ಅಂತೂ ಇಂತೂ ವಿದ್ಯಾರ್ಥಿಗಳ ಕಾಯುವಿಕೆ ಮುಗಿಯಿತು! ಬಹುನಿರೀಕ್ಷಿನ CBSE 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಅಧಿಕೃತ CBSE ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ಪರಿಶೀಲಿಸಬಹುದು. ಈ ಬಾರಿ 88.39% ಫಲಿತಾಂಶ ಬಂದಿದೆ. ವಿಜಯವಾಡ ರೀಜನ್ ಅತಿ ಹೆಚ್ಚು ಶೇ.99.60 ರಷ್ಟು ಫಲಿತಾಂಶ ದಾಖಲಿಸಿದೆ. ಮತ್ತೊಂದೆಡೆ ಬೆಂಗಳೂರು 95.95%, ತಿರುವನಂತಪುರಂ 99.32%, ಚೆನ್ನೈ 97.39% ಫಲಿತಾಂಶ ದಾಖಲಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತೀರ್ಣ ಪ್ರಮಾಣ ಶೇ.0.41 ರಷ್ಟು ಹೆಚ್ಚಾಗಿದೆ.

CBSE 12ನೇ ತರಗತಿ ಫಲಿತಾಂಶ 2025 ಅನ್ನು ನೋಡುವುದು ಹೇಗೆ..?
ವಿದ್ಯಾರ್ಥಿಗಳು ತಮ್ಮ CBSE 12ನೇ ತರಗತಿ ಅಂಕಪಟ್ಟಿಗಳನ್ನು cbse.gov.in ಮತ್ತು results.cbse.nic.in ಅಧಿಕೃತ CBSE ವೆಬ್‌ಸೈಟ್‌ಗಳ ಮೂಲಕ ಪರಿಶೀಲಿಸಬಹುದು ಮತ್ತು ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಬಹುದು. CBSE 12ನೇ ತರಗತಿ ಅಂಕಪಟ್ಟಿ 2025 (ಆನ್‌ಲೈನ್) ಡೌನ್‌ಲೋಡ್ ಮಾಡುವ ಹಂತಗಳು ಇಲ್ಲಿವೆ.
ಹಂತ 1: ಅಧಿಕೃತ CBSE ಫಲಿತಾಂಶ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: CBSE ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನಿಮ್ಮ ಅರ್ಜಿ ಸಂಖ್ಯೆ, ಜನ್ಮ ದಿನಾಂಕ ಮತ್ತು ರೋಲ್ ಸಂಖ್ಯೆಯನ್ನು ನಮೂದಿಸಿ.
ಹಂತ 4: CBSE 12ನೇ ತರಗತಿಯ ಅಂಕಪಟ್ಟಿ PDF ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.
ಹಂತ 5: ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿ ನಂತರ ಪ್ರೇಂಟ್
ತೆಗೆದುಕೊಳ್ಳಿ.
ಡಿಜಿಲಾಕರ್ ಮೂಲಕ CBSE 12ನೇ ತರಗತಿ ಫಲಿತಾಂಶ 2025 ಪರಿಶೀಲಿಸುವುದು ಹೇಗೆ?
ವಿದ್ಯಾರ್ಥಿಗಳು ಡಿಜಿಲಾಕರ್ ಪ್ಲಾಟ್‌ಫಾರ್ಮ್ ಮೂಲಕವೂ ತಮ್ಮ CBSE 12ನೇ ತರಗತಿ ಫಲಿತಾಂಶ 2025 ಅನ್ನು ಪ್ರವೇಶಿಸಬಹುದು. ಹೇಗೆ ಎಂಬುದು ಇಲ್ಲಿದೆ ನೋಡಿ.
ಹಂತ 1: digilocker.gov.in ಗೆ ಭೇಟಿ ನೀಡಿ ಅಥವಾ DigiLocker ಅಪ್ಲಿಕೇಶನ್ ತೆರೆಯಿರಿ.
ಹಂತ 2: 6-ಅಂಕಿಯ ಪ್ರವೇಶ ಕೋಡ್, ಶಾಲಾ ಕೋಡ್ ಮತ್ತು CBSE ರೋಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ.
ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯನ್ನು OTP ಯೊಂದಿಗೆ ದೃಢೀಕರಿಸಿ
ಹಂತ 4: ಲಾಗಿನ್ ಆಗಿ ಮತ್ತು "ಡಾಕ್ಯುಮೆಂಟ್‌ಗಳು" ವಿಭಾಗಕ್ಕೆ ನ್ಯಾವಿಗೇಟ್ ಮಾಡಿ.
ಹಂತ 5: ನಿಮ್ಮ CBSE 12ನೇ ತರಗತಿಯ 2025 ಅಂಕಪಟ್ಟಿಯನ್ನು ಹುಡುಕಿ ಮತ್ತು ಡೌನ್‌ಲೋಡ್ ಮಾಡಿ.
CBSE ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸುವುದರ ಜೊತೆಗೆ, ವಿದ್ಯಾರ್ಥಿಗಳು ತಮ್ಮ CBSE 12 ನೇ ತರಗತಿಯ ಫಲಿತಾಂಶ 2025 ಅನ್ನು SMS ಮೂಲಕವೂ ಪಡೆಯಬಹುದು. ಇದನ್ನು ಮಾಡಲು, ನಿಮ್ಮ ಫೋನ್‌ನಲ್ಲಿ ಈ ಕೆಳಗಿನ ಸಂದೇಶವನ್ನು ಟೈಪ್ ಮಾಡಿ: CBSE12 (ರೋಲ್ ಸಂಖ್ಯೆ) (ಶಾಲಾ ಸಂಖ್ಯೆ) (ಕೇಂದ್ರ ಸಂಖ್ಯೆ). ನಂತರ ಅದನ್ನು 7738299899 ಗೆ ಕಳುಹಿಸಿ. ನಿಮ್ಮ ಫಲಿತಾಂಶವನ್ನು ಶೀಘ್ರದಲ್ಲೇ ಪಠ್ಯ ಸಂದೇಶದ ರೂಪದಲ್ಲಿ ನಿಮ್ಮ ಮೊಬೈಲ್ ಪೋನ್‌ಗೆ ಬರುತ್ತದೆ.
ಬೆಂಗಳೂರಿಗೆ ಎಷ್ಟನೇ ಸ್ಥಾನ?
ವಿಜಯವಾಡ 99.60
ತಿರುವನಂತಪುರ 99.32
ಚೆನ್ನೈ 97.39
ಬೆಂಗಳೂರು 95.95
ದೆಹಲಿ ಪಶ್ಚಿಮ 95.37
ದೆಹಲಿ ಪೂರ್ವ 95.06
ಚಂಡೀಗಢ 91.61
ಪಂಚಕುಲ 91.17
ಪುಣೆ 90.93
ಅಜ್ಮೀರ್ 90.40
ಭುವನೇಶ್ವರ 83.64
ಗುವಾಹಟಿ 83.62
ಡೆಹ್ರಾಡೂನ್ 83.45
ಪಾಟ್ನಾ 82.86
ಭೋಪಾಲ್ 82.46
ನೋಯ್ಡಾ 81.29
ಪ್ರಯಾಗ್ ರಾಜ್ 79.53
ಕಳೆದ ತಿಂಗಳು ಫೆಬ್ರವರಿ 15ರಿಂದ ಏಪ್ರಿಲ್ 4ರವರೆಗೆ CBSE 12ನೇ ತರಗತಿ ಪರೀಕ್ಷೆಗಳು ನಡೆದಿದ್ದವು. 2025ನೇ ಸಾಲಿನಲ್ಲಿ 16 ಲಕ್ಷದ 92 ಸಾವಿರದ 794 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 14 ಲಕ್ಷದ 96 ಸಾವಿರದ 307 ಮಕ್ಕಳು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.


Click it and Unblock the Notifications