ನವದೆಹಲಿ, ಜನವರಿ 07: ಅಜೀಂ ಪ್ರೇಮ್‌ಜಿ ಮಾಲೀಕತ್ವದ ವಿಪ್ರೋ ಭಾರತದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾಗಿದ್ದು, ಪ್ರಸ್ತುತ 245000 ಕೋಟಿ ರೂ. ಮಾರ್ಕೆಟ್ ಕ್ಯಾಪ್ ಅನ್ನು ಹೊಂದಿದೆ. ಹಲವು ವರ್ಷಗಳಲ್ಲಿ ಕಂಪನಿಯು ತನ್ನ ಅನುಭವಿ ನಾಯತ್ವದಿಂದಾಗಿ ಬೇರೆ-ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಾರುಕಟ್ಟೆಯಲ್ಲಿ ಎತ್ತರಕ್ಕೆ ಬೆಳೆದು ನಿಂತಿದೆ.
ಅದರಂತೆ, ಕಂಪನಿಯ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ವಿಪ್ರೋದ ಹಣಕಾಸು ಹೊಣೆ ನೋಡಿಕೊಳ್ಳುತ್ತಿದ್ದ ಜತಿನ್ ದಲಾಲ್ ಅವರು. ಬೆಂಗಳೂರಿನಲ್ಲಿ ನೆಲೆಸಿರುವ ಜತಿನ್ ದಿಲಾಲ್ ಅವರು ಚಾರ್ಟೆರ್ಡ್ ಅಕೌಂಟೆಂಟ್ ಆಗಿದ್ದಾರೆ. ವಿಪ್ರೋ ಸಿಎಫ್‌ಒ ಹುದ್ದೆಗೆ ರಾಜೀನಾಮೆ ನೀಡಿದ್ದು, ಡಿಸೆಂಬರ್ 1ರಿಂದ ಅವರು ಕಾಗ್ನಿಜೆಂಟ್ ಕಂಪನಿಗೆ ಸೇರಿದ್ದಾರೆ.

ಜತಿನ್ ಅವರ ವಿರುದ್ಧ ಮಾಜಿ ಉದ್ಯೋಗಿಯು ಪ್ರಕರಣವನ್ನು ದಾಖಲಿಸಿದ್ದು, ಮೊದಲ ವಿಚಾರಣೆಯು ನ.28ರಂದು ನಡೆದಿತ್ತು. ಆದರೆ, ಜತಿನ್ ಅವರ ವಿರುದ್ಧ ದಾಖಲಾಗಿರುವ ಮೊಕದ್ದಮೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಜ.3ರಂದು ನ್ಯಾಯಾಲಯವು ಇಬ್ಬರ ವಾದವನ್ನು ಆಲಿಸಲಿದೆ. ಮುಂದಿನ ವಿಚಾರಣೆ ವೇಳೆ ಪ್ರಕರಣವನ್ನು ಮಧ್ಯಸ್ಥಿಕೆಗೆ ವಹಿಸುವುದಾಗಿ ವರದಿಯಾಗಿದೆ.
ಜತಿನ್ ಅವರು ಸೂರತ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎನ್‌ಐಟಿ)ಯಿಂದ ಎಂಜಿನಿರಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಜತೆಗೆ ಮುಂಬೈನ ಎನ್‌ಎಂಐಎಂಎಸ್‌ನಿಂದ ಹಣಕಾಸು ಹಾಗೂ ಅಂತಾರಾಷ್ಟ್ರೀಯ ಬಿಸಿನೆಸ್‌ನಲ್ಲಿ ಪಿಜಿ ಡಿಪ್ಲೋಮಾ ಪಡೆದುಕೊಂಡಿದ್ದಾರೆ.
ಜತಿನ್ ಅವರು 2002ರಿಂದ ವಿಪ್ರೋ ಜತೆಗಿದ್ದು, ತಮ್ಮ ಅಧಿಕಾರವಧಿಯಲ್ಲಿ ಬೇರೆ ಬೇರೆ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 2002ರಿಂದ 2004ರವರೆ ಅವರು ವಿಪ್ರೋದ ಆಂತರಿಕ ಹಂಚಿಕೆ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 20011ರಿಂದ 2015ರವರೆಗೆ ಅವರು ವಿಪ್ರೋದ ಗ್ಲೋಬಲ್ ಐಟಿ ಬಿಸಿನೆಸ್ ಆಪರೇಷನ್‌ನ ಸಿಎಫ್‌ಒ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ವಿಪ್ರೋಗೆ ಸೇರುವ ಮೊದಲು ಜತಿನ್ ಅವರು ಪ್ರತಿಷ್ಟಿತ ಜನರಲ್ ಎಲೆಕ್ಟ್ರಿಕ್(ಜಿಇ)ನ ಫೈನಾನ್ಸ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಮ್‌ನಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿ ಅವರಿಗೆ ಗ್ಲೋಬಲ್ ಕೊರ್ಪೊರೇಟ್ ಆನರ್ ಪ್ರಶಸ್ತಿ ಪಡೆದುಕೊಂಡಿದ್ದರು. ಅಲ್ಲದೆ ದಲಾಲ್ ಅವರು ನ್ಯೂಯಾರ್ಕ್ ಸ್ಟಾಕ್ ಎಕ್ಸೆಂಜ್‌ನಲ್ಲಿ ಲಿಸ್ಟೆಡ್ ಕಂಪನಿಯ ಸಲಹಾ ಮಂಡಳಿಯಲ್ಲಿಸದಸ್ಯರಾಗಿ 2015ರಿಂದ 2022ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ ಜತಿನ್ ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ)ದ ಸಿಎಫ್‌ಒ ಸಮಿತಿಗೆ 2023-2024ರ ಅವಧಿಗೆ ಸಹ-ಅಧ್ಯಕ್ಷರಾಗಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications