For Quick Alerts
ALLOW NOTIFICATIONS  
For Daily Alerts

ಕೇಂದ್ರದ ಆರ್ಥಿಕ ಪ್ಯಾಕೇಜ್ ನಲ್ಲಿ ಹುಳುಕಿದೆ ಎಂದ ನೊಬೆಲ್ ಪುರಸ್ಕೃತ

|

ಭಾರತದಲ್ಲಿ ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್ ಲೋಪಗಳ ಬಗ್ಗೆ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮಾತನಾಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಸಮಾಜದ ಕೆಳಸ್ತರದಲ್ಲಿ ಇರುವ ಜನರಿಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಅಭಿಜಿತ್ ಬ್ಯಾನರ್ಜಿ ಹೇಳಿರುವ ಸರ್ಕಾರದ ಲೋಪಗಳೇನು ಎಂಬ ಅಂಶ ಇಲ್ಲಿದೆ:

 

* ಕೆಲವು ವಾರಗಳಲ್ಲಿ ಈ ಲಾಕ್ ಡೌನ್ ಕೆಲವು ವಾರಗಳಲ್ಲಿ ಕೊನೆಯಾಗುತ್ತದೆ ಎಂದು ಈ ಪ್ಯಾಕೇಜ್ ನೀಡಲಾಗಿದೆ. ಭಾರತದಲ್ಲಿ ಅತಿ ಬಡವರಲ್ಲಿ ಬಡವರಿಗೂ 500 ರುಪಾಯಿ ಏನೇನೂ ಅಲ್ಲ.

 

* ಕೆಲವು ವಾರಗಳ ನಂತರವೂ ಕೊರೊನಾ ಹತೋಟಿಗೆ ಬಾರದೆ, ಇನ್ನಷ್ಟು ಸಮಯ ಲಾಕ್ ಡೌನ್ ಮುಂದುವರಿದರೆ ದೊಡ್ಡ ಮಟ್ಟದ ಪ್ಯಾಕೇಜ್ ಅಗತ್ಯವಿದೆ.

ಕೇಂದ್ರದ ಆರ್ಥಿಕ ಪ್ಯಾಕೇಜ್ ನಲ್ಲಿ ಹುಳುಕಿದೆ ಎಂದ ನೊಬೆಲ್ ಪುರಸ್ಕೃತ

* ಸರ್ಕಾರವು ಲಾಕ್ ಡೌನ್ ಬಗ್ಗೆ ಎರಡೆರಡು ಬಗೆಯ ಸೂಚನೆ ನೀಡಬಾರದು. ಇದರಿಂದ ಗೊಂದಲ ಆಗುತ್ತದೆ.

* ಮಳಿಗೆಗಳನ್ನು ತೆಗೆದಿರಬಹುದು, ಆದರೆ ಜನರು ಹೋಗುವಂತಿಲ್ಲ. ಪೊಲೀಸರೂ ಗೊಂದಲದಲ್ಲಿ ಇದ್ದಾರೆ. ಪೊಲೀಸರು ಮಳಿಗೆಗಳನ್ನು ಮುಚ್ಚಿಸುತ್ತಿದ್ದಾರೆ ಎಂಬ ವರದಿ ಬರುತ್ತಿದೆ. ಕೆಲವು ಘೋಷಣೆಗಳಲ್ಲಿ ಸ್ಪಷ್ಟತೆಯೇ ಇಲ್ಲ.

ಅಂದ ಹಾಗೆ, ಮಾರ್ಚ್ 24ನೇ ತಾರೀಕು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ್ದಾರೆ. ಇದು 21 ದಿನ ಇರುತ್ತದೆ. ಈ ಅವಧಿಯಲ್ಲಿ ಬಡವರಿಗೆ, ಕೃಷಿಕರಿಗೆ ವಿವಿಧ ಅಸಹಾಯಕ ವರ್ಗದವರಿಗೆ 1.70 ಕೋಟಿ ರುಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

English summary

"Central Government Economic Package Not Sufficient"

During Corona lock down central government economic package not sufficient, said Nobel awardee, economist Abhijit Banerjee.
Story first published: Wednesday, April 1, 2020, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X