ಅಹಮದಾಬಾದ್‌ನಲ್ಲಿ ಮೇ 15ರಿಂದ ನೋಟು ಬಳಕೆಯಿಲ್ಲ: ಸಂಪೂರ್ಣ ಡಿಜಿಟಲ್ ವ್ಯವಹಾರ

ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್‌ನ ಅಹಮದಾಬಾದ್‌ನಲ್ಲಿ ಮೇ 15ರಿಂದ ಸಂಪೂರ್ಣ ಡಿಜಿಟಲ್‌ ವ್ಯವಹಾರ ಜಾರಿಗೊಳಿಸಲು ಗುಜರಾತ್‌ ಸರಕಾರ ನಿರ್ಧರಿಸಿದ್ದು ನೋಟು ಬಳಕೆ ಮಾಡದಿರಲು ನಿರ್ಧರಿಸಿದೆ.

ಅಹಮದಾಬಾದ್‌ನಲ್ಲಿ ಮೇ 15ರಿಂದ ನೋಟು ಬಳಕೆಯಿಲ್ಲ!

ಕರೆನ್ಸಿ ನೋಟುಗಳಿಂದ ಕೊರೊನಾವೈರಸ್ ಸೋಂಕು ಹರಡಬಹುದು ಎಂಬ ಆತಂಕವಿದ್ದು, ಗೃಹ ವಿತರಣೆ ಆರ್ಡರ್‌ಗಳೂ ಸೇರಿದಂತೆ ಎಲ್ಲ ಖರೀದಿ ವ್ಯವಹಾರಗಳಿಗೂ ನೋಟುಗಳ ಬದಲಿಗೆ ಡಿಜಿಟಲ್‌ ಪೇಮೆಂಟ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಗುಜರಾತ್‌ನ ಹೆಚ್ಚುವರಿ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಗುಪ್ತಾ ಆದೇಶ ಹೊರಡಿಸಿದ್ದಾರೆ.

ಅಹಮದಾಬಾದ್ನಲ್ಲಿ ಕೊರೋನಾ ವೈರಸ್ ಪ್ರಕರಣಗಳು ವಿಪರೀತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಅಹಮದಾಬಾದ್‌ನಲ್ಲಿ 5 ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಯಮವನ್ನು ಸರ್ಕಾರ ಬಿಗಿಗೊಳಿಸಿದೆ. ದಿನಸಿ, ಹಾಲು ಹಾಗೂ ಔಷಧ ಅಂಗಡಿ ಬಿಟ್ಟು ಮತ್ತಾವುದೇ ಮಳಿಗೆಗಳನ್ನು ತೆರೆದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+