ಭಾರತೀಯ ಷೇರು ಮಾರುಕಟ್ಟೆಯ ವಿನಿಮಯ ಕೇಂದ್ರಗಳಾದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ)ಗಳು ರಜೆ ದಿನದಂದು ಕೇಂದ್ರ ಬಜೆಟ್ ಇರುವ ಕಾರಣ ಷೇರುಪೇಟೆ ತರೆದಿರುತೋ? ಇಲ್ವಾ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಈ ಬಾರಿ ಕೇಂದ್ರ ಬಜೆಟ್ ಫೆಬ್ರವರಿ 1, 2025 ಷೇರು ಮಾರುಕಟ್ಟೆ ರಜೆದಂದು ಬಂದಿದೆ. ಅದರೂ ಕೂಡ ಮಾರುಕಟ್ಟೆ ವ್ಯಾಪಾರಕ್ಕೆ ತರೆದಿರುತ್ತದೆ. ಫೆಬ್ರವರಿ 1, 2025ರಂದು ಷೇರು ಮಾರುಕಟ್ಟೆ ಲೈವ್ ಸೆಷನ್ ನಡೆಸಲು ನಿರ್ಧರಿಸಲಾಗಿದೆ' ಎಂದು ಎಕ್ಸ್‌ಚೇಜ್ ಫೈಲಿಂಗ್‌ನಲ್ಲಿ ಮಾಹಿತಿ ತಿಳಿಸಿದೆ.

ಷೇರುಮಾರುಕಟ್ಟೆಯ ಎರಡೂ ವಿನಿಮಯ ಕೇಂದ್ರಗಳು(ಬಿಎಸ್ಇ & ಎನ್‌ಎಸ್‌ಇ) ಎಂದಿನಂತೆ ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ಸಾಮಾನ್ಯ ವ್ಯಾಪಾರಕ್ಕಾಗಿ ತೆರೆದಿರುತ್ತವೆ. ಫೆಬ್ರವರಿ 1 ರಂದು ಬೆಳಗಿನ ಅಧಿವೇಶನದಲ್ಲಿ ಸರಕು ಉತ್ಪನ್ನಗಳ ವಿಭಾಗವು ವಹಿವಾಟಿಗೆ ತೆರೆದಿರುತ್ತದೆ.
ಭಾರತದಲ್ಲಿನ ಷೇರು ವಿನಿಮಯ ಕೇಂದ್ರಗಳು ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರದಂದು ಮುಚ್ಚಲ್ಪಡುತ್ತವೆ.ವಿಶೇಷ ಸಂದರ್ಭಗಳಲ್ಲಿ, ಈ ದಿನಗಳಲ್ಲಿ ವಿಶೇಷ ವ್ಯಾಪಾರ ಅವಧಿಗಳಲ್ಲಿ ಮಾತ್ರ ತರೆದಿರುತ್ತದೆ.
ಈ ಹಿಂದೆ ಎರಡು ಬಾರಿ ಬಜೆಟ್ ದಿನ ರಜೆ ಇದ್ರೂ ಷೇರುಪೇಟೆ ತರೆದಿತ್ತು.
ಇದಕ್ಕೂ ಮೊದಲು, 1 ಫೆಬ್ರವರಿ 2020 ರಂದು, ಬಜೆಟ್ ದಿನ ಶನಿವಾರ ಷೇರು ಮಾರುಕಟ್ಟೆ ತೆರೆದಿತ್ತು. ಅದೇ ಸಮಯದಲ್ಲಿ, 28 ಫೆಬ್ರವರಿ 2015 ರಂದು, ಶನಿವಾರದಂದು ಮಾರುಕಟ್ಟೆ ತೆರೆದಿತ್ತು ಮತ್ತು ಅದೇ ದಿನ ಬಜೆಟ್ ಅನ್ನು ಸಹ ಮಂಡಿಸಲಾಯಿತು.
ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆ.01) ತಮ್ಮ ಎಂಟನೇ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಅಲ್ಪ ಕುಸಿತದೊಂದಿಗೆ ಮುಚ್ಚಿದ ಷೇರು ಮಾರುಕಟ್ಟೆ
ವಾರದ ಎರಡನೇ ವಹಿವಾಟಿನ ದಿನವಾದ ಇಂದು ಡಿಸೆಂಬರ್ 24ರಂದು ಮಾರುಕಟ್ಟೆ ಕುಸಿತದೊಂದಿಗೆ ಮುಚ್ಚಿದೆ. ಬಿಎಸ್‌ಇ ಸೆನ್ಸೆಕ್ಸ್ 87.49 ಪಾಯಿಂಟ್ಸ್ ಅಥವಾ ಶೇ.0.11 ಕುಸಿದು 78452.68 ಮಾರ್ಕ್‌ನಲ್ಲಿ ಮುಚ್ಚಿದೆ.


Click it and Unblock the Notifications