ಕೇಕ್ ಅಂದ್ರೆ ತುಂಬ ಜನರು ಬಾಯಲ್ಲಿ ನೀರು ಬರುತ್ತದೆ. ಅಂಗಡಿಯಲ್ಲಿ ಲಭ್ಯವಿರುವ ತರಹೇವಾರಿ ಕೇಕ್‌ಗಳು ಚಿಕ್ಕ ವಯಸ್ಸಿನವರಿಂದ ವೃದ್ಧರನ್ನು ಆಕರ್ಷಿಸುತ್ತವೆ. ಇದರ ಬಣ್ಣ ಹಾಗೂ ಇದರ ರುಚಿ ಪದೆ ಪದೇ ಇದರತ್ತ ಮನಸ್ಸು ಸೆಳೆಯುವಂತೆ ಮಾಡುತ್ತದೆ. ಆದರೆ ಕೇಕ್ ಪ್ರೀಯರು ಈ ಸುದ್ದಿ ಓದಲೇ ಬೇಕು.
ಇತ್ತೀಚಿಗೆ ಕೆಲ ತಿಂಗಳುಗಳ ಹಿಂದೆ ರಾಜ್ಯ ಸರ್ಕಾರ ಗೋಬಿ ಹಾಗೂ ಕಬಾಬ್‌ಗಳಿಗೆ ಕಲರ್‌ಗಳನ್ನು ಬಳಸದಂತೆ ಆದೇಶವನ್ನು ಮಾಡಿತ್ತು. ಈ ಸುದ್ದಿ ನಿಮಗೆಲ್ಲಾ ನೆನಪಿರಬೇಕು. ಇಂತಹದ್ದೇ ಇನ್ನೊಂದು ಸುದ್ದಿ ಈಗ ಹೊರ ಬಂದಿದೆ. ಈಗ ಕೇಕ್‌ನಲ್ಲೂ ಕೂಡ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. ನಿಮಗೆ ರೆಡ್ ವ್ಯಾಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ಗಳು ಇಷ್ಟಾನಾ. ಹಾಗಿದ್ದರೆ ಈ ಸುದ್ದಿಯನ್ನು ಓದಿ.

ಕೇಕ್‌ನಲ್ಲಿ ವಿಷಕಾರಕ ಅಂಶ ಪತ್ತೆ
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇತ್ತೀಚಿಗೆ 235 ಕೇಕ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 12 ಸ್ಯಾಂಪಲ್ ಪರೀಕ್ಷೆಗಳಲ್ಲಿ ಕ್ಯಾನ್ಸರ್ ಕಾರಕ್ ಅಂಶಗಳು ಪತ್ತೆ ಆಗಿವೆ. ಕೃತಕ ಬಣ್ಣದ ಬಳಕೆಯನ್ನು ಕಡಿಮೆ ಮಾಡಬೇಕು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಕೆ. ವಾರ್ನಿಂಗ್ ಮಾಡಿದ್ದಾರೆ.
ಕೇಕ್‌ನಲ್ಲಿ ಏನೆಲ್ಲಾ ಅಂಶ ಪತ್ತೆ ಆಗಿದೆ?
ಸ್ಯಾಂಪಲ್‌ಗಳ ತಪಾಸಣೆಯಲ್ಲಿ ರೆಡ್ ವ್ಯಾಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ಗಳಲ್ಲಿ ವಿಷಕಾರಿಕ ಅಂಶಗಳು ಪತ್ತೆಯಾಗಿವೆ. ಈ ಕೇಕ್‌ಗಳಲ್ಲಿ ಕೃತಕ ಬಣ್ಣವನ್ನು ಬಳಿಸಿದ್ದು ಪರೀಕ್ಷೆಯಲ್ಲಿ ಬಯಲಾಗಿದೆ. ರಾಜ್ಯದ ಹಲವು ಬೇಕರಿಗಳಿಂದ ಸುಮಾರು 235 ಕೇಕ್‌ಗಳ ಸ್ಯಾಂಪಲ್ ಟೆಸ್ಟ್‌ಗೆ ಒಳಪಡಿಸಲಾಗಿದೆ. ತಪಾಸಣೆಗೆ ಒಳಪಟ್ಟ 12 ಕೇಕ್‌ಗಳಲ್ಲಿ ಕ್ಯಾನ್ಸರ್ ಕಾರಕ್ ಅಂಶಗಳು ಪತ್ತೆಯಾಗಿವೆ. ಈ 12 ಸ್ಯಾಂಪ್‌ಗಳಲ್ಲಿ ಅಲೂನ್ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4 ಆರ್, ಕಾರ್ಮಿಯೋಸೆನ್ ಎಂಬ ಅಂಶಗಳು ಪತ್ತೆಯಾಗಿವೆ.

ಕಳಪೆ ಗುಣಮಟ್ಟ
ಆಗಸ್ಟ್‌ನಲ್ಲಿ ಇಲಾಖೆಯು ರಾಜ್ಯಾದ್ಯಂತ 221 ಪನ್ನೀರ್ ಹಾಗೂ 65 ಖೋವಾ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ತಪಾಸಣೆಯ ವೇಳೆ ಈ ಡೈರಿ ಉತ್ಪನ್ನಗಳು ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿವೆ ಎಂಬುದು ತಿಳಿದು ಬಂದಿದೆ. ಸೆಪ್ಟೆಂಬರ್‌ನಲ್ಲಿ ಇಲಾಖೆ ರೈಲ್ವೆ ನಿಲ್ದಾಣಗಳಲ್ಲಿನ 142 ಆಹಾರ ಮಳಿಗೆಗಳನ್ನು ಹಾಗೂ ರಾಜ್ಯದ ಪ್ರವಾಸಿ ತಾಣಗಳ 35 ಹೊಟೇಲ್ ಘಟಕಗಳನ್ನು ಪರಿಶೀಲಿಸಿ ನಿಯಮ ಪಾಲನೆ ಆಗುತ್ತಿದೆಯಾ ಎಂಬ ಬಗ್ಗೆ ಇಲಾಖೆ ತಿಳಿದು ಕೊಂಡಿತು.
ಸಚಿವರು ಹೇಳಿದ್ದೇನು?
ಬೇಕರಿ ಹಾಗೂ ಮಳೆಗೆಗಳಲ್ಲಿ ತಪಾಸಣೆಗೆ ಒಳಪಟ್ಟ ಪದಾರ್ಥಗಳಲ್ಲಿ ಹಾನಿಕಾರಣ ಕೆಮಿಕಲ್ಸ್ ಪತ್ತೆ ಆಗಿದ್ದು, ಇಲಾಖೆ ಹೊರಡಿಸಿರುವ ಮಾನದಂಡಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪ್ರತಿ ತಿಂಗಳೂ ಆಹಾರ ಪದಾರ್ಥಗಳ ಪರೀಕ್ಷೆ ನಡೆಯುತ್ತದೆ. ಹೊಟೇಲ್ ಹಾಗೂ ಬೇಕರಿಗಳ ಕೇಕ್‌ಗಳನ್ನು ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಈ ಪದಾರ್ಥಗಳಲ್ಲಿ ಇರುವ ವಿಷಕಾರಿ ಅಂಶಗಳು ಪತ್ತೆಯಾಗಿದ್ದು, ಗ್ರಾಹಕರು ಜಾಗೃತಿ ವಹಿಸಬೇಕು ಎಂದು ಮುನ್ನೆಚ್ಚರಿಕೆಯನ್ನು ಸಹ ಸಚಿವರು ನೀಡಿದ್ದಾರೆ.


Click it and Unblock the Notifications