ಬೆಂಗಳೂರು, ಜುಲೈ 4: darshan Thoogudeepa ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜುಲೈ 18 ರವರೆಗೂ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆಪ್ತೆ ಪವಿತ್ರಗೌಡ ಹಾಗೂ ಹದಿನೇಳು ಮಂದಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿತ್ತು. ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಕರೆತರಲಾಗಿತ್ತು. ಮತ್ತಷ್ಟು ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಕೊಡಬೇಕು ಎಂದು ಪೊಲೀಸರು ಕೋರಿದ್ದರು.

ಸ್ಥಳ ಪರಿಶೀಲನೆ ಮಾಡಿ ದರ್ಶನ್ ಪ್ರಕರಣದಲ್ಲಿ 83 ಲಕ್ಷ ಹಣವನ್ನು ಜಫ್ತಿ ಮಾಡಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಕೈದಿ ನಂಬರ್ 6106 ಕೊಡಲಾಗಿದೆ. ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿತ್ತು. ನಟ ದರ್ಶನ್, ಪವಿತ್ರಗೌಡ ಹಾಗೂ ಇತರ ಆರೋಪಿಗಳು ಇಲ್ಲಿ ಹಾಜರಾಗಿದ್ದರು. ಇವರ ಪರ ವಕೀಲರು ವಾದ ಮಂಡಿಸಿದರು.
ಅಗ ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಎಸ್‌ಪಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅದನ್ನು ಆರೋಪಿಗಳ ವಕೀಲರಿಗೆ ನೀಡಲಾಯಿತು. ಪ್ರಕರಣದಲ್ಲಿ ಈವರೆಗೆ 17 ಜನರನ್ನು ಬಂಧಿಸಲಾಗಿದೆ. 83 ಲಕ್ಷ ವಶಪಡಿಸಿಕೊಳ್ಳಲಾಗಿದೆ. ತಾಂತ್ರಿಕ ಸಾಕ್ಷ್ಯಗಳಲ್ಲಿ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆ ಆಗಿದೆ. 8, 15 ಹಾಗೂ 17ನೇ ಆರೋಪಿಗಳನ್ನು ಐಡೆಂಟಿಫಿಕೇಶನ್ ಪೇರೆಡ್ ಮಾಡಬೇಕು. ಸೀಜ್ ಮಾಡಿದ ವಾಹನಗಳನ್ನು ಆರ್‌ಟಿಒದಿಮದ ಪರಿಶೀಲನೆ ಮಾಡಬೇಕು ಎಂದು ಕೋರಲಾಯಿತು.
ಆರೋಪಿಗಳ ಮೊಬೈಲ್ ಫೋನ್ ಟಿಟ್ರೀವ್ ಆಗಿದೆ. ಇನ್ನು ಕೆಲವರ ಮೊಬೈಲ್ ರಿಟ್ರೀವ್ ಮಾಡಬೇಕು, ಆರೋಪಿಗಳು ಬೇರೆಯವರ ಹೆಸರಿನಲ್ಲಿ ಸಿಮ್ ಪಡೆದಿದ್ದಾರೆ. ಪ್ರಕರಣದಲ್ಲಿ ಕೆಲವು ಪ್ರತ್ಯಕ್ಷ ಸಾಕ್ಷ್ಯಗಳ ಮಾಡಿಸಬೇಕು. ಆದ್ದರಿಂದ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡದಂತೆ ರಿಮ್ಯಾಂಡ್ ಅಪ್ಲಿಕೇಶನ್ ಮೂಲಕ ಮನವಿ ಮಾಡಲಾಯಿತು. ಆಗ ನ್ಯಾಯಾಲಯ ಮತ್ತೆ 14 ದಿನಗಳ ಬಂಧನ ಅವಧಿ ವಿಸ್ತರಣೆ ಮಾಡಿತು.


Click it and Unblock the Notifications