರಂಭವಾಗಿದೆ. ಹಣದುಬ್ಬರ, ಆರ್ಥಿಕ ಹಿಂಜರಿತದ ಆತಂಕದ ನಡುವೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಅಷ್ಟಕ್ಕೂ ಒಂದು ಬಾರಿ ಉದ್ಯೋಗ ಕಡಿತ ಘೋಷಣೆ ಮಾಡಿದ ಬಳಿಕ ಈ ಪ್ರಕ್ರಿಯೆ ನಿಂತಿಲ್ಲ. ಬಹುತೇಕ ಸಂಸ್ಥೆಗಳು ಎರಡು ಮೂರು ಹಂತಗಳಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಅದರಂತೆಯೇ ಬೈಜೂಸ್‌ನಲ್ಲಿಯೂ ಈ ಹಿಂದೆಯೂ ಉದ್ಯೋಗ ಕಡಿತ ಮಾಡಲಾಗಿದೆ.
ಈ ಹಿಂದೆ ಅಕ್ಟೋಬರ್ 2022ರಲ್ಲಿ ಬೈಜೂಸ್ ಸುಮಾರು ಶೇಕಡ 5ರಷ್ಟು ಅಥವಾ 2500 ಉದ್ಯೋಗಿಗಳನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ ಉದ್ಯೋಗದಿಂದ ವಜಾಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಮಾರ್ಚ್ 2023ರ ವೇಳೆಗೆ ಸಂಸ್ಥೆಯನ್ನು ಲಾಭದಾಯಕ ಸಂಸ್ಥೆಯಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಬೈಜೂಸ್ ಈ ಉದ್ಯೋಗ ಕಡಿತದ ಪ್ಲ್ಯಾನ್ ಮಾಡಿತ್ತು. ಇತ್ತೀಚಿಗೆ ನಡೆದ ಈ ಉದ್ಯೋಗ ಕಡಿತವು ಸಂಸ್ಥೆಯಲ್ಲಿನ ವೆಚ್ಚ ಕಡಿತದ ನಿಟ್ಟಿನಲ್ಲಿ ನಡೆದಿದೆ ಎಂಬ ಮಾಹಿತಿಯಿದೆ.
ಬೈಜೂಸ್‌ಗೆ ಎದುರಾದ ಹಲವಾರು ಸಂಕಷ್ಟಗಳು
ತನ್ನ ಪತ್ನಿ ದಿವ್ಯಾ ಗೋಕುಲ್‌ನಾಥ್ ಜೊತೆ ಸೇರಿ ರವೀಂದ್ರನ್ ಬೈಜೂಸ್ ಸಂಸ್ಥೆಯನ್ನು 2011ರಲ್ಲಿ ಆರಂಭ ಮಾಡಿದ್ದಾರೆ. ಅದಾದ ಬಳಿಕ ಸಂಸ್ಥೆಯು ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ ಕಳೆದ ಒಂದು ವರ್ಷದಿಂದ ಬೈಜೂಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದೆ. ಈ ಹಿಂದೆ ಬೈಜೂಸ್‌ನ ಹಳೆ ಉದ್ಯೋಗಿಗಳು ಹಾಗೂ ಪೋಷಕರು ಹಲವಾರು ಆರೋಪಗಳನ್ನು ಮಾಡಿದ್ದರು.
ಬೈಜೂಸ್ ಆಪ್‌ನಲ್ಲಿ ಪೋಷಕರಿಗೆ ಆಮಿಷ ಒಡ್ಡಲಾಗಿದೆ ಹಾಗೂ ಸಾಲ ಒಪ್ಪಂದಗಳನ್ನು ಕೂಡಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜೂಸ್‌ನ ಸಿಇಒ ರವೀಂದ್ರನ್‌ಗೆ ಸಮನ್ಸ್ ನೀಡಿದೆ. ಬೈಜೂಸ್‌ನಲ್ಲಿ ಸಾಲ ನೀಡುವ ಒಪ್ಪಂದಗಳನ್ನು ಮಾಡಲಾಗುತ್ತಿದೆ. ಪೋಷಕರಿಗೆ ಆಮಿಷ ಒಡ್ಡಲಾಗುತ್ತಿದೆ. ಹಾಗೆಯೇ ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
ಈ ಆರೋಪಗಳ ನಡುವೆಯೇ ಬೈಜೂಸ್‌ನ ಸಿಇಒ ಬೈಜು ರವೀಂದ್ರನ್‌ರ ಬೆಂಗಳೂರಿನಲ್ಲಿರುವ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು ಶೋಧ ಕಾರ್ಯಚರಣೆಯನ್ನು ನಡೆಸಲಾಗಿದೆ. ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಬೈಜೂಸ್ ಸಿಇಒ ಮನೆ, ಕಚೇರಿ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಸ್ತುತ ಬೈಜೂಸ್ ಸುಮಾರು ಒಂದು ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಕಾನೂನು ಕದ ತಟ್ಟಿದೆ. ಸುಮಾರು 10,000 ಕೋಟಿ ರೂಪಾಯಿ ಸಾಲ ಹೊಂದಿರುವ ಬೈಜೂಸ್ ಮೂರು ತಿಂಗಳಿಗೆ ಒಮ್ಮೆ ಬಡ್ಡಿಯಾದರೂ ಕಟ್ಟಬೇಕು. ಬಡ್ಡಿ ಮೊತ್ತ 40 ಮಿಲಿಯನ್ ಡಾಲರ್ ಅಥವಾ 33 ಕೋಟಿ ರೂಪಾಯಿ ಆಗಿದೆ. ಈ ಬಡ್ಡಿಯನ್ನು ಬೈಜೂಸ್‌ಗೆ ಪಾವತಿ ಮಾಡಲಾಗುತ್ತಿಲ್ಲ. ಈಗ ಈ ಸಾಲ ಮರುಪಾವತಿ ವಿಚಾರದಲ್ಲಿ ಕಾನೂನು ಸಮರ ನಡೆಯುತ್ತಿದೆ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications