ಬೆಂಗಳೂರಿಗರೇ ಇಲ್ಲಿ ಕೇಳಿ.. ನಾಳೆ ಬೆಂಗಳೂರಿನಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸ್ಥಗಿತವಾಗಲಿದೆ.
ಹೌದು, ಜಲಮಂಡಳಿಯ ಕಾವೇರಿ 4ನೇ ಹಂತ 2ನೇ ಘಟ್ಟದ(ಪೂರ್ವ)1 ರ ವ್ಯಾಪ್ತಿಗೆ ಒಳಪಡುವ ಮಾರತ್ತಹಳ್ಳಿ, ಜೀವಿಕಾ ಆಸ್ಪತ್ರೆ ಸಮೀಪ 800 ಮಿ.ಮೀ. ವ್ಯಾಸದ ಹೂಡಿ ಜಿ.ಎಲ್.ಆರ್ ಒಳ ಹರಿವು ಮಾರ್ಗವನ್ನು ಸ್ಥಗಿತಗೊಳಿಸಿ ಕಾಮಗಾರಿ ನಡೆಸಲಾಗುತ್ತಿದೆ. ಈ ಕಾರಣದಿಂದ ಗುರುವಾರ (ಫೆ.20)ದಿಂದ ಈ ಕೆಳಗಿನ ಪ್ರದೇಶ, ಬಡಾವಣೆಗಳಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಸುಮಾರು 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ನೀರಿನ ಸರಬರಾಜು ಸ್ಥಗಿತದ ಪ್ರದೇಶಗಳ ವಿವರಗಳು ಈ ಕೆಳಗಿನಂತೆ ಇದೆ.

ಯಾವೆಲ್ಲಾ ಸ್ಥಳಗಳಲ್ಲಿ ನೀರು ಪೂರೈಕೆ ನಾಳೆ ಸ್ಥಗಿತ
ಮಾರತ್ತಹಳ್ಳಿ, ದೊಡ್ಡನ್ನೆಕುಂದಿ, ಮುನ್ನೆಕೊಳಲು, ಓ.ಎಂ.ಬಿ.ಆರ್. ಲೇಔಟ್, ಹೆಚ್.ಆರ್.ಬಿ.ಆರ್ ಲೇಔಟ್, ಸಿಗೇಹಳ್ಳಿ, ಬಟ್ಟರಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ, ಬೆಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣೆನಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ, ಜೀವನ್ ಭೀಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ನೀರಿನ ಸಮಸ್ಸೆಯಾಗಲಿದೆ.
ಈ ಕುರಿತು ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ವೇಸ್ಟ್ ಮಾಡಿದರೆ 5000 ರೂ. ದಂಡ
ನೀರು ವೇಸ್ಟ್ ಮಾಡಿದರೆ ನೀವು 5000 ರೂ.ಗಳ ದಂಡವನ್ನು ಕಟ್ಟಬೇಕಾಗುತ್ತದೆ. ಬೆಂಗಳೂರಿನಲ್ಲಿ ಕಳೆದ ಭಾರಿ ಬೇಸಿಯಲ್ಲಿ ನೀರಿಗೆ ಹಾಹಾಕಾರ ಎದುರಾಗಿತ್ತು. ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ, ಅಂತರ್ಜಲ ಕುಸಿತದಿಂದ ಈ ಬಾರಿ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲು BWSSB ಸಜ್ಜಾಗಿದೆ. ನೀರು ವೇಸ್ಟ್ ಮಾಡುವವರ ವಿರುದ್ಧ ಸಾವಿರಾರು ರೂ. ದಂಡ ವಿಧಿಸಲು ಜಲಮಂಡಳಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.
ಲಭ್ಯವಿರುವ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸುವುದು ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕುಡಿಯುವ ನೀರನ್ನು ಸಾರ್ವಜನಿಕರು ವ್ಯರ್ಥವಾಗಿ ಬಳಸುವುದನ್ನು ತಪ್ಪಿಸಲು, ಕುಡಿಯುವ ನೀರು ಪೋಲು ಮಾಡುವವರ ವಿರುದ್ದ ದಂಡ ವಿಧಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಾಗಿದೆ.
ಈ ಕುರಿತು ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ಆದೇಶಿಸಿದ್ದಾರೆ. ಈ ಆದೇಶದಲ್ಲಿ ಕುಡಿಯುವ ನೀರನ್ನು ಗಾಡಿ ತೊಳೆಯಲು, ಗಾರ್ಡನ್ ಬಳಕೆ ಇನ್ನಿತರ ಅನವಶ್ಯಕೆ ಬಳಕೆಗೆ ಉಪಯೋಗಿ ವ್ಯರ್ಥಗೊಳಿಸಿದರೆ ಅಂಥವರಿಗೆ 5000 ರೂಪಾಯಿ ದಂಡಿ ವಿಧಿಸಲಾಗುತ್ತದೆ. ಇದೇ ತಪ್ಪು ಪುನರಾವರ್ತನೆ ಆದರೆ 500 ರೂ. ಹೆಚ್ಚುವರಿ ವಿಧಿಸಬೇಕಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷರು ಆದೇಶ ಜನತೆ ಎಚ್ಚರಿಕೆ ನೀಡಿದ್ದಾರೆ.
ಕುಡಿಯುವ ನೀರಲ್ಲಿ ಕಾರು ತೊಳೆದರೆ ದಂಡಂ ದಶಗುಣಂ..!
ಬೇಸಿಗೆಯ ಹೊಸ್ತಿಲಲ್ಲೇ ಇರುವ ಮಹಾನಗರ ಬೆಂಗಳೂರಿಗೆ ಬೇಸಿಗೆ ಮುನ್ನವೇ ನೀರಿನ ಬಿಸಿ ತಟ್ಟಿದಂತೆ ಕಾಣುತ್ತಿದೆ. ಈಗಾಗಲೇ ತಾಪಮಾನ ಹೆಚ್ಚಾಗಿದ್ದು, ಕೆಲವೆಡೆ ನೀರಿನ ಸಮಸ್ಯೆ ಶುರುವಾಗಿದೆ. ಹೀಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಹೊಸದೊಂದು ನಿಯಮ ಜಾರಿ ಮಾಡಿದೆ. ಅದೇನೆಂದರೆ ಕುಡಿಯುವ ನೀರನ್ನು ಕೆಲವೊಂದು ಅನಿವಾರ್ಯವಲ್ಲದ ಚಟುವಟಿಕೆಗಳಿಗೆ ಬಳಸುವುದನ್ನು ನಿಷೇಧಿಸಿದೆ. ಅಂದರೆ ಕಾರು ತೊಳೆಯುವುದು, ತೋಟಗಾರಿಕೆ, ಕಟ್ಟಡ ನಿರ್ಮಾಣ, ರಸ್ತೆ ದುರಸ್ತಿ ಮತ್ತು ನಿರ್ವಹಣೆಯಂತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಮೀರಿದಲ್ಲಿ ₹5000 ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿದೆ
ಈ ಹೊಸ ನಿಯಮ ಬೇಸಿಗೆ ಮುಗಿಯುವವರೆಗೆ ಇರುತ್ತದೆ ಎಂದು ತಿಳಿಯಲಾಗಿದೆ. ಫೆಬ್ರವರಿ 17ರಂದು ಹೊರಡಿಸಿರುವ ಈ ಆದೇಶ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯಿದೆ ಹಾಗೂ 1964ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ವಾಹನಗಳನ್ನು ತೊಳೆಯುವುದನ್ನು, ಉದ್ಯಾನವನಗಳಿಗೆ ಕುಡಿಯುವ ನೀರು ಬಳಸುವುದನ್ನು, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಬಳಸುವುದು, ಮಾಲ್ ಹಾಗೂ ಚಿತ್ರಮಂದಿರಗಳಲ್ಲಿ ಸ್ವಚ್ಛತೆಗಾಗಿ ಕುಡಿಯುವ ನೀರು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.


Click it and Unblock the Notifications