ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ... ಬರೋಬ್ಬರಿ 42 ದಿನಗಳ ರಜೆಯನ್ನು ಪಡೆಯಲು ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ.ಹಾಗಿದ್ರೆ ಯಾವ ಉದ್ದೇಶಕ್ಕಾಗಿ ಈ ರಜೆಯನ್ನು ನೀಡಲಾಗಿದೆ. ಯಾವ ರಜೆ ಇದು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ..
ಹೌದು, ಕೇಂದ್ರ ಸರ್ಕಾರಿ ನೌಕರರು 42 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.2023ರಲ್ಲಿ ಕೇಂದ್ರ ಸಹಾಯಕ ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿಯೂ ಈ ಕುರಿತು ಮಾಹಿತಿಯನ್ನು ನೀಡಿದೆ.

ಅಂಗಾಂಗ ದಾನ ಒಬ್ಬರಿಗೆ ಜೀವದಾನ ನೀಡುವಂತಹ ಬಹುದೊಡ್ಡ ಕಾರ್ಯ. ಆದ್ದರಿಂದ ಅಂಗಾಂಗ ದಾನ ಮಾಡುವ ನೌಕರರಿಗೆ ಈ ರಜೆ ಸಿಗಲಿದೆ.
ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ 42 ದಿನಗಳ ವಿಶೇಷ ಸಾಂದರ್ಭಿಕ ರಜೆ ನೀಡಲಾಗುತ್ತದೆ. ಕೇಂದ್ರ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಲೋಕಸಭೆ ಕಲಾಪದಲ್ಲಿ ಒಂದು ಪ್ರಶ್ನೆಗೆ ಉತ್ತರ ನೀಡುವಾಗ ಈ ನಿಯಮವನ್ನು ಸ್ಪಷ್ಟಪಡಿಸಿದ್ದಾರೆ. ಇದರಿಂದ, ಅಂಗಾಂಗ ದಾನ ಮಾಡುವ ಸರ್ಕಾರಿ ನೌಕರರು ತಮ್ಮ ಆರೋಗ್ಯವನ್ನು ಪುನಃ ಸಧಾರಣೆಗೆಂದು 42 ದಿನಗಳ ರಜೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
ಈ ಕ್ರಮವು ದೇಶದ ಅಂಗಾಂಗ ದಾನ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ, ಮತ್ತು ನೌಕರರಿಗೆ ಇದರಿಂದ ಪ್ರೋತ್ಸಾಹ ದೊರಕಬಹುದು.
ದಾನಿಯ ಅಂಗಾಂಗವನ್ನು ತೆಗೆಯಲು ಶಸ್ತ್ರ ಚಿಕಿತ್ಸೆ ವಿಧಾನ ಯಾವುದೇ ಆಗಿರಲಿ. ಆರ್‌ಎಂಪಿ/ ವೈದ್ಯರ ಶಿಫಾರಸು ಮೇರೆಗೆ ಗರಿಷ್ಠ 42 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
2023ರಲ್ಲಿಯೇ ಈ ಕುರಿತು ಸಿಬ್ಬಂದಿ ಸಚಿವಾಲಯವು ಆದೇಶವನ್ನು ಹೊರಡಿಸಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರ ಅಂಗಾಂಗ ದಾನವನ್ನು ಪ್ರೋತ್ಸಾಹಿಸುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರಿ ನೌಕರರು ಅಂಗಾಂಗ ದಾನ ಮಾಡಿದರೆ ಅವರಿಗೆ ವಿಶೇಷವಾದ ರಜೆಯನ್ನು ನೀಡುತ್ತಿದೆ. ಈ ಕುರಿತು ಲೋಕಸಭೆಯ ಕಲಾಪದಲ್ಲಿಯೇ ಸ್ಪಷ್ಟಪಡಿಸಲಾಗಿದೆ.
ಈ ಆದೇಶವು ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ 42 ದಿನಗಳ ವಿಶೇಷ ಸಾಂದರ್ಭಿಕ ರಜೆ ನೀಡುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ಆದೇಶದ ಪ್ರಕಾರ ಆಸ್ಪತ್ರೆಗೆ ದಾಖಲಾದ ದಿನದಿಂದ ಈ ರಜೆ ಸಾಮಾನ್ಯವಾಗಿ ಒಂದೇ ಬಾರಿಗೆ ನೀಡಲಾಗುತ್ತದೆ.
ಅಗತ್ಯವಿದ್ದರೆ, ಸರ್ಕಾರಿ-ನೋಂದಾಯಿತ ವೈದ್ಯರು ಅಥವಾ ವೈದ್ಯರ ಶಿಫಾರಸು ಪ್ರಕಾರ, ಶಸ್ತ್ರಚಿಕಿತ್ಸೆಗೆ ಗರಿಷ್ಠ ಒಂದು ವಾರದ ಮೊದಲು ಸಹ ರಜೆಯನ್ನು ಪಡೆಯಬಹುದು.
ಈ ನಿರ್ಧಾರವು ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರದ ನೌಕರರಿಗೆ ತಮ್ಮ ಆರೋಗ್ಯದ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ಪೂರ್ವಾಪರ ಪ್ರಕ್ರಿಯೆಗಳ ವೇಳೆ ನಿರ್ವಹಣೆಯ ಸುಲಭತೆಯನ್ನು ಒದಗಿಸುತ್ತದೆ.
ಇದು ಅಂಗಾಂಗ ದಾನ ಪ್ರೋತ್ಸಾಹಿಸುವ ಒಂದು ಮಹತ್ವಪೂರ್ಣ ಹೆಜ್ಜೆ ಆಗಿದ್ದು, ಜನರಲ್ಲಿ ಅಂಗಾಂಗ ದಾನ ಮಾಡುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಸಹಾಯ ಮಾಡಬಹುದು.
ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್' ಎಂಬ ಕಾರ್ಯಕ್ರಮದ 99ನೇ ಭಾಷಣದಲ್ಲಿ ಅವರು ಅಂಗಾಂಗ ದಾನ ಕುರಿತು ಮಹತ್ವಪೂರ್ಣ ವಿಚಾರಗಳನ್ನು ಹಂಚಿಕೊಂಡಿದ್ದರು. ಅವರು, ಬೇರೆಯವರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ಸಾವಿರಾರು ಜನರ ಧೈರ್ಯ ಮತ್ತು ದಯಾಳುವ ಬಗ್ಗೆ ಚರ್ಚಿಸಿದರು.
ಅಂಗಾಂಗ ದಾನದ ಬಗ್ಗೆ ಮೋದಿ ಮಾತು
ಕೆಲವು ಜನರು ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಪೂರ್ಣ ಪಿಂಚಣಿಯನ್ನೇ ಮುಡಿಪಾಗಿಟ್ಟಿದ್ದಾರೆ.
ಇನ್ನೂ ಹಲವರು ತಮ್ಮ ಜೀವನದ ಸಂಪೂರ್ಣ ಗಳಿಕೆಯನ್ನು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಸೇವೆಗೆ ಸಮರ್ಪಿಸುತ್ತಿದ್ದಾರೆ. ಈವತ್ತಿನ ಸಂದರ್ಭದಲ್ಲಿ,ಇಂತಹ ಮಹಾನ್ ಮಾನವೀಯ ಕೃತಿಗಳನ್ನು ಅನೇಕ ಜನರು ಮಾಡುತ್ತಿದ್ದಾರೆ, ಮತ್ತು ಇದು ಅಂಗಾಂಗ ದಾನ ಅಥವಾ ಇತರ ಸಾಮಾಜಿಕ ಸೇವೆಗಳ ಮೂಲಕ ಮತ್ತಷ್ಟು ಜಾಗೃತಿ ಮೂಡಿಸುವುದಕ್ಕೆ ಕಾರಣವಾಗುತ್ತಿದೆ.
ನಾವು ನಮ್ಮ ಸಹಾನುಭೂತಿ ಮತ್ತು ಸೇವಾ ಮನೋಭಾವವನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಸೂಕ್ತ ಬದಲಾವಣೆ ತರಲು ಹೇಗೆ ಸಹಾಯ ಮಾಡಬಹುದು ಎಂದು ಹೇಳಿದ್ದಾರೆ.


Click it and Unblock the Notifications