ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರದ ಮೂಲಕ ಕೃಷಿಕರಿಗೆ ಶುಭಸುದ್ದಿ ನೀಡಿದೆ. ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಶೇಕಡಾ 140 ರಷ್ಟು ಹೆಚ್ಚಿಸಿ ಐತಿಹಾಸಿಕ ಹೆಜ್ಜೆ ಇಟ್ಟಿದೆ.
ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಳದಿಂದಾಗಿ ಹೆಚ್ಚಿನ ರೈತರಿಗೆ ಅನುಕೂಲವಾಗಲಿದ್ದು, ಡಿಎಪಿ ಗೊಬ್ಬರದ ಸಬ್ಸಿಡಿ ಪ್ರತಿ ಚೀಲಕ್ಕೆ 500 ರೂ.ನಿಂದ 1200 ರೂ. ಗೆ ಹೆಚ್ಚಳವಾಗಿದೆ. ಈ ಮೂಲಕ ಒಂದು ಚೀಲ ಡಿಎಪಿ 2400 ರೂ. ಗೆ ಬದಲಾಗಿ 1,200 ರೂಪಾಯಿಗೆ ಸಿಗಲಿದೆ.
ಕೇಂದ್ರ ಸರ್ಕಾರ ಸಬ್ಸಿಡಿ ದರ ಹೆಚ್ಚಳ ಮಾಡುವುದರಿಂದ ಸುಮಾರು 14,775 ಕೋಟಿ ರೂ. ಹೊರೆಯಾಗಲಿದೆ.

"ರೈತರ ಜೀವನವನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಜಾಗತಿಕ ಬೆಲೆಗಳ ಹೆಚ್ಚಳದ ಹೊರತಾಗಿಯೂ, ಗೊಬ್ಬರವನ್ನು ಹಳೆಯ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. " ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಡಿಎಪಿಯ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಗಳ ಏರಿಕೆಯ ಹೊರತಾಗಿಯೂ, ಹಳೆಯ ಚೀಲಕ್ಕೆ 1,200 ರೂ.ಗೆ ಮಾರಾಟ ಮಾಡುವುದನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಡಿಎಪಿಯ ನಿಜವಾದ ಬೆಲೆ ಈಗ ಪ್ರತಿ ಚೀಲಕ್ಕೆ 2,400 ರೂಪಾಯಿಗಳಷ್ಟಿದ್ದು, ರಸಗೊಬ್ಬರ ಕಂಪೆನಿಗಳು 500 ರೂ.ಗಳ ಸಬ್ಸಿಡಿಯನ್ನು ಪರಿಗಣಿಸಿ ಈ ಹಿಂದೆ 1,900 ರೂ.ಗೆ ಮಾರಾಟ ಮಾಡುತ್ತಿದ್ದವು. ಆದರೆ ಈಗ ರೈತರಿಗೆ ಡಿಎಪಿ ಗೊಬ್ಬರ ಪ್ರತಿ ಚೀಲಕ್ಕೆ 1200 ರೂ. ಲಭ್ಯವಾಗಲಿದೆ.


Click it and Unblock the Notifications