ಕೊರೊನಾವೈರಸ್ ಬಿಕ್ಕಟ್ಟಿನ ನಡುವೆ ದೇಶದ ಉತ್ಸಾಹ ಮತ್ತು ಧೈರ್ಯವನ್ನು ಎತ್ತಿಹಿಡಿಯಲು ಮೊಂಡೆಲೆಜ್ ಇಂಡಿಯಾ ಬ್ರಾಂಡ್ ತನ್ನ ಲಾಂಛನವನ್ನು 'ಧನ್ಯವಾದಗಳು' ನೊಂದಿಗೆ ಬದಲಾಯಿಸುವ ಲಿಮಿಟೆಡ್ ಎಡಿಷನ್ ಕ್ಯಾಡ್ಬರಿ ಡೈರಿ ಮಿಲ್ಕ್ ಬಾರ್ ಪ್ರಾರಂಭಿಸಿದೆ.
70 ವರ್ಷಗಳ ಹಿಂದೆ ಭಾರತದಲ್ಲಿ ಚಾಕೊಲೇಟ್ ಬಾರ್ ಆರಂಭಿಸಿದ್ದ ಕ್ಯಾಡ್ಬರಿ ಡೈರಿ ಮಿಲ್ಕ್ ಇದೇ ಮೊದಲ ಬಾರಿಗೆ ತನ್ನ ಲಾಂಛನವನ್ನು ಬದಲಾಯಿಸಿದೆ. ಈ ಚಾಕೊಲೆಟ್ ಬಾರ್‌ಗಳು ಇಂತಹ ಕಷ್ಟದ ಸಮಯದಲ್ಲೂ ದಣಿವರಿಯಿಲ್ಲದೆ ಮತ್ತು ಉದಾರವಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವ ಗುರಿಯನ್ನು ಹೊಂದಿವೆ.

ಈ ಲಿಮಿಟೆಡ್ ಎಡಿಷನ್ ಚಾಕೊಲೆಟ್ ಬಾರ್ ಮಾರಾಟದಿಂದ ದೈನಂದಿನ ವೇತನ ಪಡೆಯುವವರ ಆರೋಗ್ಯ ವಿಮಾ ಪಾಲಿಸಿಗಳ ಕಡೆಗೆ ತನ್ನ ಆದಾಯವನ್ನು ಬಳಸಲು ಬದ್ಧವಾಗಿದೆ ಎಂದು ಮಾಂಡೆಲೆಜ್ ಇಂಡಿಯಾ ಹೇಳಿದೆ
ಭಾರತದಾದ್ಯಂತ ಭಾಷಾ ವೈವಿಧ್ಯತೆಯನ್ನು ಆಚರಿಸಲು, ಕ್ಯಾಡ್ಬರಿ ಡೈರಿ ಮಿಲ್ಕ್ 'ಧನ್ಯವಾದಗಳು' ಎಂದು ಇಂಗ್ಲಿಷ್, ಹಿಂದಿ / ಮರಾಠಿ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿ ಒಟ್ಟು ಎಂಟು ವಿವಿಧ ಭಾಷೆಗಳಲ್ಲಿ ಪ್ರಾರಂಭಿಸಿದೆ.
'ಧನ್ಯವಾದಗಳು' ಬಾರ್ 50 ಗ್ರಾಂಗೆ 40 ರುಪಾಯಿ ಬೆಲೆಯಿರುತ್ತದೆ ಮತ್ತು ಎಲ್ಲಾ ಚಿಲ್ಲರೆ ಅಂಗಡಿಗಳಲ್ಲೂ ಇತರೆ ಕ್ಯಾಡ್‌ಬರಿ ಡೈರಿ ಮಿಲ್ಕ್ ಬೆಲೆಯೊಂದಿಗೆ ಆಯ್ಕೆಯಾಗಿ ಲಭ್ಯವಿರುತ್ತದೆ.


Click it and Unblock the Notifications