For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರಿ ನೌಕರರಿಗೆ ವಿಡಿಎ ಹೆಚ್ಚಳ: 1.50 ಕೋಟಿ ಜನರಿಗೆ ಅನುಕೂಲ

|

ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ವೇರಿಯಬಲ್ ಡಿಯರ್‌ನೆಸ್‌ ಅಲೋವೆನ್ಸ್ (ವಿಡಿಎ) ಅನ್ನು ತಿಂಗಳಿಗೆ 105 ರೂಪಾಯಿಗಳಿಂದ 210 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಶುಕ್ರವಾರ ಘೋಷಿಸಿದೆ. ಈ ಪರಿಷ್ಕೃತ ಅಲೋವೆನ್ಸ್‌ ಏಪ್ರಿಲ್ 1, 2021ರಿಂದಲೇ ಅನ್ವಯವಾಗುತ್ತದೆ.

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂಥ ನಿರ್ದಿಷ್ಟ ಸಂಸ್ಥೆಗಳ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಇದು ಅನ್ವಯ ಆಗುತ್ತದೆ. ರೈಲ್ವೆ ಆಡಳಿತ, ಗಣಿಗಾರಿಕೆ, ತೈಲ ವಲಯ, ಪ್ರಮುಖ ಬಂದರು, ಕೇಂದ್ರ ಸರ್ಕಾರದಿಂದ ಸ್ಥಾಪನೆಯಾದ ನಿಗಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ವಿಡಿಎ ಹೆಚ್ಚಳವಾಗಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ವಿಡಿಎ ಹೆಚ್ಚಳ: 1.50 ಕೋಟಿ ಜನರಿಗೆ ಅನ್ವಯ

ಪಿಟಿಐ ಜೊತೆ ಮಾತನಾಡಿದ ಮುಖ್ಯ ಕಾರ್ಮಿಕ ಆಯುಕ್ತ ಸೆಂಟ್ರಲ್ (ಸಿಎಲ್‌ಸಿ) ಡಿಪಿಎಸ್ ನೇಗಿ, " ಕೇಂದ್ರ ವಲಯದ ಕಾರ್ಮಿಕರಿಗೆ ತಿಂಗಳಿಗೆ 105 ರಿಂದ 210 ರೂಪಾಯಿವರೆಗೆ ವಿಡಿಎ ಹೆಚ್ಚಳವಾಗುತ್ತದೆ" ಎಂದು ಹೇಳಿದರು.

2021ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವೇರಿಯಬಲ್ ಡಿಯರ್‌ನೆಸ್‌ ಅಲೋವೆನ್ಸ್ (ವಿಡಿಎ) ದರವನ್ನು ತಿಳಿಸಿದೆ ಮತ್ತು ಪರಿಷ್ಕರಿಸಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈಗಿನ ಪರಿಷ್ಕರಣೆಯಿಂದ ದೇಶದಲ್ಲಿ ಕೇಂದ್ರ ಸರ್ಕಾರದ ವಿವಿಧ ವಲಯಗಳ ಅಡಿಯಲ್ಲಿ ಬರುವ 1.50 ಕೋಟಿ ಕಾರ್ಮಿಕರಿಗೆ ನೆರವಾಗುತ್ತದೆ. ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಈ ಕಾರ್ಮಿಕರಿಗೆ ವಿಡಿಎ ಹೆಚ್ಚಳದಿಂದ ಅನುಕೂಲ ಆಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವರ್ ಹೇಳಿದ್ದಾರೆ.

English summary

Central Govt Hikes Variable DA For Central Govt Employees

The Ministry of Labour & Employment on Friday announced a hike in variable dearness allowance for more than 1.5 crore workers in the central sphere by Rs 105 to Rs 210 per month
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X