ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್..! ಇಂದಿನಿಂದ ಟ್ಯಾಕ್ಸಿ, ಕ್ಯಾಬ್​ ದರ ಏರಿಕೆ..ಬೆಂಗಳೂರಿನಲ್ಲಿ ಹೇಗಿದೆ ಬೆಲೆ ಏರಿಕೆಯ ಬಿಸಿ?

ರಾಜ್ಯದ ಜನರಿಗೆ ಶಾಕ್​ ಮೇಲೆ ಶಾಕ್..! ಗಾಯದ ಮೇಲೆ ಬರೆ ಎಳೆಯುವುದು ಅಂದರೆ, ಇದೇ ಇರಬೇಕು.
ಹೌದು, ರಾಜ್ಯದಲ್ಲಿ ವರ್ಷದ ಮೊದಲ ತಿಂಗಳಿಂದ ಜೇಬಿಗೆ ಕತ್ತರಿಯಂತೂ ಬಿದ್ದೇ ಬೀಳುತ್ತಿದೆ.ಈಗಾಗಲೇ ಟೋಲ್ ದರ ಹೆಚ್ಚಳ, ಉಕ್ಕು ಮತ್ತು ಆಟೋ ಮೊಬೈಲ್ ದರ ಹೆಚ್ಚಳ ಮೆಟ್ರೋ ಪ್ರಯಾಣ ದರ ಆಯ್ತು, ಬಸ್ ದರ ಆಯ್ತು, ಕಸದಲ್ಲೂ ಹಣವನ್ನು ವಸೂಲಿ ಮಾಡಿ ಆಯ್ತು.. ಹಾಲು, ಡೀಸೆಲ್ ದರ ಹೆಚ್ಚಳವೂ ಆಯ್ತು.. ಪೆಟ್ರೋಲ್ ಡೀಸಲ್ ಏರಿಕೆ ಕೂಡ ಆಗಿದ್ದು,ಇದರ ಎಫೆಕ್ಟ್‌ನಿಂದ ಮತ್ತೊಂದು ದರ ಏರಿಕೆಗೆ ಶಾಕ್ ಜನರಿಗೆ ಕಾದಿದೆ. ಬೆಂಗಳೂರಿನಲ್ಲಿ ಇದರ ಬಿಸಿ ಹೇಗಿದೆ ಎಂಬ ಹೆಚ್ಚಿನ ವಿವರ ಇಲ್ಲಿದೆ.

ರಾಜ್ಯದಲ್ಲಿ ದರಹೆಚ್ಚಳ ಸಾರಿಗೆ ಕ್ಷೇತ್ರದಲ್ಲಿ ಮಹತ್ವಪೂರ್ಣ ಪರಿಣಾಮಗಳನ್ನು ಬೀರಿದೆ. ಇದೀಗ ಟ್ಯಾಕ್ಸಿ, ಕ್ಯಾಬ್​ ದರ ಏರಿಕೆಯಾಗಲಿದೆ.ಕಾರುಗಳ ಉಕ್ಕು ಮತ್ತು ಆಟೋ ಮೊಬೈಲ್ ದರ ಹೆಚ್ಚಳ, ಟೋಲ್ ದರದ ಹೆಚ್ಚಳ ಮತ್ತು ಡಿಸೇಲ್ ಮೇಲಿನ ಮಾರಾಟಗಳ ತೆರಿಗೆಯ ಹೆಚ್ಚಳ ಎಲ್ಲವೂ ನೇರವಾಗಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್, ಕ್ಯಾಬ್ ಸೇವೆಗಳ ಮೇಲೆ ಪ್ರಭಾವ ಬೀರುತ್ತದೆ ಆದ್ದರಿಂದ ಅವರು ಟ್ಯಾಕ್ಸಿ, ಕ್ಯಾಬ್​ ದರ ಹೆಚ್ಚಳ ಮಾಡಿದ್ದಾರೆ. ಕೊನೆಯಾಂದಾಗಿ ಇಂದು ಸಹ ಸಾರ್ವಜನಿಕರಿಗೆ ಹೊರೆ ಬೀಳುತ್ತದೆ.

ಇಂದಿನಿಂದ ಟ್ಯಾಕ್ಸಿ, ಕ್ಯಾಬ್​ ದರ ಏರಿಕೆ...ಎಷ್ಟು?

ಇಂದಿನಿಂದಲೇ, ಪ್ರತಿ ಕಿಮೀರ ಮೇಲೆ 2 ರಿಂದ 5 ರೂ.ವರೆಗೆ ಹೆಚ್ಚಳವನ್ನು ಅನ್ವಯಿಸುವುದರಿಂದ, ಪ್ರಯಾಣಿಕರಿಗೆ ಆರ್ಥಿಕ ಸಂಕಷ್ಟ ತಂದುವೋಡ್ಡಿದೆ.ಈಗಾಗಲೇ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರಿಗೆ ಮತ್ತಷ್ಟು ಹಣ ಖಚ್ಚು ಆಗುತ್ತದೆ. ಬೆಲೆ ಹೆಚ್ಚಲ ವಿಶೇಷವಾಗಿ ಶ್ರಮಿಕ ವರ್ಗ, ಕುಟುಂಬಗಳು ಮತ್ತು ಮೂಲಭೂತ ಸೇವೆಗಳ ಬಳಕೆದಾರರಿಗೆ ಹೆಚ್ಚು ಬಾಧೆಯಾಗತ್ತದೆ. ಹಾಗಾದರೆ, ಈ ಸ್ಥಿತಿಯನ್ನು ಸರಿದೂಗಿಸಲು ಸರ್ಕಾರಗಳು, ಸಾರಿಗೆ ಕಂಪನಿಗಳು, ಮತ್ತು ಸಾರ್ವಜನಿಕ ಸಂಸ್ಥೆಗಳು ತಕ್ಕ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಇದೇ ತಿಂಗಳ ಸಾರಿಗೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ಹೆಚ್ಚಾಗಿಯೇ ತಟ್ಟಿದೆ. ಟೋಲ್, ಕಾರು ಕಂಪನಿಗಳ ದರ ಏರಿಕೆ, ರಾಜ್ಯ ಸಾರಿಗೆ ಇಲಾಖೆಯ ಕಾರಿನ ಮೇಲೆ ಟ್ಯಾಕ್ಸ್ ಹೆಚ್ಚಳ ಪ್ರಮುಖವಾಗಿ ಡಿಸೇಲ್ ಮೇಲೆ ಮಾರಾಟ ತೆರಿಗೆ ಹೆಚ್ವಳದಿಂದ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ ಅಸೋಸಿಯೇಷನ್, ಕ್ಯಾಬ್ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್​ಗಳು ಕಂಗಲಾಗಿದ್ದು, ಪ್ರತಿ ಕಿಮೀಗೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗಿದೆ.

ಕ್ಯಾಬ್ಸ್ ಮತ್ತು ಟ್ರಾವೆಲ್ಸ್ ವಾಹನಗಳ ಕಿಮೀ ದರ ಏರಿಕೆಗೆ ಪ್ರಮುಖ ಕಾರಣ ಅಂದರೆ ಈಗಾಗಲೇ ‌ಕೇಂದ್ರ ಸರ್ಕಾರ ಟೋಲ್ ದರವನ್ನು ಶೇ.5 ರಷ್ಟು ಹೆಚ್ಚಳ ಮಾಡಿದೆ. ವಾಹನ ತಯಾರಿಕಾ ಕಂಪನಿಗಳು ಪ್ರತಿ ಕಾರಿನ ಮೇಲೆ ಶೇ.3 ರಿಂದ ಶೇ.4 ರಷ್ಟು ದರ ಹೆಚ್ಚಳ ಮಾಡಿದೆ.

ಪ್ರಯಾಣಿಕರು ದರ ಏರಿಕೆಯ ಬಗ್ಗೆ ಹೇಳುವುದು ಏನು?

ಎಲ್ಲಾ ದರ ಏರಿಕೆಯಿಂದ ಬೆಂಗಳೂರಿನ ಜನರಿಗೆ ತುಂಬಾ ಸಮಸ್ಯೆಯಾಗಿದೆ. ಸರ್ಕಾರ ಡಿಸೇಲ್ ದರ ಕಡಿಮೆ ಮಾಡಿದರೆ ಒಳ್ಳೆಯದು ಇದರ ಎಫೆಕ್ಟ್ ನಿಂದ ಎಲ್ಲಾ ವರ್ಗದ ಮೇಲೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನೂ ಯಾವ ಯಾವ ವಸ್ತುಗಳ ಮೇಲೆ ದರ ಏರಿಕೆ ಆಗಲಿದೆ ಎಂದು ಕಾದು ನೋಡಬೇಕಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದರು.

ಒಟ್ಟಾಲೆ ಬೆಲೆ ಏರಿಕೆಯಿಂದ ಜನರ ಜೀವನ ಅಸ್ಥವ್ಯಸ್ಥವಾಗಿದೆ. ಒಂದು ಕಡೆ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸರ್ಕಾರ ಸಹಾಯ ಮಾಡಿದ್ರೆ ಮತ್ತೋಂದು ಕಡೆಯಲ್ಲಿ ಪದೇ ಪದೇ ಬೆಲೆ ಏರಿಕೆ ಮಾಡಿ ಜನರ ಜೇಬುನ್ನು ಝಾಲಿ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+