ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಪ್ರಾರಂಭವಾಯಿತು ಭಾರತದ ವ್ಯಾಪಾರಿಗಳ ಅಭಿಯಾನ

ನವದೆಹಲಿ, ಜೂನ್ 10: ಕೊರೊನಾ ವೈರಸ್ ಉಗಮಕ್ಕೆ ಕಾರಣವಾಗಿರುವ ಚೀನಾದ ಮೇಲೆ ಎಲ್ಲ ರಾಷ್ಟ್ರಗಳು ಮುನಿಸಿಕೊಂಡಿವೆ.

ಇದರ ಬೆನ್ನಲ್ಲೇ ಭಾರತದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಪ್ರಾರಂಭಿಸಿದೆ.

2021 ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಉತ್ಪಾದಿಸುವ ಉತ್ಪನ್ನಗಳ ಆಮದನ್ನು 13 ಬಿಲಿಯನ್ ಯುಎಸ್ ಡಾಲರ್‌ಗೆ ಇಳಿಸುವ ಉದ್ದೇಶವನ್ನು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಹೊಂದಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಬುಧವಾರ ವರದಿ ಮಾಡಿದೆ.

"ಇಂಡಿಯನ್ ಗೂಡ್ಸ್ - ಅವರ್ ಪ್ರೈಡ್"

"ಇಂಡಿಯನ್ ಗೂಡ್ಸ್ - ಅವರ್ ಪ್ರೈಡ್" ಎಂಬ ಶೀರ್ಷಿಕೆಯಡಿ ಅಭಿಯಾನ ನಡೆಸಲಾಗುತ್ತಿದೆ. ಸಿಎಐಟಿ ಚೀನಾದಿಂದ ಬಹಿಷ್ಕರಿಸಲ್ಪಡುವ 3,000 ವಸ್ತುಗಳ ಪಟ್ಟಿಯನ್ನು ಹೊಂದಿದೆ.

ಭಾರತೀಯ ವಸ್ತುಗಳೇ ಪರ್ಯಾಯ

ಭಾರತೀಯ ವಸ್ತುಗಳೇ ಪರ್ಯಾಯ

ಇವುಗಳನ್ನು ಪ್ರಸ್ತುತ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇವುಗಳಿಗೆ ಪರ್ಯಾಯವಾಗಿ ಭಾರತೀಯರು ತಯಾರಿಸಿದ ಸರಕುಗಳಿಗೆ ಸುಲಭವಾಗಿ ಬದಲಾಯಿಸಬಹುದಾಗಿದೆ ಎಂದು ಸಿಎಐಟಿ ಹೇಳಿದೆ.

1 ಲಕ್ಷ ಕೋಟಿ ರೂಗೆ ಕಡಿತಗೊಳಿಸುವ ಗುರಿ

1 ಲಕ್ಷ ಕೋಟಿ ರೂಗೆ ಕಡಿತಗೊಳಿಸುವ ಗುರಿ

ಸಿಎಐಟಿ 7 ಕೋಟಿ ವ್ಯಾಪಾರಿಗಳು ಮತ್ತು 40,000 ವ್ಯಾಪಾರ ಸಂಘಗಳನ್ನು ಪ್ರತಿನಿಧಿಸುತ್ತದೆ. ಡಿಸೆಂಬರ್ 2021 ರ ವೇಳೆಗೆ ಚೀನಾದಲ್ಲಿ ತಯಾರಿಸಿದ ಸರಕುಗಳ ಆಮದನ್ನು 1 ಲಕ್ಷ ಕೋಟಿ ರೂಗೆ (ಸುಮಾರು 13 ಬಿಲಿಯನ್ ಯುಎಸ್ಡಿ) ಕಡಿತಗೊಳಿಸುವ ಗುರಿಯನ್ನು ಸಿಎಐಟಿ ಹೊಂದಿದೆ.

70 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ

70 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ

ಚೀನಾದಿಂದ ಪ್ರತಿ ವರ್ಷ ಭಾರತಕ್ಕೆ ಸುಮಾರು 70 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ ಆಗುತ್ತದೆ. ಹೀಗಾಗಿ ಸಾರ್ವಜನಿಕರ ಅಭಿಯಾನದ ಮೂಲಕ ವ್ಯಾಪಾರವನ್ನು ತಗ್ಗಿಸಿ ಚೀನಾಕ್ಕೆ ಬುದ್ದಿ ಕಲಿಸಲು ಭಾರತದ ವ್ಯಾಪಾರಿ ಸಂಘಟನೆಗಳು ಮುಂದಾಗಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+