ನಾವೆಲ್ಲರೂ ಮನೆಯಲ್ಲಿ ಬಳಸಿದ ಪತ್ರಿಕೆಗಳು ಅಥವಾ ಇತರ ಕಾಗದಗಳನ್ನು ಗುಜರಿಗೆ ಮಾರಾಟ ಮಾಡಿದಾಗ ಬಿಡಿಗಾಸು ಪಡೆಯುತ್ತೇವೆ. ಇದನ್ನು ಮಾರಾಟ ಮಾಡಿದಾಗ ನಮಗೇನು ಅಧಿಕ ಲಾಭ ಸಿಗುವುದಿಲ್ಲ. ಆದರೆ ನಮ್ಮ ದೇಶದ ಕೇಂದ್ರ ಸರ್ಕಾರವು ಪ್ರತಿದಿನ ಅಪಾರ ಪ್ರಮಾಣದ ಕಾಗದವನ್ನು ಬಳಸುತ್ತದೆ. ಸಚಿವಾಲಯಗಳು, ಕಚೇರಿಗಳು ಹೀಗೆ ಅನೇಕ ಇಲಾಖೆಗಳಿಗೆ ಕಾಗದಗಳು ಬೇಕಾಗಿರುತ್ತದೆ. ಹೀಗಾಗಿ ಸರ್ಕಾರ ಬಳಸಿದ ಕಾಗದವನ್ನು ಮಾರಾಟ ಮಾಡಿದಾಗ ಎಷ್ಟು ಹಣ ಸಂಪಾದಿಸಬಹುದು ಎಂದು ಯೋಚಿಸಿದ್ದೀರಾ? ಕೋಟಿ ಕೋಟಿ ರೂಪಾಯಿ! ಹೌದು ಆಶ್ಚರ್ಯವಾದರೂ ಇದು ಸತ್ಯ.
ನಮ್ಮ ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ವಿವಿಧ ಸರ್ಕಾರಿ ಕಚೇರಿಗಳ ಹಳೆಯ ಕಾಗದ,ಸ್ಕ್ರ್ಯಾಪ್‌ಗಳನ್ನು ಮಾರಾಟ ಮಾಡುವ ಮೂಲಕ ₹2,364 ಕೋಟಿ ರೂಪಾಯಿ ಗಳಿಸಿದೆ. ಈ ಬಗ್ಗೆ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು "2021 ರಿಂದ ವಿಶೇಷ ಅಭಿಯಾನ 4.0 ಅಡಿಯಲ್ಲಿ ಸರ್ಕಾರವು ₹ 2,364 ಕೋಟಿ ಆದಾಯವನ್ನು ಗಳಿಸಿದೆ" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ .

"ಈ ಅಭಿಯಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದಿಂದ ಪ್ರೇರಿತವಾಗಿದೆ. ಈ ವಿಶೇಷ ಅಭಿಯಾನ 4.0 ಭಾರತದ ಈ ರೀತಿಯ ಅತಿ ದೊಡ್ಡ ಅಭಿಯಾನವಾಗಿದೆ, ಕೇವಲ ಸ್ಕ್ರ್ಯಾಪ್ ಅನ್ನು ವಿಲೇವಾರಿ ಮಾಡುವ ಮೂಲಕ ಬೊಕ್ಕಸಕ್ಕೆ ₹ 2,364 ಕೋಟಿ (2021 ರಿಂದ) ಸೇರಿದಂತೆ ಗಣನೀಯ ಫಲಿತಾಂಶಗಳನ್ನು ಸಾಧಿಸುತ್ತದೆ" ಎಂದು ಕೇಂದ್ರ ಸಚಿವರು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರಯತ್ನವನ್ನು ಶ್ಲಾಘಿಸಿ ಜಿತೇಂದ್ರ ಸಿಂಗ್ ಅವರ X ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು,"ಶ್ಲಾಘನೀಯ! ಅತ್ಯುತ್ತಮ ನಿರ್ವಹಣೆ ಮತ್ತು ಮುಂಜಾಗ್ರತಾ ಕ್ರಮಗಳ ಮೇಲೆ ಕೇಂದ್ರೀಕರಿಸುವ ಮೂಲಕ ಈ ಪ್ರಯತ್ನವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಿದೆ. ಇದು ಸಾಮೂಹಿಕ ಪ್ರಯತ್ನಗಳ ಮೂಲಕ ಹೇಗೆ ಸುಸ್ಥಿರ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಸ್ವಚ್ಛ ಮತ್ತು ಆರ್ಥಿಕ ವಿವೇಕವನ್ನು ಉತ್ತೇಜಿಸುತ್ತದೆ " ಎಂದು ಹೇಳಿದ್ದಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ ಹೇಳಿಕೆಯ ಪ್ರಕಾರ, ಈ ವಿಶೇಷ ಅಭಿಯಾನ 4.0 ಕಾರ್ಯಕ್ರಮವು ಸರ್ಕಾರಿ ಕಚೇರಿಗಳಲ್ಲಿನ ಬಾಕಿ ಸ್ಕ್ರ್ಯಾಪ್ ಗಳನ್ನು ಕಡಿಮೆ ಮಾಡಲು ಸಂಸ್ಥೆಯನ್ನು ಸ್ವಚ್ಛಗೊಳಿಸುವ ದೃಷ್ಟಿಯಿಂದ ಭಾರತದಲ್ಲಿ ಇದೇ ಮೊದಲ ಮತ್ತು ಅತಿದೊಡ್ಡ ಪ್ರಯತ್ನವಾಗಿದೆ. ಅಕ್ಟೋಬರ್ 2 ರಿಂದ ಅಕ್ಟೋಬರ್ 31, 2024 ರವರೆಗೆ, ಅಭಿಯಾನವು ₹ 650 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸಿದೆ. ಇದಲ್ಲದೇ ವರ್ಷ ಕಳೆದಂತೆ ಅಭಿಯಾನದ ವ್ಯಾಪ್ತಿಯು ಗಣನೀಯವಾಗಿ ಹೆಚ್ಚಾಗಿದೆ. 2023 ರಲ್ಲಿ 2.59 ಲಕ್ಷ ಸ್ಥಳಗಳನ್ನು ಒಳಗೊಂಡಿದ್ದ ಈ ಅಭಿಯಾನವು 2024 ರಲ್ಲಿ 5.97 ಲಕ್ಷಕ್ಕೂ ಹೆಚ್ಚು ಸ್ಥಳಗಳಿಗೆ ವಿಸ್ತರಿಸಿದೆ.
ನವೆಂಬರ್ 7 ರಂದು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ( ಡಿಪಿಐಐಟಿ ) ಬಿಡುಗಡೆ ಮಾಡಿದ ಪ್ರಕಾರ, ಸಿಬ್ಬಂದಿಗೆ ಸುಧಾರಿತ ಕೆಲಸದ ಅನುಭವವನ್ನು ಖಚಿತಪಡಿಸಿಕೊಳ್ಳಲು ಕಚೇರಿಗಳಲ್ಲಿನ ಕೆಲಸದ ವಾತಾವರಣದ ಒಟ್ಟಾರೆ ಸುಧಾರಣೆಯನ್ನು ಒದಗಿಸುವುದರ ಮೇಲೆ ಅಭಿಯಾನವು ಗಮನಹರಿಸಿದೆ. ಜೊತೆಗೆ ದಾಖಲೆಗಳ ಪರಿಶೀಲನೆ ಮತ್ತು ನಿರ್ವಹಣೆಯ ಭಾಗವಾಗಿ, ಒಟ್ಟು 58,545 ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅನಗತ್ಯ ದಾಖಲೆಗಳನ್ನು ತೆಗೆದುಹಾಕುವ ಮೂಲಕ 15,816 ದಾಖಲೆಗಳನ್ನು ಗುಜರಿಗೆ ಹಾಕಲಾಗಿದೆ. ಇದರಿಂದ 15,847 ಚದರ ಅಡಿ ಜಾಗ ಮುಕ್ತವಾಗಿದ್ದು, ಸ್ಕ್ರ್ಯಾಪ್ ಮಾರಾಟದಿಂದ ₹16,39,452 ಆದಾಯವನ್ನು ಗಳಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (DPIIT) ಈ ಅಭಿಯಾನವನ್ನು ಮುನ್ನಡೆಸುತ್ತಿದೆ. ಈ ಇಲಾಖೆಯು ಭಾರತದಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ನೀತಿಗಳನ್ನು ರೂಪಿಸುವ ಮತ್ತು ಅವುಗಳನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಹೊಂದಿದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Eid ul Fitr 2026: ಭಾರತದಲ್ಲಿ ಯಾವಾಗ ಚಂದ್ರನ ದರ್ಶನ? ರಂಜಾನ್ ಹಬ್ಬ ಯಾವಾಗ?

India Aviation Rules: ವಿಮಾನ ಪ್ರಯಾಣದಲ್ಲಿ ದೊಡ್ಡ ಬದಲಾವಣೆ; 60 ಶೇಕಡಾ ಆಸನಗಳು ಉಚಿತ

Gold-Silver Rate Live Updates: ಇಂದು ಚಿನ್ನ, ಬೆಳ್ಳಿ ದರ ಇಳಿಕೆಯೋ, ಏರಿಕೆಯೋ? ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

Silver Price Today: ಪಾತಾಳಕ್ಕಿಳಿದ ಬೆಳ್ಳಿ ದರ; ಬರೋಬ್ಬರಿ 5000 ರೂ. ಇಳಿಕೆ

LPG-Milk: ಎಲ್ಪಿಜಿ ಪೂರೈಕೆ ಕೊರತೆ; ಹಾಲು ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

IndiGo Price Hike: ವಿಮಾನ ಪ್ರಯಾಣಿಕರಿಗೆ ಶಾಕ್! ಇಂಡಿಗೋ ಪ್ರಯಾಣ ದರ ಮತ್ತಷ್ಟು ಹೆಚ್ಚಳ

PAN Card Rules: ಪ್ಯಾನ್ ಕಾರ್ಡ್ ಇಲ್ಲದವರೇ ಇಲ್ಲಿ ಗಮನಿಸಿ; ನಿಯಮ ಸಂಪೂರ್ಣ ಚೇಂಜ್

FASTag Annual Pass: ಫಾಸ್ಟ್ಯಾಗ್ ಬಳಕೆದಾರರಿಗೆ ಶಾಕ್; ವಾರ್ಷಿಕ ಪಾಸ್ ದರ ಹೆಚ್ಚಳ!

Fixed Deposits vs NSC: ತೆರಿಗೆ ಉಳಿತಾಯಕ್ಕಾಗಿ ಎಫ್ಡಿ vs ಎನ್ಎಸ್ಸಿ; ಯಾವುದು ಬೆಸ್ಟ್?



Click it and Unblock the Notifications