ಹರಿದ್ವಾರ್: ಇತ್ತೀಚೆಗೆ ಕೊರೊನಾವೈರಸ್‌ಗೆ ಮದ್ದು ಕಂಡು ಹಿಡಿಯುವುದು ದೊಡ್ಡ ವಾದ ವಿವಾದಗಳನ್ನು ಸೃಷ್ಟಿಸುತ್ತಿದೆ. ಇದಕ್ಕೆ ಮೊನ್ನೆ ಮೊನ್ನೆಯ ಪತಂಜಲಿಯ ಕೊರೊನಿಲ್ ಮಾತ್ರೆ ವಿವಾದವೊಂದು ತಾಜಾ ಉದಾಹರಣೆ.
ಕೊರೊನಿಲ್ ಮಾತ್ರೆಗಳನ್ನು ಕೊರೊನಾವೈರಸ್ ಗುಣಪಡಿಸಲು ಕಂಡು ಹಿಡಿದಿದ್ದೇವೆ ಎಂದು ಪತಂಜಲಿ ಹೇಳಿಕೊಂಡಿತ್ತು. ಆದರೆ ಇದಕ್ಕೆ ಉತ್ತರಾಖಂಡ ಸರ್ಕಾರ ಹಾಗೂ ಕೇಂದ್ರ ಆಯುಷ್ ಇಲಾಖೆ ಗರಂ ಆಗಿತ್ತು. ಅನುಮತಿ ಪಡೆಯದೇ ಔಷಧಿ ಕಂಡು ಹಿಡಿದಿರುವುದು ಸಮಪರ್ಕವಲ್ಲ ಎಂದು ನೋಟಿಸ್ ಕೊಟ್ಟಿತ್ತು.
ಈಗ ಸ್ವತಃ ಆಯುಷ್ ಇಲಾಖೆ ಪತಂಜಲಿಗೆ ಕೊರೊನಿಲ್ ಔಷಧಿ ಬಳಸಲು ಅನುಮತಿ ನೀಡಿದೆ. ಆದರೆ, ಷರತ್ತುಗಳನ್ನು ವಿಧಿಸಿದೆ.
ಯಾವುದೇ ನಿರ್ಬಂಧಗಳಿಲ್ಲ
ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದವು ಕೊರೋನಿಲ್ ಅನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧಗಳಿಲ್ಲ ಎಂದು ಆಯುಷ್ ಸಚಿವಾಲಯ ಹೇಳಿದೆ. ರೋಗ ನಿರೋಧಕ ಶಕ್ತಿ ವೃದ್ಧಿಗೆ ಔಷಧಿ ಎಂದು ಮಾರಾಟ ಮಾಡಬೇಕು. ಕೊರೊನಾ ಗುಣಪಡಿಸಲು ಅಲ್ಲ ಎಂದು ಷರತ್ತು ಹೇಳಿದೆ. ಅಲ್ಲದೇ ಕೊರೊನಾ ಔಷಧಿ ಎಂದು ಪ್ರಚಾರ ಮಾಡುವಂತಿಲ್ಲ ಎಂದು ತಾಕೀತು ಮಾಡಿದೆ.
ದೇಶದ ಎಲ್ಲೆಡೆ ಕೊರೊನಿಲ್ ಲಭ್ಯ
ಹರಿದ್ವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಯೋಗ ಗುರು ಪತಂಜಲಿಯ ಬಾಬಾ ರಾಮದೇವ್ ಅವರು, ಈಗ ಕೊರೊನಿಲ್ ಔಷಧಿ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಲು ನಾನು ಬಯಸುತ್ತೇನೆ ಮತ್ತು ಅವು ಇಂದಿನಿಂದ ದೇಶದ ಎಲ್ಲೆಡೆ ಕಿಟ್‌ನಲ್ಲಿ ಲಭ್ಯವಿರುತ್ತವೆ" ಎಂದು ಹೇಳಿದ್ದಾರೆ.
ಒಂದು ಮಾತ್ರೆಗೆ 545 ರುಪಾಯಿ
ಕೊರೊನಿಲ್ ಆಯುರ್ವೇದ ಮಾತ್ರೆಗಳ ಕಿಟ್‌ನ್ನು ಪತಂಜಲಿ ಕೋವಿಡ್ 19 ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರೂಪಿಸಿದೆ. ಈ ಕಿಟ್‌ನಲ್ಲಿ ಹತ್ತು ಮಾತ್ರೆಗಳು ಇರುತ್ತವೆ. ಒಂದು ಮಾತ್ರೆಗೆ 545 ರುಪಾಯಿ. ಈ ಮಾತ್ರೆಗಳು ಕೋವಿಡ್ 19 ರೋಗಿಗಳನ್ನು ಕಾಪಾಡಲು ಸಮರ್ಥವಾಗಿದೆ ಎಂದು ಬಾಬಾ ರಾಮದೇವ್ ಅವರು ಹೇಳಿದ್ದಾರೆ.
ಇಲಿಗಳ ಮೇಲೆ ಸಂಶೋಧನೆ
ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಶೋಧಕರು ಹಾಗೂ ಜೈಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಜಂಟಿಯಾಗಿ Coronil ಔಷಧಿಯನ್ನು ಸಿದ್ಧಪಡಿಸಿದ್ದಾರೆ. ಔಷಧಿಯನ್ನು ತಯಾರಿಸುವ ಕೆಲಸ ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಜಂಟಿಯಾಗಿ ನಡೆಸಲಿವೆ ಎನ್ನಲಾಗಿದೆ. ಪತಂಜಲಿ ಸಂಶೋಧಕರು 6 ತಿಂಗಳು ಇಲಿಗಳ ಮೇಲೆ ಸಂಶೋಧನೆ ಕೈಗೊಂಡು ಕೊರೊನಿಲ್ ತಯಾರಿಸಿದ್ದಾರೆ.


Click it and Unblock the Notifications