ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಸಿದ್ದವಾಗುತ್ತಿದೆ. ಹೌದು, ಬೆಂಗಳೂರಿನ ಪಕ್ಕದಲ್ಲಿರುವ ಹೊಸೂರಿನಲ್ಲಿರುವ ತಮಿಳುನಾಡು ವಿಮಾನ ನಿಲ್ದಾಣದಂತೆ ಪರಂದೂರು ವಿಮಾನ ನಿಲ್ದಾಣವು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI)ಯ ಅನುಮೋದನೆ ಪಡೆಯಲು ಸಜ್ಜಾಗಿದೆ. ಹಾಗಿದ್ರೆ ಎಲ್ಲಿ ವಿಮಾನ ನಿಲ್ದಾಣ ಆರಂಭವಾಗುತ್ತದೆ? ಯಾವಾಗ ಇಲ್ಲಿದೆ ಹೆಚ್ಚಿನ ವಿವರ
ಬೆಂಗಳೂರು ಸಮೀಪದ ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸಲು ತಮಿಳುನಾಡು ಸರ್ಕಾರ ಸಿದ್ಧತೆ ನಡೆಸುತ್ತಿರುವ ಮಧ್ಯೆದಲ್ಲೇ ತಮಿಳುನಾಡಿನ ಪರಂದೂರಿನಲ್ಲೂ ವಿಮಾನ ನಿಲ್ದಾಣಕ್ಕೆ ಕೇಂದ್ರ ಅನುಮೋದನೆ ನೀಡುವ ಹಂತದಲ್ಲಿದೆ ಎಂದು ವರದಿಯಾಗುತ್ತಿದೆ.

ಪರಂದೂರ್ ಹೊರತುಪಡಿಸಿ,ರಾಜಸ್ಥಾನದ ಕೋಟಾ ಮತ್ತು ಒಡಿಶಾದ ಪುರಿಯಲ್ಲಿ ಎರಡು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಿಗೆ ಅನುಮತಿ ನೀಡಲು ಕೇಂದ್ರವು ಪರಿಗಣನೆಗೆ ತೆಗೆದುಕೊಂಡಿದೆ ಎಂಬ ಮಾಹಿತಿ ಇತ್ತೀಚಿನ ವರದಿಯಲ್ಲಿತಿಳಿದು ಬಂದಿದೆ.
ಈಗಲೇ ಪರಂದೂರ್ ವಿಮಾನ ನಿಲ್ದಾಣವು ಚೆನ್ನೈಗೆ ಸೇವೆ ಸಲ್ಲಿಸುವ ಎರಡನೇ ಹಂತದ ಸೌಲಭ್ಯವಾಗಲು ಸಿದ್ಧವಾಗಿದೆ. ಇದು ನಗರದ ಹೆಚ್ಚುತ್ತಿರುವ ಏರ್ ಟ್ರಾಫಿಕ್ ನಿಂದ ನಿರ್ಮಾಣ ಪೂರ್ಣಗೊಳ್ಳಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತದೆ.
ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ನೀತಿಯ ಅಡಿಯಲ್ಲಿ ಪ್ರಗತಿ ಈ ಯೋಜನೆಗಳು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ (GFA) ನೀತಿಯ ಭಾಗವಾಗಿದ್ದು, ಇವುಗಳು ಎರಡು ಹಂತದ ಅನುಮೋದನೆ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಅವುಗಳು ಈ ಕೆಳಗಿನಂತೆ ಇವೆ.
ಸೈಟ್ ಕ್ಲಿಯರೆನ್ಸ್: ತಾಂತ್ರಿಕ ಕಾರ್ಯಸಾಧ್ಯತೆಗಾಗಿ ಉದ್ದೇಶಿತ ಸ್ಥಳವನ್ನು ಗುರುತು ಮಾಡುವುದು.
ತಾತ್ವಿಕ ಅನುಮೋದನೆ: ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಅಧ್ಯಯನವನ್ನು ಒಳಗೊಂಡಂತೆ ವಿವರವಾದ ಯೋಜನಾ ವರದಿಯನ್ನು (DPR) ಪರಿಶೀಲನೆ ಮಾಡುವುದು ಆಗಿದೆ.
ಪರಂದೂರು, ಕೋಟಾ ಮತ್ತು ಪುರಿ ವಿಮಾನ ನಿಲ್ದಾಣಗಳು ಪ್ರಸ್ತುತ ಈ ಪ್ರಕ್ರಿಯೆಯ ಎರಡನೇ ಹಂತದಲ್ಲಿವೆ. ನಾಗರಿಕ ವಿಮಾನಯಾನ ಸಚಿವಾಲಯ (MoCA), ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಗೃಹ ಮತ್ತು ರಕ್ಷಣಾ ಸಚಿವಾಲಯಗಳಂತಹ ಏಜೆನ್ಸಿಗಳ ಜೊತೆಗೆ ಅನುಮೋದನೆಗಳನ್ನು ನೀಡುವ ಬಗ್ಗೆ ಚರ್ಚಿಸುತ್ತಿದೆ ಎಂದು ವರದಿಯಲ್ಲಿ ಮಾಹಿತಿ ತಿಳಿಸಲಾಗಿದೆ.
ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಳು ಸಂಪರ್ಕವನ್ನು ಹೆಚ್ಚಿಸಲು ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚು ಮಾಡುವುದು ಪ್ರಮುಖ ಮೂಲಾಧಾರವಾಗಿದೆ. ಈ ಯೋಜನೆಗಳಿಗೆ ತಾತ್ವಿಕ ಅನುಮೋದನೆಯನ್ನು ಶೀಘ್ರದಲ್ಲೇ ನೀಡಲಾಗುತ್ತದೆ.
ಪರಂದೂರ್ ವಿಮಾನ ನಿಲ್ದಾಣವು ತಮಿಳುನಾಡಿನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಪರಂದೂರ್, ಕೊಟ್ಟಾಯಂ (ಕೇರಳ), ಮತ್ತು ಮಂಡಿ (ಹಿಮಾಚಲ ಪ್ರದೇಶ) ಸೇರಿದಂತೆ ಏಳು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಿಗೆ MoCA ಸೈಟ್ ಕ್ಲಿಯರೆನ್ಸ್ ನೀಡಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಟರ್ಮಿನಲ್‌ಗಾಗಿ ಪ್ರಾಥಮಿಕ ಯೋಜನಾ ವರದಿಯನ್ನು ತಮಿಳುನಾಡು ಸರ್ಕಾರಕ್ಕೆ ಸಲ್ಲಿಕೆ ಮಾಡಿವೆ. ಟರ್ಮಿನಲ್ ಬಹು-ಹಂತದ ಕಾರ್ ಪಾರ್ಕಿಂಗ್ ಮತ್ತು ಕಚೇರಿ ಸ್ಥಳವನ್ನು ಇದು ಒಳಗೊಂಡಿರುತ್ತದೆ. ರಾಷ್ಟ್ರೀಯ ಹೆದ್ದಾರಿ 32 ರ ಉದ್ದಕ್ಕೂ ಎಲಿವೇಟೆಡ್ ಕಾರಿಡಾರ್ ಮೂಲಕ ನೀವು ಪ್ರವೇಶಿಸಬಹುದು.
ಡಿಎಂಕೆ ಸರ್ಕಾರವು ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸಲು ಯೋಜಿಸುತ್ತಿರುವ ಸಮಯದಲ್ಲಿ ಈ ಪರಂದೂರು ಯೋಜನೆಯು ಬಂದಿದೆ. ಮತ್ತೊಂದೆಡೆ, ತಮಿಳುನಾಡು ಸರ್ಕಾರವು ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕಾಗಿ ಎರಡು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಕೂಡ ಮಾಡಿದೆ. ಇದು ಪ್ರದೇಶದ ಬೆಳೆಯುತ್ತಿರುವ ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಅಗತ್ಯಗಳನ್ನು ಪರಿಹರಿಸುತ್ತಾದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಇನ್ನೂ ಸೈಟ್‌ಗಳ ವಿವರವಾದ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಬೇಕಿದೆ.
ಭಾರತದ ವಿಸ್ತರಿಸುತ್ತಿರುವ ಏರ್‌ಪೋರ್ಟ್ ನೆಟ್‌ವರ್ಕ್ GFA ನೀತಿಯಡಿಯಲ್ಲಿ, ಕೇಂದ್ರವು ಇದುವರೆಗೆ 21 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಿಗೆ ತಾತ್ವಿಕ ಅನುಮೋದನೆಯನ್ನು ನೀಡಿದೆ.ಅದರಲ್ಲಿ 12 ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮೋಪಾ (ಗೋವಾ), ಕಣ್ಣೂರು (ಕೇರಳ), ಮತ್ತು ಇಟಾನಗರ (ಅರುಣಾಚಲ ಪ್ರದೇಶ) ವಿಮಾನ ನಿಲ್ದಾಣಗಳು ಸೇರಿವೆ. ಭಾರತವು ಪ್ರಸ್ತುತ 159 ಕಾರ್ಯಾಚರಣಾ ವಿಮಾನ ನಿಲ್ದಾಣಗಳನ್ನು ಹೊಂದಿದೆ, ಇದು ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಸೌಲಭ್ಯಗಳನ್ನು ಒಳಗೊಂಡಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications