For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ರೋಗಿಗಳಿಗೆ, ಕಿಡ್ನಿ ಸಮಸ್ಯೆ ಇರೋರಿಗೆ 2250 ರು. ಪೆನ್ಷನ್

|

ಕ್ಯಾನ್ಸರ್, ಗಂಭೀರ ಸ್ವರೂಪದ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತಿಂಗಳಿಗೆ 2250 ರುಪಾಯಿ ಪಿಂಚಣಿ ನೀಡುವುದಕ್ಕೆ ಹರ್ಯಾಣ ಸರ್ಕಾರ ತೀರ್ಮಾನ ಮಾಡಿದೆ. ಸಚಿವ ಓಂಪ್ರಕಾಶ್ ಯಾದವ್ ಶನಿವಾರ ಈ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಅಡಿಯಲ್ಲಿ ಹಿರಿಯರ ಪಿಂಚಣಿ ಜತೆಗೆ ಕ್ಯಾನ್ಸರ್ ರೋಗಿಗಳ ಸೇರ್ಪಡೆಗೆ ಹರ್ಯಾಣ ಸರ್ಕಾರ ಆಲೋಚನೆ ಮಾಡಿದ್ದರ ಬಗ್ಗೆ ಸಚಿವರು ತಿಳಿಸಿದ್ದರು. ಸದ್ಯಕ್ಕೆ 28 ಲಕ್ಷಕ್ಕೂ ಹೆಚ್ಚು ಮಂದಿ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಆಡಿಯಲ್ಲಿ ತಿಂಗಳಿಗೆ 2250 ರುಪಾಯಿ ಪಡೆಯುತ್ತಿದ್ದಾರೆ.

ಇನ್ನು ಕೇಂದ್ರ ಸರ್ಕಾರದ ಪ್ರಮುಖ ಯೋಜನೆ, 'ಒನ್ ನೇಷನ್, ಒನ್ ರೇಷನ್ ಕಾರ್ಡ್' ಅನುಷ್ಠಾನ ಕುರಿತು ಮನೋಹರ್ ಲಾಲ್ ಖಟ್ಟರ್ ಅವರು ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. "ಹರ್ಯಾಣದಲ್ಲಿ ಇರುವ ಇತರ ರಾಜ್ಯಗಳ ಕಾರ್ಮಿಕರಿಗೆ ಪ್ರತ್ಯೇಕ ರೇಷನ್ ಕಾರ್ಡ್ ಬೇಡ. ಅವರ ಬಳಿ ಇರುವ ರೇಷನ್ ಕಾರ್ಡ್ ನ ಮೂಲಕವೇ ಆನ್ ಲೈನ್ ನಲ್ಲಿ ರೇಷನ್ ಪಡೆಯುತ್ತಾರೆ" ಎಂದು ಸಚಿವರು ತಿಳಿಸಿದ್ದಾರೆ.

ಕ್ಯಾನ್ಸರ್ ರೋಗಿಗಳಿಗೆ, ಕಿಡ್ನಿ ಸಮಸ್ಯೆ ಇರೋರಿಗೆ 2250 ರು. ಪೆನ್ಷನ್

 

ಆಧಾರ್ ಜತೆಗೆ ಜೋಡಣೆ ಆಗಿರುವ ಎಲ್ಲ ರಾಜ್ಯಗಳ ರೇಷನ್ ಕಾರ್ಡ್ ದಾರರಿಗೂ ಈ ಯೋಜನೆಯನ್ನು ಆರಂಭಿಸುವುದಾಗಿ ತಿಳಿಸಲಾಗಿದೆ.

English summary

Cancer Patients Get Monthly Pension From Haryana Government

Cancer patients, who are suffering from severe kidney ailments will get 2250 monthly pension from Haryana government.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more