For Quick Alerts
ALLOW NOTIFICATIONS  
For Daily Alerts

ಕಡಿಮೆ ವೆಚ್ಚದಲ್ಲಿ ಜೀವನ ನಡೆಸಬಹುದಾದ ದೇಶಗಳಿವು; ಭಾರತ ಟಾಪ್ ಒನ್

|

ಈ ಜಗತ್ತಿನ ಹಲವು ದೇಶಗಳಲ್ಲಿ ಜೀವನ ನಡೆಸುವುದು ಪರಮ ದುಬಾರಿ. ಅದರಲ್ಲೂ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇರುವ ನ್ಯೂ ಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ನಗರಗಳಲ್ಲಂತೂ ಜೀವನ ನಿರ್ವಹಣೆ ವೆಚ್ಚ ಸಿಕ್ಕಾಪಟ್ಟೆ ಜಾಸ್ತಿ. ಆದರೆ ಅದಕ್ಕೆ ತದ್ವಿರುದ್ಧವಾಗಿ ಕೆಲವು ದೇಶಗಳಿವೆ. ಇಲ್ಲಿ ಜೀವನ ನಿರ್ವಹಣೆ ದುಬಾರಿ ಅಲ್ಲವೇ ಅಲ್ಲ. ಆ ಕಾರಣಕ್ಕೆ ಎಷ್ಟೋ ಮಂದಿ ಬದುಕಲು ಸಹನೀಯವೂ ಜತೆಗೆ ಬೆಲೆ ಕಡಿಮೆಯೂ ಆದ ದೇಶಗಳಿಗೆ ವಾಸ್ತವ್ಯ ಬದಲಿಸಿಕೊಳ್ಳುತ್ತಾರೆ.

ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ನಡೆಸಬಹುದಾದ ದೇಶಗಳ ಬಗ್ಗೆ ಹಲವು ಸಂಸ್ಥೆಗಳು ಅಂಕಿ- ಸಂಖ್ಯೆಯನ್ನು ಮುಂದಿಟ್ಟುಕೊಂಡು, ಲೆಕ್ಕಾಚಾರ ನಡೆಸಿವೆ. ಅದರಲ್ಲಿ ಒಂದು ಸಂಸ್ಥೆ ಗೋ ಬ್ಯಾಂಕಿಂಗ್ ರೇಟ್ಸ್. ಈ ಸಂಸ್ಥೆಯು ನಾಲ್ಕು ಮಾನದಂಡವನ್ನು ಗಮನದಲ್ಲಿ ಇರಿಸಿಕೊಂಡು ಯಾವ ದೇಶದಲ್ಲಿ ಕಡಿಮೆ ಜೀವನ ನಿರ್ವಹಣಾ ವೆಚ್ಚ ಇದೆ ಎಂಬುದರ ಪಟ್ಟಿ ಮಾಡಿದೆ.

ಆ ನಾಲ್ಕು ಮಾನದಂಡಗಳು ಹೀಗಿವೆ:
ಬಾಡಿಗೆ ಸೂಚ್ಯಂಕ

ಸ್ಥಳೀಯ ಖರೀದಿ ಸಾಮರ್ಥ್ಯ ಸೂಚ್ಯಂಕ

ಗ್ರಾಹಕ ದರ ಸೂಚ್ಯಂಕ

ದಿನಸಿ ಪದಾರ್ಥ ಸೂಚ್ಯಂಕ

ಒಂದು ಸಲ ಮಾಹಿತಿಯನ್ನೆಲ್ಲ ಕಲೆ ಹಾಕಿ, ಆ ನಂತರ ನ್ಯೂಯಾರ್ಕ್ ನಗರದಲ್ಲಿ ಆಗುವ ವೆಚ್ಚವನ್ನು ಅಳತೆಗೋಲಾಗಿ ಮಾಡಿಕೊಂಡು, ಜೀವನ ನಿರ್ವಹಣಾ ವೆಚ್ಚದ ಪರ್ಸೆಂಟೇಜ್ ಲೆಕ್ಕ ಹಾಕಲಾಗಿದೆ. ಅಂದ ಹಾಗೆ ನ್ಯೂ ಯಾರ್ಕ್ ನಗರವನ್ನೇ ಏಕೆ ಅಳತೆಗೋಲಾಗಿ ತೆಗೆದುಕೊಳ್ಳಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ, ಜಗತ್ತಿನಲ್ಲೇ ಅತ್ಯಂತ ದುಬಾರಿ ನಗರ ನ್ಯೂ ಯಾರ್ಕ್.

ಕಡಿಮೆ ವೆಚ್ಚದಲ್ಲಿ ಜೀವನ ನಡೆಸಬಹುದಾದ ದೇಶಗಳಿವು; ಭಾರತ ಟಾಪ್ ಒನ್

ಈ ಸಮೀಕ್ಷೆಯ ದತ್ತಾಂಶದ ಪ್ರಕಾರ, ಭಾರತದಲ್ಲಿ ಜೀವಿಸಲು ಅತ್ಯಂತ ಕಡಿಮೆ ಖರ್ಚಾಗುತ್ತದೆ. ನ್ಯೂ ಯಾರ್ಕ್ ನಗರಕ್ಕೆ ಹೋಲಿಸಿದರೆ ಭಾರತದಲ್ಲಿ ದಿನಸಿ ಪದಾರ್ಥಗಳು 90% ಕಡಿಮೆಯಾದರೆ, ಬಾಡಿಗೆಯು 93% ಕಡಿಮೆ. ಭಾರತದ ನಂತರ ಕಡಿಮೆ ವೆಚ್ಚದಲ್ಲಿ ಜೀವನ ಮಾಡಬಹುದಾದ ದೇಶ ಸೌದಿ ಅರೇಬಿಯಾ.

ಸೌದಿ ಅರೇಬಿಯಾದಲ್ಲಿ ಜೀವನ ನಿರ್ವಹಣೆ ವೆಚ್ಚ ನ್ಯೂ ಯಾರ್ಕ್ ಗಿಂತ ಐವತ್ತು ಪರ್ಸೆಂಟ್ ಕಡಿಮೆ. ಇನ್ನು ಬಾಡಿಗೆ ಎಪ್ಪತ್ತಾರು ಪರ್ಸೆಂಟ್ ಅಗ್ಗ. ಇನ್ನು ಮೂರನೇ ಅತ್ಯಂತ ಕಡಿಮೆ ವೆಚ್ಚದ ದೇಶವೆಂದರೆ ಪಾಕಿಸ್ತಾನ. ನ್ಯೂ ಯಾರ್ಕ್ ನ ಜೀವನ ನಿರ್ವಹಣೆ ವೆಚ್ಚಕ್ಕಿಂತ ಎಪ್ಪತ್ತೈದು ಪರ್ಸೆಂಟ್ ಕಡಿಮೆ. ಇನ್ನು ಬಾಡಿಗೆ ತೊಂಬತ್ನಾಲ್ಕು ಪರ್ಸೆಂಟ್ ಅಗ್ಗ.

2019ರಲ್ಲಿ ಅತ್ಯಂತ ಕಡಿಮೆ ವೆಚ್ಚದ ಜೀವನ ನಿರ್ವಹಣೆ ಇರುವ ದೇಶಗಳು (ಜನಸಂಖ್ಯೆ ಗಣನೆಗೆ ತೆಗೆದುಕೊಳ್ಳಲಾಗಿದೆ)
ದೇಶ ಜೀವನ ನಿರ್ವಹಣಾ ವೆಚ್ಚ ಸೂಚ್ಯಂಕ
ಪಾಕಿಸ್ತಾನ 18.58

ಭಾರತ 25.14

ಟ್ಯುನಿಷಿಯಾ 25.43

ಜಾರ್ಜಿಯಾ 27.78

ಈಜಿಪ್ಟ್ 29.09

ಕೊಲಂಬಿಯಾ 30.25

ಅಲ್ಜೀರಿಯಾ 30.54

ನೇಪಾಳ 30.69

ಉಕ್ರೇನ್ 30.94

ಬಾಂಗ್ಲಾದೇಶ್ 32.62

ಮಾಲ್ಡೋವ 32.63

ಬೊಲಿವಿಯಾ 34.07

ಮೆಕ್ಸಿಕೋ 34.29

ಜಾಂಬಿಯಾ 35.49

ರೊಮೆನಿಯಾ 36.07

ಬೊಸ್ನಿಯಾ ಮತ್ತು ಹರ್ಜೆಗೊವಿನ 36.19

ಮಲೇಷಿಯಾ 39.46

ದಕ್ಷಿಣ ಆಫ್ರಿಕಾ 43.74

ಸೌದಿ ಅರೇಬಿಯಾ 48.71

Read more about: india ಭಾರತ
English summary

Cheapest Cost Of Living Countries In The World; India At Top Spot

Here is the list of cheapest cost of living countries in the world. India at top spot in the list.
Story first published: Wednesday, November 20, 2019, 16:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X