ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ

ಪ್ರಸಕ್ತ ಹಣಕಾಸು ವರ್ಷದಲ್ಲಿ ಪೆಟ್ರೋಲ್- ಡೀಸೆಲ್ ಮೇಲೆ ಹಾಕಿರುವ ಅಬಕಾರಿ ಸುಂಕ 48% ಆಗಿದೆ. 2020ರ ಏಪ್ರಿಲ್ ನಿಂದ ನವೆಂಬರ್ ತನಕ ಅಬಕಾರಿ ಸುಂಕ ಎಂದು 1,96,342 ಕೋಟಿ ರುಪಾಯಿ ಸಂಗ್ರಹ ಆಗಿದೆ. 2019ನೇ ಇಸವಿಯ ಇದೇ ಅವಧಿಯಲ್ಲಿ 1,32,899 ಕೋಟಿ ರುಪಾಯಿ ಸಂಗ್ರಹ ಆಗಿತ್ತು ಎಂದು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ದತ್ತಾಂಶದಿಂದ ತಿಳಿದುಬಂದಿದೆ.

ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಈ ಅವಧಿಯಲ್ಲಿ 10 ಮಿಲಿಯನ್ ಟನ್ ಡೀಸೆಲ್ ಕಡಿಮೆ ಬಳಕೆ ಮಾಡಿದ್ದರೂ ಇಷ್ಟು ದೊಡ್ಡ ಮೊತ್ತದ ಅಬಕಾರಿ ಸುಂಕ ಸಂಗ್ರಹವಾಗಿದೆ. 2020ರ ಏಪ್ರಿಲ್ ನಿಂದ ನವೆಂಬರ್ ಮಧ್ಯೆ 44.9 ಮಿಲಿಯನ್ ಟನ್ ಡೀಸೆಲ್ ಮಾರಾಟ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 55.4 ಮಿಲಿಯನ್ ಟನ್ ಮಾರಾಟ ಆಗಿತ್ತು.

ಪೆಟ್ರೋಲ್ ಗೆ ರು. 32.98, ಡೀಸೆಲ್ ಗೆ ರು 31.83 ಸುಂಕ

ಪೆಟ್ರೋಲ್ ಗೆ ರು. 32.98, ಡೀಸೆಲ್ ಗೆ ರು 31.83 ಸುಂಕ

ಇನ್ನು ಪೆಟ್ರೋಲ್ ಬಳಕೆ 2020ರ ಏಪ್ರಿಲ್ ನಿಂದ ನವೆಂಬರ್ ಮಧ್ಯೆ 17.4 ಮಿಲಿಯನ್ ಟನ್ ಆಗಿದ್ದರೆ, 2019ರ ಏಪ್ರಿಲ್ ನಿಂದ ನವೆಂಬರ್ ನಲ್ಲಿ 20.4 ಟನ್ ಬಳಕೆ ಆಗಿತ್ತು. 2017ರಲ್ಲಿ ಜಿಎಸ್ ಟಿ ಪರಿಚಯಿಸಿದ ಮೇಲೆ ಬಹುತೇಕ ಉತ್ಪನ್ನಗಳಿಗೆ ಅದೇ ಅನ್ವಯ ಆಗುತ್ತದೆ. ತೈಲ ಮತ್ತು ನೈಸರ್ಗಿಕ ಅನಿಲವನ್ನು ಜಿಎಸ್ ಟಿಯಿಂದ ಹೊರಗಿಡಲಾಗಿದೆ. ಕೇಂದ್ರದಿಂದ ಅಬಕಾರಿ ಸುಂಕ ಸಂಗ್ರಹಿಸಿದರೆ, ರಾಜ್ಯದಿಂದ VAT ಸಂಗ್ರಹಿಸಲಾಗುತ್ತದೆ. ಕಳೆದ ವರ್ಷ ಮಾರ್ಚ್ ಮತ್ತು ಮೇ ತಿಂಗಳ ಮಧ್ಯೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ದಾಖಲೆಯ ತೆರಿಗೆ ಹಾಕಿದ್ದರ ಹಿನ್ನೆಲೆಯಲ್ಲಿ ಅಬಕಾರಿ ಸುಂಕ ಏರಿಕೆ ಆಗಿದೆ ಎಂದು ಕೈಗಾರಿಕೆ ಮೂಲಗಳು ತಿಳಿಸಿವೆ. ಕಚ್ಚಾ ತೈಲ ದರದ ಬೆಲೆಯು ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದಾಗ ಸರ್ಕಾರವು ಪೆಟ್ರೋಲ್ ಮೇಲೆ ಲೀಟರ್ ಗೆ ರು. 13 ಹಾಗೂ ಡೀಸೆಲ್ ಮೇಲೆ ಲೀಟರ್ ಗೆ ರು. 16 ಅಬಕಾರಿ ಸುಂಕವನ್ನು ಎರಡು ಕಂತಿನಲ್ಲಿ ಏರಿಸಿತ್ತು. ಇದರೊಂದಿಗೆ ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಲೀಟರ್ ಗೆ ರು. 32.98, ಡೀಸೆಲ್ ಗೆ ರು 31.83 ಇದೆ.

2014- 2016ರ ಮಧ್ಯೆ ಒಂಬತ್ತು ಸಲ ಅಬಕಾರಿ ಸುಂಕ ಏರಿಕೆ

2014- 2016ರ ಮಧ್ಯೆ ಒಂಬತ್ತು ಸಲ ಅಬಕಾರಿ ಸುಂಕ ಏರಿಕೆ

2019- 20 (2019 ಏಪ್ರಿಲ್ ನಿಂದ 2020 ಮಾರ್ಚ್ ತನಕ) ಸಾಲಿನಲ್ಲಿ ಆಗಿರುವ ಅಬಕಾರಿ ಸುಂಕದ ಒಟ್ಟು ಸಂಗ್ರಹ ರು. 2,39,599 ಕೋಟಿ. ಪೆಟ್ರೋಲ್ ದರದ ಪೈಕಿ ಕೇಂದ್ರದ ಅಬಕಾರಿ ಸುಂಕ 39% ಹಾಗೂ ಡೀಸೆಲ್ ಗೆ 42.5% ಆಗುತ್ತದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ VAT (ವ್ಯಾಲ್ಯೂ ಆಡೆಡ್ ಟ್ಯಾಕ್ಸ್) ಸೇರಿ, ಪೆಟ್ರೋಲ್- ಡೀಸೆಲ್ ಚಿಲ್ಲರೆ ದರದ ಮೂರನೇ ಎರಡು ಭಾಗದಷ್ಟಾಗುತ್ತದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಬಂದಾಗ ಪೆಟ್ರೋಲ್ ಮೇಲೆ ಲೀಟರ್ ಗೆ ಅಬಕಾರಿ ಸುಂಕ ರು. 9.48, ಡೀಸೆಲ್ ಮೇಲೆ ಲೀಟರ್ ಗೆ ರು. 3.56 ಇತ್ತು. 2014ರ ನವೆಂಬರ್ ಮತ್ತು 2016ರ ಜನವರಿ ಮಧ್ಯೆ ಒಂಬತ್ತು ಸಲ ಅಬಕಾರಿ ಸುಂಕವನ್ನು ಏರಿಸಿತು. ಆ ಮೂಲಕ ಜಾಗತಿಕ ತೈಲ ಬೆಲೆ ಇಳಿಕೆ ಲಾಭವನ್ನು ಪಡೆಯಿತು. ಆ ಹದಿನೈದು ತಿಂಗಳಲ್ಲಿ ಪೆಟ್ರೋಲ್ ದರದ ಮೇಲೆ ಸುಂಕ ಲೀಟರ್ ಗೆ ರು. 11.77, ಡೀಸೆಲ್ ಪ್ರತಿ ಲೀಟರ್ ಗೆ ರು. 13.47 ಬಿತ್ತು. ಆ ಮೂಲಕ ಸರ್ಕಾರಕ್ಕೆ 2016- 17ರಲ್ಲಿ ಅಬಕಾರಿ ಸುಂಕದ ಮೂಲಕ 2,42,000 ಕೋಟಿ ರುಪಾಯಿ ಆದಾಯ ಬಂತು. ಆ ಹಿಂದೆ 2014- 15ರಲ್ಲಿ 99,000 ಕೋಟಿ ರುಪಾಯಿ ಬಂದಿತ್ತು.

ಆದಾಯದ ಸಂಗ್ರಹದ ಗುರಿಯಲ್ಲಿ ಇಳಿಕೆ

ಆದಾಯದ ಸಂಗ್ರಹದ ಗುರಿಯಲ್ಲಿ ಇಳಿಕೆ

2017ರ ಅಕ್ಟೋಬರ್ ನಲ್ಲಿ ಸರ್ಕಾರವು ರು. 2 ಅಬಕಾರಿ ಸುಂಕ ಮತ್ತು ನಂತರದ ವರ್ಷದಲ್ಲಿ 1.50 ರುಪಾಯಿ ಇಳಿಕೆ ಮಾಡಿತು. ಆದರೆ 2019ರ ಜುಲೈನಲ್ಲಿ ಲೀಟರ್ ಗೆ ರು. 2 ಹೆಚ್ಚಳ ಮಾಡಿತು. ಮಾರ್ಚ್ 2020ರಲ್ಲಿ ಪೆಟ್ರೋಲ್- ಡೀಸೆಲ್ ಮೇಲೆ ತಲಾ 3 ರುಪಾಯಿ ಹೆಚ್ಚಳ ಮಾಡಿತು. ಅದೇ ವರ್ಷದ ಮೇ ತಿಂಗಳಲ್ಲಿ ಪೆಟ್ರೋಲ್ ಮೇಲೆ ಲೀಟರ್ ಗೆ ರು. 10 ಮತ್ತು ಡೀಸೆಲ್ ಗೆ ರು. 13 ಅಬಕಾರಿ ಸುಂಕ ಹಾಕಲಾಯಿತು. ಸಿಜಿಎ ಪ್ರಕಾರ, ಏಪ್ರಿಲ್- ನವೆಂಬರ್ ಅವಧಿಯಲ್ಲಿ ಒಟ್ಟಾರೆ ತೆರಿಗೆ ಆದಾಯ ಸರ್ಕಾರಕ್ಕೆ 45.5 ಪರ್ಸೆಂಟ್ ಇಳಿಕೆ ಕಂಡು, ರು. 6,88,430 ಕೋಟಿ ತಲುಪಿದೆ. 2020- 21ರ ಹಣಕಾಸು ವರ್ಷಕ್ಕೆ (2020ರ ಮಾರ್ಚ್ ನಿಂದ 2021ರ ಏಪ್ರಿಲ್ ತನಕ) 16.35 ಲಕ್ಷ ಕೋಟಿ ರುಪಾಯಿ ತೆರಿಗೆ ಆದಾಯ ಬರುವ ಬಗ್ಗೆ ನಿರೀಕ್ಷೆ ಇತ್ತು. ಕಾರ್ಪೊರೇಟ್ ತೆರಿಗೆ ಸಂಗ್ರಹ 35% ಇಳಿಕೆ ಕಂಡು, ರು. 1,85,699 ಕೋಟಿ ತಲುಪಿದೆ. ಇನ್ನು ಆದಾಯ ತೆರಿಗೆ ಸಂಗ್ರಹ 12% ಕುಸಿದು, ರು. 2,35,038 ಕೋಟಿ ಮುಟ್ಟಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+