ಐಟಿ ಉದ್ಯೋಗಿಗಳ ಕಲ್ಯಾಣ ಸಂಘ ಕಳವಳ ವ್ಯಕ್ತಪಡಿಸಿರುವುದನ್ನು ಅನುಸರಿಸಿ,ಇನ್ಫೋಸಿಸ್ ಮೈಸೂರಿನ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಸಾಮೂಹಿಕ ವಜಾಗೊಳಿಸುವಿಕೆ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ಹೌದು,ಇನ್ಫೋಸಿಸ್‌ನಿಂದ ಸಾಮೂಹಿಕ ವಜಾಗೊಳಿಸುವಿಕೆಗಳ ಕುರಿತು ಸ್ವತಂತ್ರ ತಂತ್ರಜ್ಞಾನ ನೌಕರರ ಒಕ್ಕೂಟವು ಸಲ್ಲಿಸಿದ ದೂರನ್ನು ಉಲ್ಲೇಖಿಸಿದ್ದಾರೆ.ಕೇಂದ್ರ ಕಾರ್ಮಿಕ ಸಚಿವಾಲಯವು ಗುರುವಾರ ಕರ್ನಾಟಕ ಕಾರ್ಮಿಕ ಇಲಾಖೆಗೆ ವಿವಾದವನ್ನು ಪರಿಹರಿಸಲು ತುರ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನವನ್ನು ನೀಡಿದೆ

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ರಾಜ್ಯ ಕಾರ್ಮಿಕ ಇಲಾಖೆಗೆ ಈ ಸಮಸ್ಯೆ ಪರಿಹರಿಸಲು "ತುರ್ತು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.
ಐಟಿ ನೌಕರರ ಕಲ್ಯಾಣ ಸಂಘವಾದ ಎನ್‌ಐಟಿಇಎಸ್ ದೂರಿನ ಮೇರೆಗೆ ಈ ಸೂಚನೆಯನ್ನು ನೀಡಿದೆ. ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಸಾಮೂಹಿಕ ವಜಾ ವಿಚಾರದಲ್ಲಿ ಕರ್ನಾಟಕ ಮಧ್ಯಪ್ರವೇಶಿಸಿ ವಿವಾದವನ್ನು ಪರಿಹರಿಸಬೇಕು ನಿರ್ದೇಶನ ನೀಡಿದೆ. ಅಲ್ಲದೆ ದೂರುದಾರರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ರಾಜ್ಯ ಕಾರ್ಮಿಕ ಇಲಾಖೆಗೆ ಈ ಸಮಸ್ಯೆ ಪರಿಹರಿಸಲು ತುರ್ತು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಐಟಿ ನೌಕರರ ಕಲ್ಯಾಣ ಸಂಘವಾದ ಎನ್‌ಐಟಿಇಎಸ್ ದೂರಿನ ಮೇರೆಗೆ ಈ ಸೂಚನೆಯನ್ನು ನೀಡಿದೆ.
ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಸಾಮೂಹಿಕ ವಜಾ ವಿಚಾರದಲ್ಲಿ ಕರ್ನಾಟಕ ಮಧ್ಯಪ್ರವೇಶಿಸಿ ವಿವಾದವನ್ನು ಪರಿಹರಿಸಬೇಕು ನಿರ್ದೇಶನ ನೀಡಿದೆ. ಅಲ್ಲದೆ ದೂರುದಾರರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಕಳೆದ ಶುಕ್ರವಾರ ತರಬೇತಿ ಪಡೆದ ಸುಮಾರು 400 ನೌಕರರನ್ನು ಇನ್ಫೋಸಿಸ್ ವಜಾಗೊಳಿಸಿದೆ. ಈ ವಜಾಗೊಳಿಸುವಿಕೆಯನ್ನು 'ಅಕ್ರಮ, ಅನೈತಿಕ' ಎಂದು ಜರೆದಿರುವ ಎನ್‌ಐಟಿಇಎಸ್, ಇದು 'ಕಾರ್ಮಿಕ ಕಾನೂನುಗಳ ಉಲ್ಲಂಘನೆ' ಎಂದು ಕಿಡಿಕಾರಿದೆ.
ಕಳೆದ ವಾರ ಐಟಿ ಸೇವೆಗಳ ದೈತ್ಯ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ತಿಂಗಳುಗಟ್ಟಲೆ ಫೌಂಡೇಶನಲ್ ತರಬೇತಿ ಪಡೆದ 300 ಕ್ಕೂ ಹೆಚ್ಚು ಹೊಸಬರನ್ನು ವಜಾಗೊಳಿಸಿರುವುದಾಗಿ ಒಪ್ಪಿಕೊಂಡಿತು. ಐಟಿ ವಲಯದ ಒಕ್ಕೂಟವಾದ ನಸೆಂಟ್ ಇನ್ಸರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ನಿಜವಾದ ಸಂಖ್ಯೆ 700 ಎಂದು ವಾದಿಸಿ, ಇನ್ಫೋಸಿಸ್ ವಿರುದ್ಧ ತಕ್ಷಣದ ಹಸ್ತಕ್ಷೇಪ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ಸಲ್ಲಿಸಿತು.
ಇನ್ಫೋಸಿಸ್ ಲಿಮಿಟೆಡ್ ಇತ್ತೀಚೆಗೆ ಕ್ಯಾಂಪಸ್ ನೇಮಕಾತಿ ಮಾಡಿಕೊಂಡವರನ್ನು ಬಲವಂತವಾಗಿ ವಜಾಗೊಳಿಸುವ ಕ್ರಮಕ್ಕೆ ಮುಂದಾಗಿದೆ. ಅವರಿಗೆ ಆಫರ್ ಲೆಟರ್‌ಗಳನ್ನು ನೀಡಿದ ನಂತರ ಈಗಾಗಲೇ ಎರಡು ವರ್ಷಗಳ ಕಾಲ ಸೇರ್ಪಡೆ ವಿಳಂಬವಾಗಿತ್ತು ಎಂದು ದೂರಿನಲ್ಲಿ ಯೂನಿಯನ್ ಹೇಳಿದೆ.
ಡಿಹೆಚ್ ಈ ಹಿಂದೆ ವರದಿ ಮಾಡಿದ್ದ "ಪರಸ್ಪರ ಬೇರ್ಪಡಿಕೆ" ಒಪ್ಪಂದಗಳಿಗೆ ಹೊಸಬರನ್ನು ಸಹಿ ಹಾಕುವಂತೆ ಮಾಡಲಾಯಿತು.
NITES ಸಲ್ಲಿಸಿದ ದೂರಿನಲ್ಲಿ, ಇನ್ಫೋಸಿಸ್ ವಿರುದ್ಧ ತನಿಖೆ ನಡೆಸಬೇಕು, ಈ ರೀತಿಯ ವಜಾಗೊಳಿಸುವಿಕೆಯನ್ನು ತಡೆಯಲು ತಡೆಯಾಜ್ಞೆ ಹೊರಡಿಸಬೇಕು, ವಜಾಗೊಳಿಸಿದ ಎಲ್ಲಾ ಉದ್ಯೋಗಿಗಳನ್ನು ಮರುಸ್ಥಾಪಿಸಬೇಕು ಮತ್ತು 1947 ರ ಕೈಗಾರಿಕಾ ವಿವಾದ ಕಾಯ್ದೆ ಮತ್ತು ಇತರ ಅನ್ವಯವಾಗುವ ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಯ ವಿರುದ್ಧ ದಂಡ ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೇಂದ್ರ ಕಾರ್ಮಿಕ ಸಚಿವಾಲಯವು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಇತರ ಸುದ್ದಿ ವೇದಿಕೆಗಳ ವರದಿಗಳ ಪ್ರಕಾರ, ಕಾರ್ಮಿಕ ಇಲಾಖೆ ಅಧಿಕಾರಿಗಳು ಗುರುವಾರ ತಡರಾತ್ರಿ ಬೆಂಗಳೂರು ಮತ್ತು ಮೈಸೂರು ಕ್ಯಾಂಪಸ್‌ಗಳಿಗೆ ಭೇಟಿ ನೀಡಿದ್ದರು.


Click it and Unblock the Notifications