ಓಲಾ ಮತ್ತು ಉಬರ್ಗೆ ಶಾಕ್! ಹೌದು,ಜನಪ್ರಿಯ ಕ್ಯಾಬ್ ಸೇವೆಗಳಾದ ಓಲಾ ಮತ್ತು ಉಬರ್ಗೆ ಸಂಕಷ್ಟ ಎದುರಾಗಿದೆ. ಇವೆರಡರ ಮೇಲೆ ಪ್ರಯಾಣಿಕರು ಆರೋಪ ಮಾಡಿರುವ ಹಿನ್ನಲೆಯಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಕ್ಯಾಬ್ ಅಗ್ರಿಗೇಟರ್ಗಳಾದ ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ. ಯಾವ ಆರೋಪದ ಮೇಲೆ ನೋಟಿಸ್ ನೀಡಲಾಗಿದೆ? ಯಾಕೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಕ್ಯಾಬ್ ಅಗ್ರಿಗೇಟರ್ಗಳಾದ ಓಲಾ ಮತ್ತು ಉಬರ್ಗಳು ಗ್ರಾಹಕರು ಕ್ಯಾಬ್ ಬುಕ್ ಮಾಡಿದ್ದಾಗ ಅವರು ಬಳಸುವ ಸ್ಮಾರ್ಟ್ ಫೋನ್ಗಳು ಯಾವ ಮಾಡೆಲ್ ಎಂದು ಆಧರಿಸಿ ಹೆಚ್ಚಿನ ಬೆಲೆಯನ್ನು ನಿಗದಿ ಮಾಡುತ್ತಿರುವ ಆರೋಪದ ಮೇಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ನೀಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅವರು ಎಕ್ಸ್ ನಲ್ಲಿ ಹಂಚಿಕೊಂಡಿರುವ ಮಾಹಿತಿ ಏನು?
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಗ್ರಾಹಕರು ಬಳಸುವ ಮೊಬೈಲ್ ಫೋನ್ಗಳ ಯಾವುದು (ಐಫೋನ್/ ಆಂಡ್ರಾಯ್ಡ್) ವಿವಿಧ ಮಾದರಿಗಳ ಆಧಾರದ ಮೇಲೆ ವಿಭಿನ್ನ ಪ್ರಯಾಣ ಬೆಲೆಯನ್ನು ವಸೂಲಿ ಮಾಡುತ್ತಿರುವ ವಿಷಯದ ಹಿಂದಿನ ಅವಲೋಕನ ಮಾಡಲಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಸಿಸಿಪಿಎ ಪ್ರಮುಖ ಕ್ಯಾಬ್ ಅಗ್ರಿಗೇಟರ್ಗಳಾದ ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಶುಲ್ಕ ಏರಿಕೆಯ ಆರೋಪ
ಓಲಾ ಮತ್ತು ಉಬರ್‌ನಲ್ಲಿ ಕ್ಯಾಬ್ ಬುಕ್ ಮಾಡಿದ್ದಾಗ ಪ್ರಯಾಣಿಕರು ಕ್ಯಾಬ್ ಬುಕ್ ಮಾಡಿದಾಗ ಬೇರೆ ಬೇರೆ ಸ್ಮಾರ್ಟ್ಫೋನ್ಗಳಲ್ಲಿ ವಿಭಿನ್ನ ಶುಲ್ಕ ವಿಧಿಸುತ್ತಿರುವ ಬಗ್ಗೆ ಹಲವಾರು ಗ್ರಾಹಕರು ಅನೇಕ ದೂರಗಳನ್ನು ನೀಡುತ್ತಿದ್ದಾರೆ. ಇನ್ನೂ ಕೆಲ ಮಾದರಿಯ ಫೋನ್‌ಗಳಲ್ಲಿ ಹೆಚ್ಚಿನ ಶುಲ್ಕ ತೋರಿಸಿದರೆ, ಇನ್ನು ಕೆಲ ಮಾದರಿಗಳಲ್ಲಿ ಕಡಿಮೆ ದರಗಳನ್ನು ತೋರಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪ ಮಾಡಿದ್ದಾರೆ.
ಸಿಸಿಪಿಎ ನೋಟಿಸ್‌ನಲ್ಲಿ ಏನಿದೆ?
ಗ್ರಾಹಕರ ಕುಂದುಕೊರತೆ ಪರಿಹರಿಸಲು ಮತ್ತು ಕ್ಯಾಬ್ ಅಗ್ರಿಗೇಟರ್ಗಳು ನ್ಯಾಯಯುತ ಶುಲ್ಕ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು ಸಿಸಿಪಿಎ ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ. ಕಂಪನಿಗಳು ಈಗ ಬೆಲೆ ನಿಗದಿಯ ಕಾರ್ಯವಿಧಾನ ಮತ್ತು ಈ ಶುಲ್ಕ ವ್ಯತ್ಯಾಸಗಳ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಸ್ವಷ್ಟವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಎಂದು ಮಾಹಿತಿಯನ್ನು ನೀಡಿದ್ದಾರೆ.
ವಾಟ್ಸಾಪ್ ಮೂಲಕ ಉಬರ್ ಕ್ಯಾಬ್ ಬುಕ್ ಮಾಡುವ ಸರಳ ವಿಧಾನ
ನೀವು ವಾಟ್ಸಾಪ್ ಮೂಲಕ ಎಲ್ಲಿ ಬೇಕಾದರೂ ಕ್ಯಾಬ್ ಬುಕ್ ಮಾಡಬಹುದು. ನೀವು ಇದಕ್ಕಾಗಿ ನಿಮ್ಮ ಫೋನಿನಲ್ಲಿ 7292000002 ನಂಬರ್ ಸೇವ್ ಮಾಡಬೇಕು. ಈ ನಂಬರ್ ಸೇವ್ ಮಾಡಿದ ಬಳಿಕ, ನಿಮ್ಮ ಫೋನಿನಲ್ಲಿ ವಾಟ್ಸಾಪ್ ಅನ್ನು ಓಪನ್ ಮಾಡಿ. ಮತ್ತು ರಿಫ್ರೆಶ್ ಮಾಡಿ. ಹೊಸದಾಗಿ ಸೇವ್ ಮಾಡಿದ ನಂಬರ್ ನಿಮಗೆ ಇಲ್ಲಿ ಕಾಣುತ್ತದೆ. ಇದರ ನಂತರ, ಚಾಟ್ ವಿಭಾಗವನ್ನು ತೆರೆಯಿರಿ ಮತ್ತು ಚಾಟ್‌ನಲ್ಲಿ ಹಾಯ್ ಎಂದು ಮೆಸೇಜ್ ಕಳುಹಿಸಿ.
ಆಗ ಭಾಷೆಯನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳುತ್ತದೆ. ನಿಮ್ಮ ಭಾಷೆಯನ್ನು ನೀವು ಹಿಂದಿ ಅಥವಾ ಇಂಗ್ಲಿಷ್ ಅನ್ನು ಆಯ್ಕೆ ಮಾಡಬಹುದು. ಇದರ ನಂತರ ನಿಮ್ಮ ಸ್ಥಳವನ್ನು ನಮೂದಿಸಿ. ಪಿಕಪ್ ಸ್ಥಳವನ್ನು ಆಯ್ಕೆಮಾಡಿ. ಇದರ ನಂತರ ನಿಮ್ಮ ಕ್ಯಾಬ್ ಅನ್ನು ಬುಕ್ ಮಾಡಲಾಗುತ್ತದೆ.
ನಿಮ್ಮ ವಾಟ್ಸಾಪ್‌ನಲ್ಲಿ ಚಾಲಕರ ವಿವರಗಳು ಬರುತ್ತವೆ. ಇದು ಶೇರ್ ಪಿನ್, ಕಾಂಟಾಕ್ಟ್ ನಂಬರ್ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ. ಚಾಲಕನಿಗೆ ಪಿನ್ ಹೇಳುವ ಮೂಲಕ ನಿಮ್ಮ ಪ್ರಯಾಣವನ್ನು ನೀವು ಪ್ರಾರಂಭಿಸಬಹುದು.
ಈ ವಿಧಾನದ ಮೂಲಕವೂ ಬುಕ್ ಮಾಡಬಹುದು!
ನೀವು ಹಾಯ್ ಎಂಬ ಮೆಸೇಜ್ ಕಳುಹಿಸಿದ ನಂತರ, ಯಾವುದೇ ಉತ್ತರವನ್ನು ಪಡೆಯದಿದ್ದರೆ ಚಿಂತಿಸಬೇಡಿ. ಈ ಸೇವೆಯು ವಿವಿಧ ಫೋನ್‌ಗಳಲ್ಲಿ ವಿಭಿನ್ನವಾಗಿ ಕೆಲಸ ಮಾಡುತ್ತದೆ. ನಿಮಗೆ ಲಾಗಿನ್ ಮಾಡುವ ಆಯ್ಕೆ ಇರುತ್ತದೆ. ನೀವು ಲಾಗಿನ್ ಅನ್ನು ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನಮೂದಿಸಿ. ನಿಮ್ಮ ನೋಂದಾಯಿತ ಸಂಖ್ಯೆಗೆ ಒಟಿಪಿ (OTP) ಕಳುಹಿಸಲಾಗುತ್ತದೆ. ಒಟಿಪಿ ಅನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಇದರ ನಂತರ ನೀವು ಹೊಸದಾಗಿ ಕ್ಯಾಬ್ ಬುಕ್ ಮಾಡಬಹುದು.


Click it and Unblock the Notifications