ನವದೆಹಲಿ, ಮಾರ್ಚ್ 29: ಪ್ರಸ್ತುತ ಪ್ರತಿಯೊಬ್ಬರೂ ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದವರೆಗೂ ತಮ್ಮದೇ ಆದ ಸ್ವಂತ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಇತ್ತೀಚಿನ ದಿನಮಾನಗಳಲ್ಲಿ ಅದು ಬಹಳ ಅವಶ್ಯಕವು ಕೂಡ ಹೌದು. ಆದ್ರೆ ನಮ್ಮ ಬಂಧು-ಬಾಂಧವರು ವಯೋಸಹಜ ಅಥವಾ ಕಾಯಿಲೆಯಿಂದ ದಿಢೀರ್ ಸಾವನ್ನಪಿದ್ದರೆ ಅವರ ಖಾತೆಯಲ್ಲಿ ಇರೋ ಹಣ ವ್ಯರ್ಥವಾಗುತ್ತಾ? ಅದನ್ನು ಡ್ರಾ ಮಾಡೋದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಉದಾಹರಣೆಗೆ ಕೆಲಸಕ್ಕೆ ಹೋಗುವವರಿಗೆ ಸ್ಯಾಲರಿ ಅಕೌಂಟ್ ಇದ್ದೇ ಇರುತ್ತೆ , ಇನ್ನು ನಿವೃತ್ತಿ ಹೊಂದಿರುವವರಿಗೆ ಪಿಂಚಣಿ ಯೋಜನೆ ನಿಮಿತ್ತ ಅಕೌಂಟ್ ಗಳು ಇರುತ್ತೆ. ಇನ್ನು ವಿದ್ಯಾರ್ಥಿಗಳಿಗೆ ಅವರ ಕಾಲೇಜು ವ್ಯಾಸಂಗದ ವಿಚಾರ ಸ್ಕಾಲರ್ಶಿಪ್ ಗಳನ್ನ ಸ್ವೀಕರಿಸುವುದಕ್ಕೆ ಬ್ಯಾಂಕ್ ಅಕೌಂಟ್ ಗಳನ್ನು ತೆರೆದಿರಲಾಗುತ್ತೆ. ಈಗ ಪೇಮೆಂಟ್ ಸಂಪೂರ್ಣ ಡಿಜಿಟಲೈಜೇಷನ್ ಆದ್ಮೇಲೆ , ಒಬ್ಬ ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ಸೂಪರ್ ಮಾರ್ಕೆಟ್ ಮಾಲ್ಗಳವರೆಗೂ ಕೂಡ ಪ್ರತಿಯೊಬ್ಬರು ಕೂಡ - ವ್ಯಾಪಾರಿ ಇರಬಹುದು ಜನಸಾಮಾನ್ಯರಬಹುದು ಅಕೌಂಟನ್ನ ಹೊಂದಿರುವವರೆ ಆಗಿರುತ್ತಾರೆ.

ಪ್ರತಿ ಖಾತೆದಾರರು ಕೂಡ ತಮ್ಮ ಅಕೌಂಟ್ ಇನ್ಫಾರ್ಮೇಶನ್ ಅನ್ನ ಆದಷ್ಟು ಸೀಕ್ರೆಟ್ ಆಗಿ ಮೈನ್ಟೈನ್ ಮಾಡ್ತಾರೆ. ಅಂದ್ರೆ ಅವರ ಅಕೌಂಟ್ ಡೀಟೇಲ್ಸ್ ಎಟಿಎಂ ಕಾರ್ಡ್ ಪಿನ್ ಇರಬಹುದು ,ಅವರ ಅಕೌಂಟಿನಲ್ಲಿ ಇರುವಂತಹ ಬ್ಯಾಲೆನ್ಸ್ ಇರಬಹುದು, ಅದಕ್ಕೆ ಲಿಂಕ್ ಆಗಿರುವಂತಹ ಫೋನ್ ನಂಬರ್ ಮತ್ತು ಒಟಿಪಿ ಗಳು ಎಲ್ಲವನ್ನೂ ಬಹಳ ಗೌಪ್ಯವಾಗಿ ತಮ್ಮ ಬಳಿ ಮಾತ್ರ ಈ ಮಾಹಿತಿಗಳನ್ನ ಇರಿಸಿಕೊಂಡಿರುತ್ತಾರೆ .
ನಾಮಿನಿ ಮಾಡಿಸುವುದು ಬಹಳಾ ಮುಖ್ಯ !
ಹೀಗಿರುವಾಗ ಕುಟುಂಬದಲ್ಲಿ ಯಾವುದಾದರೂ ವ್ಯಕ್ತಿ ಮರಣ ಹೊಂದಿದ್ರೆ ಅವರ ಖಾತೆಯಲ್ಲಿ ಎಷ್ಟು ಹಣ ಇದೆ , ಅದನ್ನ ನಾವು ವಿಥ್ ಡ್ರಾ ಮಾಡೋದು ಹೇಗೆ? ಈ ಗೊಂದಲ ಸಾಕಷ್ಟು ಜನರಲ್ಲಿ ಇರುತ್ತೆ. ಬಹಳಷ್ಟು ಜನ ಈ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ ಕೂಡ .ಅದಕ್ಕೆ ಸರಿಯಾದ ದಾರಿ ಕಾಣದೆ ತಪ್ಪು ದಾರಿಗಳನ್ನ ಆಯ್ಕೆ ಮಾಡಿಕೊಳ್ಬೇಡಿ . ATM ಮೂಲಕ ಡ್ರಾ ಮಾಡೋ ತಪ್ಪು ಪ್ರಯತ್ನಕ್ ಮಾಡಬೇಡಿ. ಒಂದು ವೇಳೆ ಹಾಗೇ ರಾಂಗ್ ಅಟೆಂಪ್ಟ್ ಮಾಡಿದ್ರೆ ಅಕೌಂಟ್ ಬ್ಲಾಕ್ ಆಗಬಹುದು . ಮರಣ ಹೊಂದಿದ ವ್ಯಕ್ತಿಯ ಅಕೌಂಟ್ ನಲ್ಲಿ ಇರುವಂತಹ ಹಣವನ್ನು ಮರಳಿ ಪಡೆಯುವುದಕ್ಕೆ ಬ್ಯಾಂಕ್ ಎರಡು ಸುಲಭ ವಿಧಾನಗಳನ್ನು ಸೂಚಿಸಿದೆ . ಸೋ ಗ್ರಾಹಕರು ಆ ಎರಡು ದಾರಿಗಳ ಮೂಲಕ ಸುಲಭವಾಗಿ ಮರಣ ಹೊಂದಿದ ವ್ಯಕ್ತಿಯ ಖಾತೆಯಲ್ಲಿರೋ ಇರುವಂತಹ ಹಣವನ್ನ ವಿತ್ ಡ್ರಾ ಮಾಡಬಹುದಾಗಿದೆ.
ಸಹಜವಾಗಿ ಈ ರೀತಿ ಸನ್ನಿವೇಶಗಳಲ್ಲಿ ಎರಡು ರೀತಿಯ ಅಕೌಂಟ್ಗಳಿರುತ್ತೆ ಒಂದು ಜಾಯಿಂಟ್ ಅಕೌಂಟ್ ಮರಣ ಹೊಂದಿದ ವ್ಯಕ್ತಿ ಮತ್ತು ನೀವು ಇಬ್ಬರಿಗೂ ಸೇರಿದಂತಹ ಜಾಯಿಂಟ್ ಅಕೌಂಟ್ ಆಗಿದ್ರೆ ಅದಕ್ಕೆ ಅಕೌಂಟ್ ಕ್ರಿಯೆಟ್ ಮಾಡುವ ಸಂದರ್ಭದಲ್ಲಿ ನೋಮಿನಿ ಉಲ್ಲೇಖ ಮಾಡಲಾಗಿರುತ್ತದೆ. ಆ ನೋಮಿನಿಯನ್ನ, ವ್ಯಕ್ತಿ ಮರಣ ಹೊಂದಿದ ನಂತರ ಕ್ಲೇಮ್ ಮಾಡಬೇಕು ಅಂತಾದ್ರೆ ಬ್ಯಾಂಕ್ ಕೇಳದಂತಹ ದಾಖಲೆಗಳನ್ನು ಒದಗಿಸಬೇಕಾಗುತ್ತದೆ . ಮರಣ ಹೊಂದಿರುವಂತಹ ವ್ಯಕ್ತಿಯ ಮರಣ ಪ್ರಮಾಣ ಪತ್ರ ಮತ್ತೆ ಆ ಅಕೌಂಟ್ ನ ವಿವರಗಳು ಮರಣ ಹೊಂದಿರುವ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ನಿಮ್ಮ ಆಧಾರ್ ಕಾರ್ಡ್ ಇದಿಷ್ಟು ಡೀಟೇಲ್ಸ್ ಅನ್ನ ಬ್ಯಾಂಕಿಗೆ ಒದಗಿಸಿದರೆ , ಕೇವಲ ನಿಮ್ಮ ಹೆಸರಿನ ಖಾತೆಯಾಗಿ ಬದಲಾಯಿಸಿಕೊಳ್ಳಬಹುದು. ನಂತರ ನೀವು ಹಣವನ್ನ ಡ್ರಾ ಮಾಡಬಹುದು.
ಎರಡನೇ ವಿಧಾನ ಮರಣ ಹೊಂದಿರುವಂತಹ ವ್ಯಕ್ತಿ ಅವರ ಪರ್ಸನಲ್ ಖಾತೆ ಹೊಂದಿದ್ದು ಆ ನೋಮಿನಿ ಯಾರ ಹೆಸರಲ್ಲಿ ಮಾಡಿರುತ್ತಾರೆ ಆ ವಾರಸುದಾರ ತಮ್ಮ ಮತ್ತು ಮರಣ ಹೊಂದಿರುವ ವ್ಯಕ್ತಿಯ ದಾಖಲೆಗಳ ಸಮೇತ ಬ್ಯಾಂಕಿಗೆ ಭೇಟಿ ನೀಡಿ ಅವರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ . ಎಲ್ಲಾ ದಾಖಲೆಗಳು ಸರಿ ಇದೆಯಾ ಅಂತ ಪರಿಶೀಲಿಸಿದ ನಂತರ ಖಾತೆಯಲ್ಲಿರೋ ಹಣವನ್ನು ನಿಮಗೆ ಡ್ರಾ ಮಾಡೋದಿಕ್ಕೆ ಅವಕಾಶ ಮಾಡಿಕೊಡುತ್ತಾರೆ. ನಂತರದಲ್ಲಿ ಆ ಖಾತೆ ಮುಂದುವರಿಸಬೇಕಾ, ನಿಮ್ಮ ಹೆಸರಿಗೆ ವರ್ಗಾಯಿಸಬೇಕಾ ಅಥವಾ ಖಾತೆಯನ್ನು ಬಂದ್ ಮಾಡಬೇಕಾ ಅನ್ನೋದು ನಿಮ್ಮ ಆಯ್ಕೆ ಆಗಿರುತ್ತೆ. ಈ ಎರಡು ಸುಲಭ ವಿಧಾನಗಳ ಮೂಲಕ ಮರಣ ಹೊಂದಿದವರ ಖಾತೆಯಲ್ಲಿರುವ ಹಣವನ್ನ ನೀವು ಡ್ರಾ ಮಾಡಬಹುದು.


Click it and Unblock the Notifications