ಕೋವಿಡ್-19 ಚಿಕಿತ್ಸೆಗಾಗಿ 2 ಲಕ್ಷಕ್ಕಿಂತ ಹೆಚ್ಚಿನ ಹಣ ಪಾವತಿಗೆ ಅವಕಾಶ

ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಪಾವತಿಸಲು ಹಣಕಾಸು ಸಚಿವಾಲಯ ಸೋಮವಾರ ತಡರಾತ್ರಿ ಅಧಿಸೂಚನೆಯನ್ನು ಹೊರಡಿಸಿತು. ಆದರೆ ಈ ಅಧಿಸೂಚನೆಯಲ್ಲಿ ಕೆಲವು ದೋಷಗಳಿದ್ದು, ಇದೀಗ ಸರಿಪಡಿಸಲಾಗಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕೆಲವು ಗಂಟೆಗಳ ನಂತರ ಅಧಿಸೂಚನೆಯಲ್ಲಿರುವ ದೋಷವನ್ನು ಸರಿಪಡಿಸಲಾಗಿದೆ. ಈ ಮೂಲಕ ಆಸ್ಪತ್ರೆಗಳು ಅಥವಾ ರೋಗಿಗಳು ಚಿಕಿತ್ಸಾ ವೆಚ್ಚವಾಗಿ ಎರಡು ಲಕ್ಷ ಹಣ ಪಾವತಿಗೆ ಅವಕಾಶ ನೀಡಲಾಗಿದೆ.

ಕೊರೊನಾ ಚಿಕಿತ್ಸೆಗಾಗಿ 2 ಲಕ್ಷಕ್ಕಿಂತ ಹೆಚ್ಚಿನ ಹಣ ಪಾವತಿಗೆ ಅವಕಾಶ

ಮೇ 7ರಂದು ಆದಾಯ ತೆರಿಗೆ ಕಾನೂನಿನಡಿಯಲ್ಲಿ ಹೊರಡಿಸಲಾದ ಅಧಿಸೂಚನೆ ಹಾಗೂ ಕೇಂದ್ರದ ಭರವಸೆಯ ಆಧಾರದ ಮೇಲೆ, ಈ ವಿಷಯವನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ ಎಂದು ಈ ಪ್ರಕರಣದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದ ವಕೀಲ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಈ ಅಧಿಸೂಚನೆಯು ಬ್ಯಾಂಕಿಂಗ್ ಅಥವಾ ಎಲೆಕ್ಟ್ರಾನಿಕ್ ಪಾವತಿಗಳ ಪರಿಚಯವಿಲ್ಲದ ರೋಗಿಗಳ ಕುಟುಂಬಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ತೆರಿಗೆ ಅಧಿಕಾರಿಗಳು ಸಂಗ್ರಹಿಸಿದ ಡೇಟಾವನ್ನು ಬಿಲ್ ಪಾವತಿಸುವವರ ಆದಾಯದ ಮೂಲಗಳನ್ನು ಪರಿಶೀಲಿಸಲು ಬಳಸಬಹುದು ಎಂದು ಸಂಸ್ಥೆ ತಿಳಿಸಿದೆ.

ಆಸ್ಪತ್ರೆಗಳು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನಗದು ರೂಪದಲ್ಲಿಯೇ ಬಿಲ್‌ ಪಾವತಿಸಲು ಒತ್ತಾಯಿಸುತ್ತಿರುವ ದೂರು ಬಂದಿರುವ ಹಿನ್ನೆಲೆಯಲ್ಲಿ ಅನೇಕ ಆಸ್ಪತ್ರೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ವಹಿಸಿದೆ. ಹಲವಾರು ಆಸ್ಪತ್ರೆಗಳು ನಗದು ಬಿಟ್ಟು ಬೇರೆ ರೂಪದಲ್ಲಿಹಣ ಸ್ವೀಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಸರಕಾರ ರೋಗಿಗಳ ಅನುಕೂಲಕ್ಕಾಗಿ ಮೇ 31ರ ತನಕ ಆಸ್ಪತ್ರೆಗಳಲ್ಲಿ 2 ಲಕ್ಷ ರೂ.ಗಿಂತಲೂ ಹೆಚ್ಚಿನ ಮೌಲ್ಯದ ಬಿಲ್‌ ಪಾವತಿಯನ್ನೂ ನಗದು ರೂಪದಲ್ಲಿ ನೀಡಬಹುದು ಎಂದು ವಿನಾಯಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+