For Quick Alerts
ALLOW NOTIFICATIONS  
For Daily Alerts

ಪೆನ್ಷನ್ 20 ಪರ್ಸೆಂಟ್ ಕಡಿತದ ಬಗ್ಗೆ ಕೇಂದ್ರ ಹೇಳಿದ್ದೇನು?

|

ಕೊರೊನಾ ಲಾಕ್ ಡೌನ್ ವೇಳೆ ಹಣಕಾಸು ವ್ಯವಸ್ಥೆಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಶೇಕಡಾ 20ರಷ್ಟು ಪಿಂಚಣಿ ಕಡಿತ ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದ್ದು, ಅಂಥ ಎಲ್ಲ ಸುದ್ದಿ ಸುಳ್ಳು ಎಂದು ತಿಳಿಸಿದೆ.

 

"ಕೇಂದ್ರ ಸರ್ಕಾರವು ಶೇಕಡಾ 20ರಷ್ಟು ಪಿಂಚಣಿ ಕಡಿತ ಮಾಡಲು ಯೋಜನೆ ರೂಪಿಸಿದೆ ಎಂದು ವರದಿ ಆಗಿದೆ. ಈ ಸುದ್ದಿ ಸುಳ್ಳು. ಪಿಂಚಣಿ ವಿತರಣೆಯಲ್ಲಿ ಯಾವುದೇ ಕಡಿತ ಇರುವುದಿಲ್ಲ. ಹಣಕಾಸು ನಿರ್ವಹಣೆಗೆ ಸರ್ಕಾರ ನೀಡಿರುವ ಸೂಚನೆ ಪ್ರಕಾರ, ವೇತನ ಹಾಗೂ ಪಿಂಚಣಿ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ" ಎಂದು ಸಚಿವಾಲಯದ ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟೀವಿ ಚಾನೆಲ್ ಗಳಲ್ಲಿ ಸರ್ಕಾರದ ಸುತೋಲೆ ಎಂದು ಹರಿದಾಡುತ್ತಿದ್ದು, ಅದರ ಪ್ರಕಾರ ಪಿಂಚಣಿ ವಿತರಣೆಯಲ್ಲಿ ಶೇಕಡಾ 20ರಷ್ಟು ಕಡಿತ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇದು ನಿಜವೇ? ಎಂಬ ಪ್ರಶ್ನೆಯನ್ನು ಸಾಮಾಜಿಕ ಮಾಧ್ಯಮ ಬಳಸುವವರೊಬ್ಬರು ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ.

ಪೆನ್ಷನ್ 20 ಪರ್ಸೆಂಟ್ ಕಡಿತದ ಬಗ್ಗೆ ಕೇಂದ್ರ ಹೇಳಿದ್ದೇನು?

ಹಿರಿಯ ನಾಗರಿಕರು, ವಿಶಿಷ್ಟ ಚೇತನರು, ವಿಧವೆಯರಿಗೆ ಬರುತ್ತಿರುವ ಕೇಂದ್ರ ಸರ್ಕಾರ ಪಿಂಚಣಿಯನ್ನು ಮೂರು ತಿಂಗಳ ಮುಂಗಡ ಪಡೆಯಬಹುದು ಎಂದು ಏಪ್ರಿಲ್ ಮೊದಲನೇ ವಾರದಲ್ಲೇ ತಿಳಿಸಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ನ್ಯಾಷನಲ್ ಸೋಷಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಂ ಅಡಿಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು.

English summary

Central Government Clarification About 20 Percent Cut Of Pension Rumors

Ministry of finance clarifies about 20 percent cut of pension rumors which are circulating in social media and tv channels.
Story first published: Sunday, April 19, 2020, 11:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X